ಬೆಳ್ತಂಗಡಿ : (ಅ.31)ನಕಲಿ ಸ್ಕ್ಯಾನರ್ ಬಳಸಿ ಮೊಬೈಲ್ ಕಳ್ಳತನ ನಡೆಸಿರುವ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೇಟೆಯಲ್ಲಿರುವ ಅನುರಾಗ್ ಕಾಂಪ್ಲೆಕ್ಸ್ ನ ಸ್ವಾತಿ ಮೊಬೈಲ್ ಸೆಂಟರ್ ನಲ್ಲಿ ನಡೆದಿದೆ.
ಈ ಕುರಿತು ಸ್ವಾತಿ ಮೊಬೈಲ್ ಸೆಂಟರ್ ನ ಮಾಲೀಕರಾಗಿರುವ ಹರೀಶ್ ಅವರು ಯು ಪ್ಲಸ್ ವಾಹಿನಿಗೆ ಪ್ರತಿಕ್ರಿಯೆ ನೀಡಿದ್ದು , ಬುಧವಾರ ಸಂಜೆ 6 ಗಂಟೆಯ ವೇಳೆ ತುಳು ಭಾಷೆ ಮಾತನಾಡುವ ಗ್ರಾಹಕರೊಬ್ಬರು ನಮ್ಮ ಮೊಬೈಲ್ ಶಾಪ್ ಗೆ ಬಂದಿದ್ದರು. ನಾವು ಸಾಮಾನ್ಯ ಗ್ರಾಹಕರಂತೆಯೇ ಅವರಿಗೂ ಬಹಳ ಚೆನ್ನಾಗಿಯೇ ಸೇವೆಯನ್ನು ನೀಡಿದ್ದೇವು.
ಬೇರೆ ಬೇರೆ ಕಂಪನಿಯ ಮೊಬೈಲ್ ಗಳನ್ನು ತೋರಿಸುವಂತೆ ಅವರು ಹೇಳಿದರು. ಕೊನೆಗೆ 15 ಸಾವಿರ ರೂಪಾಯಿ ಮೌಲ್ಯದ ವಿವೋ 28ಇ ಮೊಬೈಲ್ ನ್ನು ಸಾಕು ಅಂತ ಹೇಳಿದ್ದಾನೆ. ಬಳಿಕ ಅಮೌಂಟ್ ಅನ್ನು ಗೂಗಲ್ ಸ್ಕ್ಯಾನರ್ ಮೂಲಕ ಮಾಡುತ್ತೇನೆ ಅಂತ ಹೇಳಿದ್ದಾನೆ.
ಯಾವೊದೋ ಒಂದು ನಕಲಿ ಆ್ಯಪ್ ನಲ್ಲಿ ಸ್ಕ್ಯಾನ್ ಮಾಡಿ ಆತ ಮೋಸದಿಂದ ಮೊಬೈಲ್ ಅನ್ನು ತೆಗೆದುಕೊಂಡು ಹೋಗಿದ್ದಾನೆ. ಈ ಮಧ್ಯೆ ನಮಗೆ ಆ ಗ್ರಾಹಕ ಮೋಸ ಮಾಡಿರುವುದು ಗೊತ್ತಾಗಿದೆ.
ಆತ ವಿಳಾಸ ಮತ್ತೆ ಫೋನ್ ನಂಬರ್ ನಕಲಿ ಅನ್ನುವುದು ನಮಗೆ ಗೊತ್ತಾಗಿದೆ. ಕಳ್ಳ ಮೊಬೈಲ್ ಅಂಗಡಿಗೆ ಬಂದಿರುವುದರ ಕುರಿತು ನಮಗೆ ಅಂಗಡಿಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿ ಕಳ್ಳನನ್ನು ಪತ್ತೆ ಹಚ್ಚುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.