Wed. Nov 20th, 2024

Delhi: 70 ವರ್ಷ ದಾಟಿದ ಹಿರಿಯರಿಗೆ ಪ್ರಧಾನಿಯವರಿಂದ ಗುಡ್‌ ನ್ಯೂಸ್‌!! – ಏನದು??!

ದೆಹಲಿ : (ನ.4) ಎಪ್ಪತ್ತು ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಅವರ ಆದಾಯದ ಸ್ಥಿತಿ ಪರಿಗಣಿಸದೆ ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಚಿಕಿತ್ಸೆ ಒದಗಿಸುವ ಹೊಸ ಯೋಜನೆ ಮಂಗಳವಾರದಿಂದಲೇ ಆರಂಭವಾಗಲಿದೆ.

ಇದನ್ನೂ ಓದಿ: ⭕ಧರ್ಮಸ್ಥಳ: ನೇತ್ರಾವತಿ ನದಿಗೆ ಹಾರಿ ದಂಪತಿ ಆತ್ಮಹತ್ಯೆ

ಈ ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅ.29ರಂದು ಚಾಲನೆ ನೀಡಿದ್ದಾರೆ. ಇದಕ್ಕಾಗಿ ಅಭಿವೃದ್ಧಿಪಡಿಸಲಾದ ಯು-ವಿನ್ ಪೋರ್ಟಲ್ ಸದ್ಯ ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದನ್ನೂ ಪ್ರಧಾನಿ ಅದೇ ದಿನ ಲೋಕಾರ್ಪಣೆ ಮಾಡಿದ್ದಾರೆ. ಇದರಿಂದ ದೇಶದ ಸುಮಾರು 6 ಕೋಟಿ ಹಿರಿಯ ರಿಗೆ ಉಚಿತ ಆರೋಗ್ಯ ಸಿಗಲಿದೆ.

ನಾಗರಿಕರಿಗೆ ಪ್ರಯೋಜನ ಆಗಲಿದೆ ಎಂದು ಅಂದಾಜಿಸಲಾಗಿದೆ. ಬಡವ, ಮಧ್ಯಮ, ಮೇಲ್ಮಧ್ಯಮ ಅಥವಾ ಶ್ರೀಮಂತ ಎನ್ನದೆ 70 ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟ ಎಲ್ಲರಿಗೂ ಈ ಯೋಜನೆಯ ಪ್ರಯೋಜನ ಸಿಗಲಿದೆ.

ಅವರಿಗೆ ಆಯುಷ್ಮಾನ್ ಕಾರ್ಡ್ ನೀಡಲಿದ್ದು, ಎಬಿ-ಪಿಎಂಜಿಎವೈ ಜತೆ ಸಂಯೋಜಿತ ಆಸ್ಪತ್ರೆಗಳಲ್ಲಿ 5 ಲಕ್ಷ ರೂ.ವರೆಗಿನ ಚಿಕಿತ್ಸೆ ಉಚಿತವಾಗಿ ಒದಗಿಸಲಾಗುತ್ತದೆ. ಈ ವರ್ಷದ ಸೆ.1ರವರೆಗೆ 12,696 ಖಾಸಗಿ ಆಸ್ಪತ್ರೆಗಳು ಸೇರಿ ಒಟ್ಟು 29,648 ಆಸ್ಪತ್ರೆಗಳು ಈ ಯೋಜನೆ ಜತೆ ಕೈಜೋಡಿಸಿವೆ. ಸದ್ಯ ದೆಹಲಿ, ಒಡಿಶಾ, ಪಶ್ಚಿಮಬಂಗಾಳವನ್ನು ಹೊರತುಪಡಿಸಿ 33 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ.

ನೋಂದಣಿ ಅಗತ್ಯ: 70 ವರ್ಷ ಆದ ಬಗ್ಗೆ ಆಧಾರ್ ಕಾರ್ಡ್ ದಾಖಲೆ ಹೊಂದಿರುವ ಎಲ್ಲರೂ ಈ ಯೋಜನೆಗೆ ಅರ್ಹರಾಗಿರುತ್ತಾರೆ. ಇದು ತಂತ್ರಾಂಶ ಆಧರಿತ ಯೋಜನೆ ಆಗಿರುವುದರಿಂದ ಜನರು ಪಿಎಂಜಿಎವೈ ಪೋರ್ಟಲ್ ಇಲ್ಲವೇ ಆಯುಷ್ಮಾನ್ ಆ್ಯಪ್‌ನಲ್ಲಿ ಹೆಸರು ನೋಂದಣಿ ಮಾಡಿಸಿಕೊಂಡಿರಬೇಕು.

ಈಗಾಗಲೇ ಆಯುಷ್ಮಾನ್ ಕಾರ್ಡ್ ಇರುವವರು ಕೂಡ ಹೊಸದಾಗಿ ಇಕೆವೈಸಿ ಸಲ್ಲಿಸಿ, ಹೊಸ ಕಾರ್ಡ್ ಪಡೆಯಬೇಕು. 70 ವರ್ಷ ಮೇಲ್ಪಟ್ಟವರನ್ನು ಹೊಂದಿರುವ ಪ್ರತಿ ಕುಟುಂಬಕ್ಕೆ ಈಗಿನಂತೆ ವಾರ್ಷಿಕ 5 ಲಕ್ಷ ರೂ.ವರೆಗಿನ ಚಿಕಿತ್ಸೆ ಲಭಿಸಲಿದ್ದು, ಈ ಮೊತ್ತದಲ್ಲಿ 70 ವರ್ಷದವರ ಚಿಕಿತ್ಸೆಯ ಖರ್ಚು ಕಡಿತವಾಗುವುದಿಲ್ಲ. ಅರ್ಥಾತ್, 70 ವರ್ಷದವರಿಗೆ ಹೆಚ್ಚುವರಿಯಾಗಿ 5 ಲಕ್ಷ ರೂ. ವರೆಗಿನ ಚಿಕಿತ್ಸೆ ಉಚಿತವಾಗಿ ಸಿಗಲಿದೆ.

ಈಗಾಗಲೇ ಖಾಸಗಿ ಆರೋಗ್ಯ ವಿಮೆ ಅಥವಾ ಎಂಪ್ಲಾಯೀಸ್ ಸ್ಟೇಟ್ ಇನ್ನೂರೆನ್ಸ್ ಯೋಜನೆಗೆ ಒಳಪಟ್ಟವರಿಗೂ ಈ ಯೋಜನೆ ಅನ್ವಯಿ ಸಲಿದೆ. ಆದರೆ ಇತರ ಸಾರ್ವಜನಿಕ ಆರೋಗ್ಯ ವಿಮೆ ಯೋಜನೆಗಳಾದ ಸಿಜಿಎಚ್‌ಎಸ್, ಇಸಿಎಚ್‌ಎಸ್, ಸಿಎಪಿಎಫ್ ಪ್ರಯೋಜನದಲ್ಲಿ ಇರುವವರು ಒಂದೇ ಇವುಗಳಲ್ಲೇ ಮುಂದುವರಿಯಬಹುದು ಅಥವಾ ಎ-4 ಆಯ್ಕೆ ಮಾಡಿಕೊಳ್ಳಬಹುದು ಎನ್ನಲಾಗಿದೆ. ಇಂತಹ ಯೋಜನೆ ಗಳ ನ್ನು ಸಾರ್ವಜನಿಕ ರು ಉಪಯೋಗಿಸಿಕೊಳ್ಳಬೇಕು.

Leave a Reply

Your email address will not be published. Required fields are marked *