Mon. Apr 7th, 2025

Puttur: ಹೆಣ್ಣು ಕೇಳಲು ಹೋದಾಗ ಯುವತಿ ಮನೆಯಲ್ಲಿ ಹಲ್ಲೆ! – ಕಾರಣ ಏನು ಗೊತ್ತಾ?

ಪುತ್ತೂರು:(ಅ.31) ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಹುಡುಗ ಹುಡುಗಿ ಮದುವೆ ನಿರ್ಧಾರಕ್ಕೆ ಬಂದಿರುತ್ತಾರೆ. ಆದ್ರೆ ಯುವತಿಯ ಮನೆಯವರು ಮದುವೆಗೆ ಒಪ್ಪಿಗೆ ನೀಡದೆ ತಕರಾರು ಮಾಡಿದ್ದು ಹುಡುಗನಿಗೆ ಜೀವ ಬೆದರಿಕೆ ಹಾಕಿದ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ⭕ರಾಜಸ್ಥಾನ: ನಾಪತ್ತೆಯಾದ ಬ್ಯೂಟೀಶಿಯನ್ ಮೃತದೇಹ ಹಲವು ತುಂಡುಗಳಾಗಿ ಪತ್ತೆ!!!

ಅಜ್ಜಾವರ ಗ್ರಾಮದ 22 ವರ್ಷ ಯುವತಿ ಹಾಗೂ ಪುತ್ತೂರು ಕೊಳ್ತಿಗೆಯ ಕೊಂರ್ಭಡ್ಕ ಚಂದ್ರಶೇಖರ (28) ಪರಸ್ಪರ ಪ್ರೀತಿಸುತ್ತಿದ್ದು, ಇದಕ್ಕೆ ಯುವತಿಯ ಮನೆಯವರು ವಿರೋಧ ವ್ಯಕ್ತಪಡಿಸಿದ್ದರೆನ್ನಲಾಗಿದೆ.

ಪ್ರೀತಿಗೆ ಯುವತಿಯ ಒಪ್ಪಿಗೆ ಇದ್ದರೂ ಆಕೆಯ ಮನೆಯವರು ವಿರೋಧಿಸುತ್ತಿದ್ದು, ಜೀವ ಬೆದರಿಕೆ ಹಾಕಿದ್ದಾರೆಂದು ಯುವಕನೋರ್ವ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಘಟನೆ ಸುಳ್ಯದಲ್ಲಿ ನಡೆದಿದೆ.

ಸದ್ಯ ಮದುವೆ ಮಾಡಿಸುವಂತೆ ಹೆಣ್ಣು ಕೇಳಲು ಯುವಕ ಹಾಗೂ ಮನೆಯವರು ಯುವತಿಯ ಮನೆಗೆ ಹೋದಾಗ ಯುವತಿಯ ತಂದೆ ಯುವತಿಗೆ ಹಲ್ಲೆ ನಡೆಸಿದ್ದು, ಯುವಕನಿಗೆ ಜೀವ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *