Tue. Apr 8th, 2025

Telangana: ಬಿಯರ್‌ ಕುಡಿಯುವವರೇ ಎಚ್ಚರ – ಬಡ್‌ವೈಸರ್ ಬಿಯರ್ ಬಾಟಲ್‌ನಲ್ಲಿ ಸತ್ತ ಹಲ್ಲಿ ಪತ್ತೆ

ತೆಲಂಗಾಣ:(ಅ.29) ಐಸ್‌ಕ್ರೀಮ್‌ನಲ್ಲಿ ಮಾನವನ ಬೆರಳು, ರೈಲಿನಲ್ಲಿ ವಿತರಿಸಿದ ಆಹಾರದಲ್ಲಿ ಚೇಳು, ಜ್ಯೂಸ್‌ನಲ್ಲಿ ಜೀವಂತ ಹುಳು ಪತ್ತೆಯಾದ ಘಟನೆ ವೈರಲ್ ಆಗಿತ್ತು. ಇದೀಗ ಇಲ್ಲೊಂದು ಅಂತಹದ್ದೇ ಘಟನೆ ನಡೆದಿದೆ. ತಾನು ಕುಡಿಯಬೇಕೆಂದು ಖರೀದಿಸಿದ ಬಿಯರ್‌ನಲ್ಲಿ ಹಲ್ಲಿ ಇರುವುದನ್ನು ಕಂಡು ಆ ಗ್ರಾಹಕ ಫುಲ್ ಶಾಕ್ ಆಗಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದೆ.

ಇದನ್ನೂ ಓದಿ: 🏮ಉಪ್ಪಿನಂಗಡಿ : ಸವಿ ಇಲೆಕ್ಟ್ರಾನಿಕ್ಸ್‌ ಹಾಗೂ ಸವಿ ಫೂಟ್‌ವೇರ್ ನಲ್ಲಿ ದೀಪಾವಳಿ ಧಮಾಕ

ಈ ಘಟನೆ ತೆಲಂಗಾಣದ ವಿಕಾರಾಬಾದ್ ಜಿಲ್ಲೆಯಲ್ಲಿ ನಡೆದಿದ್ದು, ಗ್ರಾಹಕರೊಬ್ಬರು ವೈನ್‌ಶಾಪ್‌ನಿಂದ ಖರೀದಿಸಿದ ಬಡ್‌ವೈಸರ್ ಬಿಯರ್ ಬಾಟಲ್‌ನಲ್ಲಿ ಸತ್ತ ಹಲ್ಲಿ ಪತ್ತೆಯಾಗಿದೆ. ಈ ಅಚ್ಚರಿಯ ಘಟನೆ ಸುರಕ್ಷತೆ ಮತ್ತು ನೈರ್ಮದ್ಯದ ಬಗ್ಗೆ ಪ್ರಶ್ನೆಯನ್ನು ಹುಟ್ಟು ಹಾಕಿದೆ.

ವರದಿಗಳ ಪ್ರಕಾರ ವಿಕಾರಾಬಾದ್ ಕೆರಳ್ಳಿ ಗ್ರಾಮದ ಲಕ್ಷ್ಮೀಕಾಂತ್ ರೆಡ್ಡಿ ಮತ್ತು ಅನಂತಯ್ಯ ಎಂಬ ಇಬ್ಬರು ವ್ಯಕ್ತಿಗಳು ಪಾರ್ಟಿಯ ಸಲುವಾಗಿ ಧಾರೂರಿನ ವೈನ್ ಶಾಪ್‌ನಿಂದ ಸುಮಾರು 4,000 ರೂಪಾಯಿ ಮೌಲ್ಯದ ಮದ್ಯವನ್ನು ಖರೀದಿಸಿದ್ದರು. ಹೀಗೆ ಎಣ್ಣೆ ಪಾರ್ಟಿಯಲ್ಲಿ ಬಡ್ ವೈಸರ್ ಬಿಯರ್ ಬಾಟಲ್ ಓಪನ್ ಮಾಡಿದಾಗ ಅದರಲ್ಲಿ ಸತ್ತ ಹಲ್ಲಿಯೊಂದು ತೇಳುವುದು ಪತ್ತೆಯಾಗಿದೆ. ಈ ದೃಶ್ಯ ಕಂಡು ಶಾಕ್ ಆಗಿದ್ದಾರೆ. ಕೂಡಲೇ ಮದ್ಯ ಖರೀದಿಸಿದ ಆ ಇಬ್ಬರು ವ್ಯಕ್ತಿಗಳು ಪೊಲೀಸ್ ಠಾಣೆಯಲ್ಲಿ ನಡೆದ ಘಟನೆಯ ಬಗ್ಗೆ ದೂರು ದಾಖಲಿಸಿದ್ದಾರೆ.

YakkatiSowmith ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಬಡ್‌ವೈಸರ್ ಬಿಯರ್ ಬಾಟಲಿಯ ಒಳಗೆ ಸತ್ತ ಹಲ್ಲಿ ತೇಳುತ್ತಿರುವ ದೃಶ್ಯವನ್ನು ವ್ಯಕ್ತಿಯೊಬ್ಬರು ತೋರಿಸುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಈ ಆಘಾತಕಾರಿ ದೃಶ್ಯವನ್ನು ಕಂಡು ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.

Leave a Reply

Your email address will not be published. Required fields are marked *