Wed. Nov 20th, 2024

Uttarakhand: 17 ವರ್ಷದ ಹುಡುಗಿಯ ಹಿಂದೆ ಬಿದ್ದ 20 ಮಂದಿ – ಆಮೇಲೆ ಆದ ಘಟನೆ ಬಗ್ಗೆ ಕೇಳಿದ್ರೆ ನೀವು ಬೆಚ್ಚಿ ಬೀಳೋದು ಗ್ಯಾರಂಟಿ!!

ಉತ್ತರ ಖಂಡ:(ಅ.30) ಎಷ್ಟೇ ಜಾಗೃತಿ ಮೂಡಿಸಿದರು ಕೂಡ ಜನರು ದೈಹಿಕ ಸಂಪರ್ಕದ ಚಟಕ್ಕೆ ಬಿದ್ದು ಎಚ್ಐವಿ ಪಾಸಿಟಿವ್ ಗೆ ತುತ್ತಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅಂತೆಯೇ ಇದೀಗ ಎಚ್ಐವಿ ಗೆ ಸಂಬಂಧಿಸಿದಂತೆ ಉತ್ತರಾಖಂಡದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.

ಇದನ್ನೂ ಓದಿ: 🔴ಪಂಜ: ಸರಕಾರಿ ಪದವಿಪೂರ್ವ ಕಾಲೇಜು ಪಂಜ 2012-13ನೇ ಸಾಲಿನ ಪಿಯುಸಿ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ

ಉತ್ತರ ಖಂಡದ ನೈನಿತಾಲ್ ಜಿಲ್ಲೆಯ ರಾಮನಗರ ಪ್ರದೇಶದಿಂದಲ್ಲಿ ಈ ಘಟನೆ ನಡೆದಿದೆ. ಕೇವಲ ಐದು ತಿಂಗಳಲ್ಲಿ 19 ಮಂದಿಗೆ ಎಚ್ ಐವಿ ಪಾಸಿಟಿವ್ ಆಗಿದ್ದಾರೆ. ಇದ್ರ ಹಿಂದೆ ಒಬ್ಬ 17 ವರ್ಷದ ಹುಡುಗಿ ಕೈವಾಡವಿದೆ ಅಂದ್ರೆ ನಂಬೋದು ಕಷ್ಟ. ಹೌದು, 17 ವರ್ಷದ ಹುಡುಗಿಯೊಬ್ಬಳ ಹುಚ್ಚಾಟಕ್ಕೆ ಒಂದಲ್ಲ ಎರಡಲ್ಲ ಬಾರೋಬ್ಬರಿ 20 ಮಂದಿ ಎಚ್ ಐವಿ ಸೋಂಕಿಗೆ ಒಳಗಾಗಿದ್ದಾರೆ. ವಿಷ್ಯ ಬಹಿರಂಗವಾಗ್ತಿದ್ದಂತೆ ಅಲ್ಲಿನ ಪರಿಸ್ಥಿತಿ ಹದಗೆಟ್ಟಿದೆ. ಜನರು ಆತಂಕಕ್ಕೊಳಗಾಗಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂದಿಸಿದಂತೆ ತನಿಖೆ ಶುರುವಾಗಿದೆ.

ಅಸಲಿಗೆ ಆಗಿದ್ದೇನು?
ಈ 17ರ ಹುಡುಗಿ ಡ್ರಗ್ಸ್ ಚಟಕ್ಕೆ ದಾಸಳಾಗಿದ್ದಳು. ಡ್ರಗ್ಸ್ ಖರೀದಿಗೆ ಹಣವಿಲ್ಲ ಎಂದಾಗ ಪುರುಷರನ್ನು ತನ್ನ ಬುಟ್ಟಿಗೆ ಬೀಳಿಸಿಕೊಳ್ಳುತ್ತಿದ್ದಳು. ಆಕೆ ಆಮಿಷಕ್ಕೆ ಮರುಳಾಗುವ ಹುಡುಗರು ಈಗ ಪರಿತಪಿಸುವಂತಾಗಿದೆ. ಹುಡುಗಿ ಐದು ತಿಂಗಳಲ್ಲಿ ಅನೇಕ ಪುರುಷರ ಸಂಪರ್ಕಕ್ಕೆ ಬಂದಿದ್ದಾಳೆ. ಹೀಗಿರುವಾಗ ಹಣಕ್ಕಾಗಿ ಆಕೆ ಮಾಡ್ತಿದ್ದ ಕೆಲಸವನ್ನು ಸಮಾಲೋಚಕರ ಮುಂದೆ ಹೇಳಿದ್ದಾಳೆ. ಹುಡುಗಿಗೆ ಆರೋಗ್ಯ ಸರಿಯಿಲ್ಲ ಎಂಬುದು ಆಕೆ ಸಂಪರ್ಕಕ್ಕೆ ಬಂದ ಜನರಿಗೆ ತಿಳಿದಿರಲಿಲ್ಲ. ಆದ್ರೆ ಆಕೆ ಹೆಸರು ಬಹಿರಂಗವಾಗ್ತಿದ್ದಂತೆ ಸಂಪರ್ಕಕ್ಕೆ ಬಂದವರು ಆಘಾತಕ್ಕೊಳಗಾಗಿದ್ದಾರೆ.

ನಂತರ ಎಲ್ಲರೂ ಪರೀಕ್ಷೆಗೆ ಮುಂದಾದಾಗ ಎಚ್ ಐವಿ ಪಾಸಿಟಿವ್ ಆಗಿರೋದು ಅವರಿಗೆ ತಿಳಿದಿದೆ. ಅದ್ರಲ್ಲಿ ಕೆಲವರು ವಿವಾಹಿತರಿದ್ದಾರೆ. ಹಾಗಾಗಿ ಅವರ ಪತ್ನಿಯರಿಗೂ ಎಚ್ ಐವಿ ಸೋಂಕು ತಗುಲಿದೆ. ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, ಎಚ್ಚರದಿಂದಿರುವಂತೆ ಸ್ಥಳೀಯರಿಗೆ ಸೂಚನೆ ನೀಡಲಾಗಿದೆ.

Leave a Reply

Your email address will not be published. Required fields are marked *