ಉಜಿರೆ:(ಅ.30) ಉಜಿರೆಯ ಅನುಗ್ರಹ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ವಿಭಾಗದಲ್ಲಿ ವಾರ್ಷಿಕೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳಿಗೆ “ಕುಕ್ಕಿಂಗ್ ವಿತೌಟ್ ಫೈರ್” ಸ್ಪರ್ಧೆ ಏರ್ಪಡಿಸಲಾಗಿತ್ತು.
ಇದನ್ನೂ ಓದಿ: ⭕ಬೆಂಗಳೂರು : ಐದು ದಿನಗಳ ಹಿಂದೆ ಲವ್ ಮ್ಯಾರೇಜ್ ಆಗಿದ್ದ ನವವಿವಾಹಿತ ಹೃದಯಾಘಾತದಿಂದ ಮೃತ್ಯು!!
ಕಾರ್ಯಕ್ರಮವನ್ನು ಹೈಜೆನಿಕ್ ಮತ್ತು ಶಿಸ್ತಿನಿಂದ ಆಕರ್ಷಕವಾಗಿ ಪ್ರಸ್ತುತಪಡಿಸಲಾಗಿತ್ತು. ವಿದ್ಯಾರ್ಥಿಗಳು ವಿಧವಿಧವಾದ ತಿಂಡಿ ತಿನಿಸುಗಳನ್ನು ಮಾಡುವ ಮೂಲಕ ತೀರ್ಗಾಪರರ ಮನಗೆದ್ದರು.
ಬಗೆ ಬಗೆಯ ತಿಂಡಿಗಳು ನೋಡುಗರ ಕಣ್ಮನ ಸೆಳೆಯುತ್ತಿತ್ತು. ಫ್ರೂಟ್ ಜ್ಯೂಸ್, ಸಲಾಡ್, ತರಕಾರಿಯಿಂದ ಮಾಡಲ್ಪಟ್ಟ ಹಲವು ಬಗೆಯ ತಿಂಡಿಗಳು, ಬ್ರೆಡ್ ಜಾಮ್ ಹೀಗೇ ಹಣ್ಣುಗಳಿಂದ ಅಲಂಕೃತಗೊಂಡ ಹಲವಾರು ಬಗೆಯ ತಿನಿಸುಗಳು ನೋಡುಗರ ಬಾಯಿ ಚಪ್ಪರಿಸುವಂತಿತ್ತು.
ವಿದ್ಯಾರ್ಥಿಗಳು ತಾವೇ ತಮ್ಮ ಕೈಯಾರೆ ಈ ಅಡುಗೆಯನ್ನು ತಯಾರು ಮಾಡಿ ಎಲ್ಲರ ಗಮನ ಸೆಳೆದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಾಂಶುಪಾಲರಾದ ವಂದನೀಯ. ವಿಜಯ್ ಲೋಬೊ ಪ್ರಶಂಸಿದರು.
ಅಲ್ಲದೆ, ಮಕ್ಕಳನ್ನು ಹುರಿದುಂಬಿಸಿ ಪ್ರೋತ್ಸಾಹಿಸಿದ ಪೋಷಕರಿಗೆ ಮತ್ತು ಶಿಕ್ಷಕ ವೃಂದಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.