Fri. Apr 11th, 2025

Bhopal: ಯಾರನ್ನಾದರೂ ಅಂಕಲ್‌ ಅನ್ನೋ ಮುನ್ನ ಎಚ್ಚರ – ಪತ್ನಿ ಮುಂದೆ “ಅಂಕಲ್‌” ಎಂದು ಕರೆದ ಅಂಗಡಿಯವನಿಗೆ ಗ್ರಾಹಕನಿಂದ ಬಿತ್ತು ಗೂಸಾ!!!

ಭೋಪಾಲ್‌:(ನ.4) ಪತ್ನಿ ಮುಂದೆ ತನ್ನನ್ನು “ಅಂಕಲ್‌” ಎಂದು ಕರೆದಿರುವುದಕ್ಕೆ ವ್ಯಕ್ತಿಯೊಬ್ಬ ಅಂಗಡಿಯಾತನನ್ನು ಹಿಗ್ಗಾಮುಗ್ಗಾ ಥಳಿಸಿರುವ ಘಟನೆಯೊಂದು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ.

ಇದನ್ನೂ ಓದಿ: ⭕ಕೇರಳ: ಕೇರಳದಲ್ಲೂ ವಕ್ಫ್‌ ವಿವಾದ

ಆರೋಪಿ ರೋಹಿತ್‌ ಎಂಬಾತನೇ ಹಲ್ಲೆ ನಡೆಸಿರುವ ವ್ಯಕ್ತಿ. ಈತ ವಿಶಾಲ್‌ ಎಂಬಾತನ ಅಂಗಡಿಗೆ ತನ್ನ ಪತ್ನಿಯೊಂದಿಗೆ ಶನಿವಾರ ಸೀರೆ ಖರೀದಿ ಮಾಡಲೆಂದು ಬಂದಿದ್ದು, ಪತ್ನಿ ಹಲವು ಸಮಯದವರೆಗೆ ಸೀರೆ ನೋಡಿದರೂ ಯಾವುದನ್ನೂ ಆಯ್ಕೆ ಮಾಡಿರಲಿಲ್ಲ. ಈ ಸಮಯದಲ್ಲಿ ವಿಶಾಲ್‌ ರೋಹಿತ್‌ಗೆ ಯಾವ ಬೆಲೆಯ ಸೀರೆಗಳನ್ನು ಖರೀದಿ ಮಾಡುವಿರಿ ಎಂದು ಕೇಳಿದಾಗ, ರೂ.1000 ರೇಂಜ್‌ನಲ್ಲಿ ತೋರಿಸಿ ಎಂದಿದ್ದಾನೆ.

ಇದಕ್ಕೆ ವಿಶಾಲ್‌, ” ಅಂಕಲ್‌, ನಾನು ನಿಮಗೆ ಬೇರೆ ರೇಂಜ್‌ಗಳಲ್ಲಿ ಸೀರೆ ತೋರಿಸುವೆ” ಎಂದು ಹೇಳಿದ್ದಾನೆ. ಇದನ್ನು ಕೇಳಿ ರೋಹಿತ್‌, ನನ್ನನ್ನು ಮತ್ತೆ ಅಂಕಲ್‌ ಕರೆಯಬೇಡಿ ಎಂದು ಹೇಳಿದ್ದು, ನಂತರ ಇಬ್ಬರ ನಡುವೆ ದೊಡ್ಡ ಜಗಳವೇ ನಡೆದಿದೆ.

ನಂತರ ರೋಹಿತ್‌ ಅಂಗಡಿಯಿಂದ ಹೊರಬಂದಿದ್ದು, ಸ್ವಲ್ಪ ಸಮಯದ ನಂತರ ಕೆಲ ಸ್ನೇಹಿತರೊಂದಿಗೆ ರೋಹಿತ್‌ ವಿಶಾಲ್‌ ಅಂಗಡಿಗೆ ಬಂದಿದ್ದಾನೆ. ಅನಂತರ ವಿಶಾಲ್‌ನನ್ನು ಅಂಗಡಿಯಿಂದ ರಸ್ತೆಗೆ ಎಳೆದುಕೊಂಡು ಹೋಗಿ, ದೊಣ್ಣೆ, ಬೆಲ್ಟ್‌ಗಳಿಂದ ಥಳಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಇದಾದ ನಂತರ ವಿಶಾಲ್‌ ಪೊಲೀಸ್‌ ಠಾಣೆಗೆ ಹೋಗಿ ದೂರು ನೀಡಿದ್ದು, ದೂರು ದಾಖಲಿಸಿದ ಪೊಲೀಸರು ರೋಹಿತ್‌ ಮತ್ತು ಆತನ ಸ್ನೇಹಿತರನ್ನು ಬಂಧಿಸಲಾಗುವುದು ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು