Wed. Nov 20th, 2024

Bengaluru: ಗುರುಪ್ರಸಾದ್ ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಸಾವಿನ ಅಸಲಿ ಸತ್ಯ!!

ಬೆಂಗಳೂರು:(ನ.4) ನಟ ನಿರ್ದೇಶಕ ಗುರುಪ್ರಸಾದ್ ಅವರು ನಿನ್ನೆ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಇದೀಗ ಅವರ ಮರಣೋತ್ತರ ಪರೀಕ್ಷೆಯ ವರದಿ ಬಂದಿದ್ದು, ಅವರ ಸಾವಿನ ಕಾರಣ ಬಯಲಾಗಿದೆ.

ಇದನ್ನೂ ಓದಿ: 🛑ಮಜಾಭಾರತ ಖ್ಯಾತಿಯ ಜಗ್ಗಪ್ಪ-ಸುಶ್ಮಿತಾ ಡಿವೋರ್ಸ್!!?

ಹೌದು, “ಮಠ”, “ಎದ್ದೇಳು ಮಂಜುನಾಥ” ಇನ್ನೂ ಕೆಲವು ಜನಪ್ರಿಯ ಸಿನಿಮಾಗಳನ್ನು ನಿರ್ದೇಶಿಸಿದ್ದ, ಕೆಲವು ಸಿನಿಮಾಗಳಲ್ಲಿ ನಟನೆ ಸಹ ಮಾಡಿದ್ದ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದು, ಮಾದನಾಯಕಹಳ್ಳಿಯ ಅಪಾರ್ಟ್​ಮೆಂಟ್​ನಲ್ಲಿ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಗುರುಪ್ರಸಾದ್ ಅವರು ಸಾಲಗಾರರಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಸಾವಿನ ಹಿಂದೆ ಹಲವಾರು ಅನುಮಾನ ವ್ಯಕ್ತವಾಗಿದ್ದವು. ಈ ಹಿನ್ನೆಲೆಯಲ್ಲಿ ಅವರ ಎರಡನೇ ಪತ್ನಿ ಪೊಲೀಸರಿಗೆ ದೂರನ್ನು ಕೂಡ ನೀಡಿದ್ದರು. ಇದೀಗ ಅವರ ಮರಣೋತ್ತರ ಪರೀಕ್ಷೆಯ ವರದಿ ಬಂದಿದೆ.

ಮರಣೋತ್ತರ ಪರೀಕ್ಷೆಯಲ್ಲಿ ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡೇ ಸಾವಿಗೀಡಾಗಿದ್ದಾರೆ ಎಂಬ ಸತ್ಯ ಬಯಲಾಗಿದೆ. ಮಾದನಾಯಕನಹಳ್ಳಿಯ ಅಪಾರ್ಟ್​​​​​​​​​ಮೆಂಟ್​​​​​​ನ ಬಾಡಿಗೆ ಫ್ಲ್ಯಾಟ್​​​ನಲ್ಲಿ ಫ್ಯಾನಿಗೆ ಗುರುಪ್ರಸಾದ್ ನೇಣು ಹಾಕಿಕೊಂಡಿದ್ದರಿಂದ ದೇಹ ಉಸಿರುಗಟ್ಟಿ ಮರಣಹೊಂದಿದ್ದಾರೆ ಎಂದು ಮರಣೋತ್ತರ ವರದಿ ಹೇಳಿದೆ.

ಆತ್ಮಹತ್ಯೆ ಸ್ಥಳದ ಸುತ್ತಲು ಕೆಟ್ಟ ವಾಸನೆ ಮಾತ್ರವಲ್ಲ, ದೇಹದ ನರಗಳೆಲ್ಲವೂ ಊತಕೊಂಡ ಸ್ಥಿತಿ ಇದ್ದು , ನೇಣುಬಿಗಿದುಕೊಂಡ ನಂತರದಲ್ಲಿ ಗುರುಪ್ರಸಾದ್ ರಕ್ತ ವಾಂತಿ ಮಾಡಿಕೊಂಡಿದ್ದರು ಎಂಬ ಸತ್ಯ ಬಯಲಾಗಿದೆ. ಅಲ್ಲದೆ ಗುರುಪ್ರಸಾದ್​​​​​​ ಆತ್ಮಹತ್ಯೆಗೆ ಶರಣಾಗಿ 78 ಗಂಟೆಗಳು ಕಳೆದಿವೆ ಎಂಬ ಅಂಶವೂ ವಿಕ್ಟೋರಿಯಾ ಆಸ್ಪತ್ರೆ ನೀಡಿರುವ ವರದಿಯಿಂದ ಹೊರಬಿದ್ದಿದೆ.

Leave a Reply

Your email address will not be published. Required fields are marked *