Wed. Nov 20th, 2024

Ujire: ಉದಯ ಚಿಕನ್ ಇದರ ನವೀಕೃತ ಕಟ್ಟಡದ ಉದ್ಘಾಟನೆ ಕಾರ್ಯಕ್ರಮ – ತಾಲೂಕಿನ ಮೊಟ್ಟ ಮೊದಲ ಹೈಜೀನಿಕ್ ಚಿಕನ್ ಮಳಿಗೆ

ಉಜಿರೆ:(ಅ.30) ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಕಳೆದ 35 ವರ್ಷಗಳಲ್ಲಿ ಸಂತೆಕಟ್ಟೆಯಲ್ಲಿ ಕಾರ್ಯಾಚರಿಸುತ್ತಿರುವ ಸಮಾಜ ಸೇವಕರಾಗಿರುವ ಕೆ. ರಾಮಚಂದ್ರ ಶೆಟ್ಟಿಯವರ ಉದಯ ಚಿಕನ್ ಇದರ ನವೀಕೃತ ಕಟ್ಟಡದ ಉದ್ಘಾಟನೆ

ಮತ್ತು ತಾಲೂಕಿನ ಮೊಟ್ಟ ಮೊದಲ ಹೈಜೀನಿಕ್ ಚಿಕನ್ ಮಳಿಗೆ ಉದಯ ಚಿಕನ್ ಅಕ್ಟೋಬರ್.30‌ ರಂದು ಶುಭಾರಂಭಗೊಂಡಿತು. ವಿಧಾನ ಪರಿಷತ್ ಶಾಸಕ ಕೆ.ಪ್ರತಾಪ ಸಿಂಹ ನಾಯಕ್ ರವರು ಉದಯ ಚಿಕನ್‌ ಸೆಂಟರ್‌ ನ ನವೀಕೃತ ಕಟ್ಟಡವನ್ನು ಉದ್ಘಾಟನೆ ಮಾಡಿದರು. ಉದ್ಘಾಟನೆ ನೆರವೇರಿಸಿ ಶುಭ ಹಾರೈಸಿದರು.

ಇದನ್ನೂ ಓದಿ: 🔴ಇಳಂತಿಲ : ಶ್ರೀ ಕೇಶವ ಶಿಶು ಮಂದಿರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 1 ಲಕ್ಷ ನೆರವು

ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ ಇದರ ಅನುವಂಶೀಯ ಆಡಳಿತ ಮೊಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯ ರವರು ಉದಯ್ ಚಿಕನ್ ಮಳಿಗೆಗೆ ಶುಭ ಕೋರಿದರು.

ಬಳಿಕ ಉಜಿರೆ ಕಾಲಭೈರವ ಒಕ್ಕಲಿಗರ ಗೌಡರ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಇದರ ಅಧ್ಯಕ್ಷ ರಂಜನ್ ಜಿ.ಗೌಡ ಅವರು ಡೋರ್ ಡೆಲಿವರಿ ವಾಹನ ಕೀ ಹಸ್ತಾಂತರ ಮಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿಧಾನ ಪರಿಷತ್ ಮಾಜಿ ಶಾಸಕ ಕೆ.ಹರೀಶ್ ಕುಮಾರ್, ಲಕ್ಷ್ಮೀ ಇಂಡಸ್ಟ್ರೀಸ್‌ ಕನಸಿನ ಮನೆ ಮಾಲಕರಾದ ಮೋಹನ್ ಕುಮಾರ್, ಉಜಿರೆ ಗ್ರಾ.ಪಂ ಅಧ್ಯಕ್ಷೆ ಉಷಾ ಕಿರಣ್ ಕಾರಂತ್, ಉಜಿರೆ ಶಾರದಾ ಸೇವಾ ಟ್ರಸ್ಟ್ ಅಧ್ಯಕ್ಷ ಭರತ್ ಕುಮಾರ್ ಭಾಗವಹಿಸಿ, ಸಂಸ್ಥೆಗೆ ಶುಭ ಕೋರಿದರು.

ಈ ಸಂದರ್ಭದಲ್ಲಿ ಉಜಿರೆ ಗ್ರಾ.ಪಂ ಉಪಾಧ್ಯಕ್ಷ ರವಿಕುಮಾರ್ ಬರಮೇಲು, ಬಾಲಕೃಷ್ಣ ಶೆಟ್ಟಿ ಉಜಿರೆ, ಉಮೇಶ್ ಶೆಟ್ಟಿ ಉಜಿರೆ, ಸಂಜೀವ ಶೆಟ್ಟಿ ಕುಂಠಿನಿ ,ಪ್ರೀತಮ್ ಡಿ.ಧರ್ಮಸ್ಥಳ, ರಘುರಾಮ ಶೆಟ್ಟಿ, ಸಾಧನಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಾಯತ್ರಿ, ಕಾಲಭೈರವೇಶ್ವರ ಸಹಕಾರಿ ಸಂಘದ ಸಿಇಒ ದಿನೇಶ್ ,ರವೀಂದ್ರ ಶೆಟ್ಟಿ ಬಳಂಜ, ಭರತ್ ಕುಮಾರ್ ಇಂದಬೆಟ್ಟು, ರವಿ ಚಕ್ಕಿತ್ತಾಯ ಹಾಗೂ ಸಂಸ್ಥೆಯ ಮಾಲಕರಾದ ರಾಮಚಂದ್ರ ಶೆಟ್ಟಿ, ಮನೆಯವರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *