Wed. Nov 20th, 2024

ಮೇಷ ರಾಶಿ: ಇನ್ನೊಬ್ಬರ ಹಿತ ಚಿಂತನೆಯನ್ನು ಕಡಿಮೆ‌ ಮಾಡಿ, ನಿಮ್ಮ ಬಗ್ಗೆ ಯೋಚಿಸುವಿರಿ. ಕೆಲವು ಸಂಗತಿಗಳ ವಿಚಾರದಲ್ಲಿ ನೀವು ಗೊತ್ತಿಲ್ಲದಂತೆ ಇರುವುದು ಒಳ್ಳೆಯದು. ಸಾಲವನ್ನು ಮಾಡುವ ಸ್ಥಿತಿಯು ಬರಬಹುದು. ತಾಯಿಯ ಕಡೆಯಿಂದ ನಿಮಗೆ ಯಾವ ಸಹಕಾರವೂ ಸಿಗದೇ ಇರುವುದು ಬೇಸರವಾಗಬಹುದು. ನಿರಂತರ ಕೆಲಸದಿಂದ ನಿಮಗೆ ಮುಕ್ತಿಯ ಅವಶ್ಯಕತೆ ಇದೆ. ಸಾಮರಸ್ಯದ ಕೊರತೆಯಿಂದ ದ್ವೇಷವೂ ಹುಟ್ಟಿಕೊಳ್ಳಬಹುದು. ನೀವು ಬಯಸದೇ ಇದ್ದರೂ ಆಪತ್ತಿಗೆ ಸಹಾಯ ದೊರೆಯುವುದು. ವಿದ್ಯಾಭ್ಯಾಸದ ವಿಷಯದಲ್ಲಿ ನಿಮಗೆ ತೃಪ್ತಿ ಇರದು. ಸಿಕ್ಕ ವಸ್ತುವನ್ನು ಯೋಗ್ಯವಾದ ರೀತಿಯಲ್ಲಿ ಇಟ್ಟುಕೊಳ್ಳಿ.

ವೃಷಭ ರಾಶಿ: ಯಾರ ಮಾತನ್ನೂ ಒಮ್ಮೆಲೇ ನಂಬಲಾರಿರಿ. ನಿಮಲ್ಲಿ ಎಲ್ಲವೂ ಇದ್ದರೂ ಕೊರತೆ ಎಂಬಂತೆ ಇರುವಿರಿ. ಹಣವನ್ನು ಎಲ್ಲಿಯೋ ಇಟ್ಟು ಕಳೆದುಕೊಳ್ಳುವಿರಿ. ರಾಜಕೀಯ ವ್ಯಕ್ತಿಗಳು ಸಾಮಾಜಿಕ ಕಾರ್ಯಗಳಿಗೆ ಹಣವನ್ನು ಕೊಡುವರು. ಹೇಳಬೇಕಾದುದನ್ನು ಹೇಳುವ ಕ್ರಮದಲ್ಲಿ ಹೇಳಿ. ಆಪ್ತರನ್ನು ನೀವು ಕಳೆದುಕೊಳ್ಳುವ ಸಂಭವವಿದೆ. ಉದ್ಯೋಗದಲ್ಲಿ ಉಂಟಾದ ಸಣ್ಣ ಅಡ್ಡಿಯನ್ನೇ ದೊಡ್ಡದಾಗಿ ಬಿಂಬಿಸುವಿರಿ. ನಿಮ್ಮವರು ನಿಮ್ಮನ್ನು ಅನ್ಯ ಕೆಲಸಗಳಿಗೆ ಕರೆದುಕೊಂಡು ಹೋಗುವರು. ನಿಮ್ಮ ಪಕ್ಷಾತೀತ ನಿಲುವು ಕೆಲವರಿಗೆ ಇಷ್ಟವಾಗದು. ನೀವು ವಹಿಸಿಕೊಂಡ ನಿರ್ಮಾಣ ಹಂತದ ಕೆಲಸಗಳು ಮಂದಗತಿಯಲ್ಲಿ ಇರಲಿದೆ.

ಮಿಥುನ ರಾಶಿ: ಎಂತಹದ್ದೇ ನೋವಿದ್ದರೂ ಆತ್ಮವಿಶ್ವಾಸದಿಂದ ಮುನ್ನಡೆಯುವುದು ಸೂಕ್ತ. ಇಂದು ನಿಮ್ಮ ಮಕ್ಕಳ ವಿಚಾರದಲ್ಲಿ ನಿಮಗೆ ಬೇಸರವಾಗಲಿದೆ. ವ್ಯಾಪಾರದಲ್ಲಿ ನಿಮ್ಮ ತಂತ್ರಗಾರಿಕೆಯು ಫಲಿಸಬಹುದು. ಅಹಂಕಾರದ ಮಾತುಗಳು ನಿಮಗೆ ಮಾತ್ರ ಖುಷಿ ಕೊಡಬಹುದು. ಸ್ನೇಹಿತರಿಗೆ ಧನಸಹಾಯವನ್ನು ಮಾಡುವುದು ಅನಿವಾರ್ಯವಾದೀತು. ನಿಮ್ಮ ಮಾತು ಬೇರೆಯದೇ ಅರ್ಥವನ್ನು ಕೊಟ್ಟು, ಸಂಬಂಧವನ್ನು ಕೆಡಿಸುವುದು.

ಕರ್ಕಾಟಕ ರಾಶಿ: ನಿಮಗೆ ಅವಶ್ಯಕ ವಸ್ತುಗಳ ಬಗ್ಗೆ ಅತಿಯಾದ ಇಚ್ಛೆ ಇರಲಿದೆ. ನಿಮಗಾಗದವರು ನಿಮ್ಮ ಬಗ್ಗೆ ಸಲ್ಲದ ಆರೋಪಗಳನ್ನು ಮಾಡುವರು. ಇಂದಿನ ಎಲ್ಲ ಪರಿಸ್ಥಿತಿಯೂ ನಿಮ್ಮ ಪರವಾಗಿ ಇರುತ್ತದೆ ಎನ್ನಲಾಗದು. ಬುದ್ಧಿವಂತರೆಂಬಂತೆ ತೋರಿಸಿಕೊಳ್ಳುವಿರಿ. ಅಧಿಕಾರದ ಮಾತುಗಳು ನಿಮ್ಮ ಕೆಲಸಕ್ಕೆ ಬಾರದು. ನಿಮ್ಮ ಸ್ವಭಾವದ ಬದಲಾವಣೆಯು ಎಲ್ಲರಿಗೂ ಅಚ್ಚರಿಯನ್ನು ತಂದೀತು. ಉದ್ಯೋಗದಲ್ಲಿ ವಿರಾಮವನ್ನು ತೆಗೆದುಕೊಳ್ಳುವಿರಿ. ನಿಮ್ಮದಲ್ಲದ್ದನ್ನು ನಿಮ್ಮದೆಂದೇ ವಾದಿಸುವಿರಿ. ತಾಯಿಯ ಜೊತೆ ವಾಗ್ವಾದ ನಡೆಸುವಿರಿ. ನಿಮ್ಮ ಕೆಲಸವನ್ನು ಸರಿಯಾಗಿ ಮಾಡದಿದ್ದರೆ ನಿಮ್ಮನ್ನು ತೆಗೆಯಬಹುದು.

ಸಿಂಹ ರಾಶಿ; ಇಂದು ನಿಮ್ಮ ಮನೆಗೆ ಅನಿರೀಕ್ಷಿತವಾಗಿ ಅತಿಥಿಗಳ ಆಗಮನವಾಗಲಿದೆ. ಹಿತಶತ್ರುಗಳ ಪಿತೂರಿಯು ನಿಮ್ಮ ಶ್ರೇಯಸ್ಸಿಗೆ ತೊಂದರೆಯನ್ನು ಮಾಡೀತು. ಪ್ರಾಮಾಣಿಕತೆಗೆ ಬೆಲೆ ಇಲ್ಲದಂತೆ ಆಗುವುದು. ಉದ್ಯಮದ ವಿಸ್ತಾರ ಮಾಡುವ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆ ನಡೆಸುವಿರಿ. ನೀವು ಪ್ರೀತಿಸುವವರ ಮಾತನ್ನು ತೆಗದುಹಾಕದಿರಿ. ಆರ್ಥಿಕ ನಷ್ಟದ ಆತಂಕವೂ ಇರಲಿದೆ. ಅಪರಿಚಿತರ ವಿದ್ಯಾಭ್ಯಾಸಕ್ಕೆ ನೀವು ಸಹಾಯ ಮಾಡುವಿರಿ. ವೃತ್ತಿಯನ್ನು ಶುದ್ಧವಾಗಿ ಇಟ್ಟುಕೊಳ್ಳಲು ಬಯಸುವಿರಿ. ಒತ್ತಾಯದಿಂದ ಯಾರ ಸ್ನೇಹವನ್ನೂ ಬಯಸುವುದು ಬೇಡ. ಒಳ್ಳೆಯ ಕುಲದ ಸಂಗಾತಿಯನ್ನು ಪಡೆಯುವಿರಿ. ದೇವರಲ್ಲಿ ಶ್ರದ್ಧೆ ಇರಲಿದೆ. ಕೋಪವನ್ನು ಸ್ವಲ್ಪ ಕಡಿಮೆ ಮಾಡಿಕೊಳ್ಳುವುದು ಉತ್ತಮ.

ಕನ್ಯಾ ರಾಶಿ: ನಿಮ್ಮ ಮೇಲೆ ಕಳ್ಳತನದ ಆರೋಪ ಅಕಸ್ಮಾತ್ ಆಗಿಬರಬಹುದು. ರಾಜಕೀಯ ವ್ಯಕ್ತಿಗಳು ತಮ್ಮ ಲಾಭವನ್ನು ಪಡೆದುಕೊಳ್ಳುವರು. ಯಾರನ್ನೋ‌ ನಂಬಿ ನೀವು ಇರುವ ಸಣ್ಣ ಕೆಲಸವನ್ನೂ ಬಿಟ್ಟು ಪಶ್ಚಾತ್ತಾಪಪಡುವಿರಿ. ಹಿತಶತ್ರುಗಳ ಪಿತೂರಿಯು ನಿಮ್ಮ ಏಳ್ಗೆಗೆ ಘಾಸಿ ನೀಡಬಹುದು. ಹೊಗಳಿಕೆಯ ಮೂಲಕ ನೀವು ಕೆಲಸವನ್ನು ಮಾಡಿಸಿಕೊಳ್ಳುವಿರಿ. ವಿವಾಹದ ಬಗ್ಗೆ ಗೊಂದಲ ಇರಲಿದೆ. ನಿಮ್ಮ ಗೌಪ್ಯ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುವರು. ಮನೆಯ ಪರಿಸರವು ಏಕಾಗ್ರತೆಯನ್ನು ಹಾಳುಮಾಡಬಹುದು. ಆದಾಯಕ್ಕೆ ತಕ್ಕಹಾಗೆ ಖರ್ಚಿಗೂ ಸಿದ್ಧವಾಗಿರಬೇಕಾಗುವುದು.

ತುಲಾ ರಾಶಿ: ನೀವು ಪಾಲುದಾರಿಕೆಯನ್ನು ಬಿಡುವ ಬಗ್ಗೆ ಯೋಚಿಸುವಿರಿ. ನೀವು ಆಸ್ತಿಯನ್ನು ಮಾರಾಟ ಮಾಡಲು ಯೋಜಿಸುವಿರಿ. ನಿಮ್ಮ ಗೌರವಕ್ಕೆ ತೊಂದರೆಯಾಗಬಹುದು. ತುರ್ತು ಹಣಕಾಸಿನ ಹೊಂದಾಣಿಕೆಯು ನಿಮಗೆ ಕಷ್ಟವಾಗುವುದು. ನಿಮ್ಮ ಬಗ್ಗೆ ನಿಂದನೆಯ ಮಾತುಗಳು ಕೇಳಿಬರಬಹುದು. ದುರ್ವಿಚಾರಗಳನ್ನು ಯೋಚಿಸಿಬಾರದು ಎಂದುಕೊಂಡರೂ ಅದೇ ಬಂದು ನಿಮ್ಮನ್ನು ಹಿಂಸಿಸಬಹುದು.‌ ಬರಹಗಾರಿಗೆ ಹಿನ್ನಡೆಯಾಗಲಿದೆ. ವ್ಯಾಪಾರಿಗಳಿಗೆ ಅಪೇಕ್ಷಿತ ಲಾಭ ಸಿಗುವ ಸಾಧ್ಯತೆ ಕಡಿಮೆ.

ವೃಶ್ಚಿಕ ರಾಶಿ: ಇಂದು ನಿಮ್ಮ ಪರಿಶ್ರಮದ ಬಗ್ಗೆ ಹೆಚ್ಚು ವಿಶ್ವಾಸವಿರಲಿದೆ. ಸ್ನೇಹಿತರಿಗಾಗಿ ನಿಮ್ಮ ಕಡೆಯಿಂದ ಸಾಲವನ್ನು ಕೊಡಿಸಿದ್ದು ಈಗ ನಿಮ್ಮ ತಲೆಗೇ ಅದು ಸುತ್ತಿಕೊಳ್ಳಲಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ನೀವು ಒಳ್ಳೆಯ ಸುದ್ದಿ ಪಡೆಯುವಿರಿ. ಸರ್ಕಾರಿ ಉದ್ಯೋಗಿಗಳಿಗೆ ಸ್ಥಾನ ಮಾನಗಳು ಹೆಚ್ಚಾಗಬಹುದು. ಅನಪೇಕ್ಷಿತ ಸ್ಥಳದಲ್ಲಿ ನೀವು ಇರಲು ಇಷ್ಟಪಡುವುದಿಲ್ಲ. ಅಗ್ನಿಯ ಭೀತಿಯು ನಿಮ್ಮನ್ನು ಕಾಡಬಹುದು. ಎಲ್ಲ ವಿಚಾರಗಳಿಗೆ ಸಂಗಾತಿಯನ್ನು ಬೊಟ್ಟು ಮಾಡಿ ತೋರಿಸುವುದು ಯೋಗ್ಯವಾಗದು. ಮಕ್ಕಳ ಹಠದ ಸ್ವಭಾವಕ್ಕೆ ನೀವು ಮಣಿಯಲೇ ಬೇಕು.

ಧನು ರಾಶಿ: ಇಂದು ಆರ್ಥಿಕ ಲಾಭದ ಹೊಸ ಮೂಲಗಳು ಗೊತ್ತಾಗುವುದು. ಯಾರದೋ ಮೇಲಿನ ಸಿಟ್ಟನ್ನು ತೀರಿಸಿಕೊಳ್ಳಲು ನಿಮ್ಮವರ ಮೇಲೆ ಸಿಟ್ಟುಗೊಳ್ಳುವಿರಿ. ಎಲ್ಲ ವಿಚಾರದಲ್ಲಿಯೂ ಕಿರಿಕಿರಿ ಆಗಲಿದೆ. ಇಂದು ಸಮಾಧಾನದಿಂದ ಆಲೋಚಿಸುವುದು ನಿಮಗೆ ಬಾರದು.‌ ಬಂಧುಗಳ ಮನೆಗೆ ಹೋಗಲಿದ್ದೀರಿ. ಒಳ್ಳೆಯ ರೀತಿಯಲ್ಲಿ ನಿಮ್ಮನ್ನು ಸತ್ಕರಿಸುವರು. ಸಂಗಾತಿಯ ವಿಚಾರದಲ್ಲಿ ಉದ್ವೇಗಕ್ಕೆ ಒಳಗಾಗುವುದು ಬೇಡ. ನಿಮ್ಮ ಆರ್ಥಿಕ ಸ್ಥಿತಿಯೂ ಕ್ಷೀಣಿಸಬಹುದು. ಸಹೋದರರ ನಡುವೆ ಸಹಬಾಳ್ವೆ ಇರಲಿದೆ. ಪುಣ್ಯಕ್ಷೇತ್ರಗಳಿಗೆ ಹೋಗುವಿರಿ. ಅಂದುಕೊಂಡಿದ್ದನ್ನು ಸಾಧಿಸುವ ಛಲವಿರುವುದು. ನಿಮ್ಮ ವಿದ್ಯೆಯನ್ನು ಅನ್ಯ ಕಾರ್ಯಕ್ಕೆ ಬಳಸಿಕೊಳ್ಳುವಿರಿ.

ಮಕರ ರಾಶಿ: ಇಂದು ನೀವು ಮಾನಸಿಕವಾಗಿ ಹಿಂಸೆಯನ್ನು ಅನುಭವಿಸಲು ಕಷ್ಟವಾಗುವುದು. ಪ್ರಮುಖ ಹಣಕಾಸಿನ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ತಜ್ಞರನ್ನು ಸಂಪರ್ಕಿಸಿ ಅಮೂಲ್ಯವಾದ ಸಲಹೆಗಳನ್ನು ಪಡೆಯಬಹುದು‌. ನೀವು ಖರೀದಿಸಿದ ಸ್ಥಿರಾಸ್ತಿ ದಾಖಲೆಗಳನ್ನು ಸರಿಯಾಗಿ ಆಪ್ತರ ಜೊತೆ ಚರ್ಚಿಸಿ. ಇನ್ನೊಬ್ಬರ ಸಂಕಷ್ಟವನ್ನು ಪರಿಹರಿಸಲು ಉತ್ಸಾಹದಿಂದ ಇರುವಿರಿ. ಮನೆಯಲ್ಲಿ ಸಂತೋಷದ ವಾತಾವರಣವು ಇರಲಿದೆ.

ಕುಂಭ ರಾಶಿ: ಇಂದು ನೀವು ಎಲ್ಲವನ್ನೂ ಶಕ್ತಿಮೀರಿ ಕಾರ್ಯದಲ್ಲಿ ಪ್ರಯತ್ನಶೀಲರಾಗುವಿರಿ. ಸ್ವಪ್ರತಿಷ್ಠೆಯನ್ನು ಬಿಟ್ಟು ನೀವು ಸಹಜವಾಗಿ ಇರಬೇಕಾಗುವುದು. ಕಚೇರಿಯಲ್ಲಿ ಕೆಲವು ಪ್ರಮುಖ ಯೋಜನೆಗಳು ನಿಮ್ಮ ಹೆಗಲೇರಬಹುದು. ಹಿರಿಯ ಸಹೋದ್ಯೋಗಿಗಳು ನಿಮ್ಮ ಕೆಲಸವನ್ನು ಗುರುತಿಸುವರು. ಮನೆಯ ಸದ್ಯರ ಜೊತೆ ಕಾಲಹರಣ ಮಾಡುವಿರಿ. ಶತ್ರುಗಳನ್ನು ನೀವು ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಮಾತು ಹಾಸ್ಯದಿಂದ ಗಂಭೀರರೂಪಕ್ಕೆ ಹೋಗುವುದು. ಅತಿಥಿಸತ್ಕಾರವನ್ನು ನೀವು ಮಾಡುವಿರಿ. ದೈವರಾಧನೆಗೆ ಸ್ವಲ್ಪ ಸಮಯವನ್ನು ಕೊಡುವಿರಿ. ಸರಳವಾದುದನ್ನು ಕ್ಲಿಷ್ಟ ಮಾಡಿಕೊಳ್ಳುವಿರಿ.

ಮೀನ ರಾಶಿ: ಇಂದು ಮಹಿಳೆಯರಿಗೆ ಬಿಡುವಿಲ್ಲದ ಕಾರ್ಯವು ಇರಲಿದೆ. ಗೆಲ್ಲಬೇಕು ಎನ್ನುವ ಉತ್ಕಟ ಇಚ್ಛೆ ಇರಲಿದೆ. ಸೋತರೂ ಹಣವನ್ನು ಉಳಿಸುವಲ್ಲಿ ಯಶಸ್ವಿಯಾಗುತ್ತೀರಿ. ಕೆಲಸ ಮತ್ತು ಕುಟುಂಬದ ನಡುವೆ ಸಮತೋಲನವನ್ನು ಸಾಧಿಸುವುದು ಸುಲಭವಾಗುತ್ತದೆ. ಇತ್ತೀಚೆಗೆ ಭೇಟಿಯಾಗದ ಕುಟುಂಬ ಸದಸ್ಯರೊಬ್ಬರು ಸಿಗಬಹುದು. ಆರ್ಥಿಕ ತೊಂದರೆಯಿಂದ ಮನೆಯ ಕಾರ್ಯವು ಅರ್ಧಕ್ಕೇ ನಿಲ್ಲಬೇಕಾಗಬಹುದು. ಕುಟುಂಬದ ಜೊತೆ ನಿಮ್ಮ ಭವಿಷ್ಯವನ್ನು ಹಂಚಿಕೊಳ್ಳುವಿರಿ. ಅದೃಷ್ಟವನ್ನು ನಂಬಿಕೆ ಕುಳಿತುಕೊಳ್ಳುವುದು ಪ್ರಯೋಜನವಾಗದು. ಸಾಲಗಾರರ‌ ಉಪಟಳ ಹೆಚ್ಚಿರಲಿದೆ. ಬೇಡವಾದ ಸಂಗತಿಗಳನ್ನು ಯಾರಾದರೂ ನಿಮ್ಮ ತಲೆಗೆ ಹಾಕುವರು.

Leave a Reply

Your email address will not be published. Required fields are marked *