ಮಂಗಳೂರು:(ಅ.31) ಭೂತಾನ್ ದೇಶದ ಪಾರುವಿನಲ್ಲಿ ಸಂತ ರೀತಾ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಶ್ರೀಮತಿ ರೇಖಾ ಸುದೇಶ್ ರಾವ್ ಮಂಗಳಾದೇವಿ ಮಂಗಳೂರು ಇವರ ಮೂರನೇ ಕವನ ಸಂಕಲನ ಸಪ್ತ ವರ್ಣ ಗಣ್ಯ ವ್ಯಕ್ತಿಗಳ ಸಮ್ಮುಖದಲ್ಲಿ ಲೋಕಾರ್ಪಣೆಗೊಂಡಿತು.
ಇದನ್ನೂ ಓದಿ: ⭕Bigg Boss -11 : ಗೌತಮಿ ಮಲಗಿದ್ದಾಗ ಧನರಾಜ್ ಆಚಾರ್ ಮಾಡಿದ್ದೇನು ಗೊತ್ತಾ?!
ಕನ್ನಡದ ಕಂಪು ಪಸರಿಸುವ ನಿಟ್ಟಿನಲ್ಲಿ ಶ್ರೀಯುತ ಪ್ರದೀಪ್ ಕುಮಾರ್ ಇವರ ಕಥಾ ಬಿಂದು ಸಾಹಿತ್ಯ ವೇದಿಕೆಯ ಮುಖೇನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶ್ರೀಮತಿ ರೇಖಾ ಸುದೇಶ್ ರಾವ್ ಇವರು ವೃತ್ತಿಯಲ್ಲಿ ಶಿಕ್ಷಕಿಯಾಗಿ ಪ್ರವೃತ್ತಿಯಲ್ಲಿ ಸಂಘ ಸಂಸ್ಥೆ ಭಜನೆ ಸಾಹಿತ್ಯ ವೇದಿಕೆಯ ಪದಾಧಿಕಾರಿಯಾಗಿ ಸಕ್ರಿಯವಾಗಿ ದೇಶ ವಿದೇಶದ ವಿವಿಧ ಭಾಗಗಳಲ್ಲಿ ನಿರಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಹಲವೆಡೆ ನಿರೂಪಣೆಯನ್ನುಗೈದಿರುವರು. ಅನೇಕ ಸಮಾಜಮುಖಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಇವರು ಪ್ರಶಂಸೆಗೂ ಪಾತ್ರರಾಗಿದ್ದಾರೆ. ಇವರ ಮೊದಲ ಕೃತಿ ಸಂಕಲನ ನವ ಚೇತನ, ದ್ವಿತೀಯ ಹೊಂಬೆಳಕು, ತೃತೀಯ ಸಪ್ತ ವರ್ಣ. ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಗಳಿಸಿರುವರು.
ಪ್ರಶಸ್ತಿಗಳಿಗೂ ಭಾಜನರಾಗಿರುವರು. ಚುಟುಕು, ಕಥೆ, ಕವನ, ನಗೆಹನಿ, ಗಝಲ್, ನ್ಯಾನೋ ಕಥೆಗಳು, ಲೇಖನ ,ಪ್ರವಾಸ ಕಥನ ಇತ್ಯಾದಿ ಅಲ್ಲದೆ ಹಾಡುಗಳನ್ನು ಹಾಡುವುದು ಇವರ ಹವ್ಯಾಸವಾಗಿದೆ.
ಚಿಕ್ಕಂದಿನಿಂದಲೇ ಬರಹದಲ್ಲಿ ತೊಡಗಿಸಿಕೊಂಡ ಇವರು ತಮ್ಮ ಕಾಲೇಜು ದಿನಗಳಲ್ಲೂ ಕೆನರಾ ಕಾಲೇಜ್ ಮಂಗಳೂರು ಇಲ್ಲಿ ತಮ್ಮ ಬರಹ ಸ್ಪರ್ಧೆಗೆ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ವಿದ್ಯಾರ್ಥಿಗಳ ಹತ್ತು ದಿನದ ಶಿಬಿರದ ಕುರಿತು ಬರೆದ ಕವನ ಅಂತರ್ ಕಾಲೇಜು ಮಟ್ಟದಲ್ಲಿ ಇವರ ರಚನೆ ಆಯ್ಕೆಯಾಗಿ ಪುಸ್ತಕದಲ್ಲೂ ಪ್ರಕಟಗೊಂಡಿದೆ. ಮುಂದೆಯೂ ಇವರ ಬರವಣಿಗೆಯ ಮೆರವಣಿಗೆ ಹೀಗೆ ಮುಂದುವರಿಯಲಿ. ಇವರಿಗೆ ಶುಭ ಹಾರೈಕೆಗಳು.