Tue. Apr 8th, 2025

Snake attack: ಸಂಗಾತಿಯನ್ನು ಕೊಂದ ಕೋಪಕ್ಕೆ ಪ್ರತೀಕಾರವಾಗಿ ಯುವಕನನ್ನು ಭೀಕರವಾಗಿ ಕೊಂದ ಹಾವು!!!

ಉತ್ತರಪ್ರದೇಶ:(ಅ.31) ಮನುಷ್ಯರಂತೆ ಪ್ರಾಣಿ ಪಕ್ಷಿಗಳ ನಡುವೆ ಬಲವಾದ ನಂಟು ಇರುತ್ತದೆ ಅನ್ನೋದಕ್ಕೆ ಈ ಘಟನೆ ಒಂದು ಸಾಕ್ಷಿಯಾಗಿದೆ. ಹೌದು, ಯುವಕನೊಬ್ಬ ಹಾವನ್ನು ಕೊಂದ ಅದೇ ತಾಸಿನಲ್ಲಿ ಇನ್ನೊಂದು ಹಾವಿನಿಂದ ಭೀಕರವಾಗಿ ಮರಣ ಹೊಂದಿದ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ⭕Puttur: ಹೆಣ್ಣು ಕೇಳಲು ಹೋದಾಗ ಯುವತಿ ಮನೆಯಲ್ಲಿ ಹಲ್ಲೆ!

ಉತ್ತರಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಗೋವಿಂದ್ ಕಶ್ಯಪ್ ಎಂಬಾತ ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದನು. ಅದೇ ವೇಳೆ ತಮ್ಮ ಗ್ರಾಮದ ಅತುಲ್ ಸಿಂಗ್ ತಮ್ಮ ಹೊಲದಲ್ಲಿ ಭತ್ತದ ಕಟಾವು ಮಾಡುತ್ತಿದ್ದಾಗ ಹಾವು ಕಾಣಿಸಿದೆ.

ಕೂಡಲೇ ಗೋವಿಂದ್ ನನ್ನು ಕರೆದಾಗ ಆತ ಹಾವನ್ನು ನೋಡಿ, ಹಾವಿನ ಮೇಲೆ ಕಾಲಿಟ್ಟು ತುಳಿದು, ದೊನ್ನೆಯಿಂದ ಹೊಡೆದು ಹಿಂಸೆ ನೀಡಿ ಕೊಂದಿದ್ದಾನೆ. ನಂತರ ತನ್ನ ಪಾಡಿಗೆ ಕೆಲಸ ಮುಂದುವರೆಸಿದ್ದಾನೆ. ಆದರೆ, ಒಂದೇ ಗಂಟೆಯ ನಂತರ, ಮತ್ತೊಂದು ಹಾವು ಆ ಯುವಕನ ಮೈ ಮೇಲೆ ಹಾರಿ ಯುವಕನ ಕೈಗೆ ಹಲವು ಬಾರಿ ಕಚ್ಚಿದೆ.

ಹಾವು ಕಚ್ಚಿದ ಕೂಡಲೇ ಗೋವಿಂದ್ ಮನೆ ಕಡೆ ಓಡಿದ್ದಾನೆ. ಆದರೆ, ನಿತ್ರಾಣಗೊಂಡು ದಾರಿಯಲ್ಲಿ ಬಿದ್ದಿದ್ದಾನೆ. ಗೋವಿಂದನಿಗೆ ನೀರು ಕೇಳಲು ಕೂಡ ಸಾಧ್ಯವಾಗಲಿಲ್ಲ. ಮಾರ್ಗ ಮಧ್ಯೆಯೇ ವಿಲ ವಿಲ ಒದ್ದಾಡಿ ಸತ್ತಿದ್ದಾನೆ.

Leave a Reply

Your email address will not be published. Required fields are marked *