Mon. Jan 12th, 2026

Curacao lisansı, dünya genelinde 160’tan fazla ülke tarafından tanınmakta olup, bahsegel giril bu lisansa sahip güvenilir markalardan biridir.

Yeni üyeler, hızlı ve kolay erişim sağlamak için bahsegel güncel giriş bağlantısını tercih ediyor.

Klasik masa oyunlarından slotlara kadar bahis siteleri çeşitliliği sunuluyor.

Oyuncular hızlıca işlem yapmak için Bahsegel giriş bağlantısını takip ediyor.

ಮೇಷ ರಾಶಿ : ಅಪಕ್ವವಾದ ಮಾತುಗಳಿಗೆ ಅವಕಾಶ ಕೊಡಬೇಡಿ. ಹೇಳಿಕೊಳ್ಳುವ ಸಾಧನೆ ಅಲ್ಲದಿದ್ದರೂ ಒಮ್ಮೊಮ್ಮೆ ಹೇಳಿಕೊಳ್ಳಬೇಕಾಗುತ್ತದೆ. ಆಪ್ತರ ಜೊತೆಗಿನ ಮಾತುಕತೆಯು ನಿಮಗೆ ಆಹ್ಲಾದವನ್ನು ಉಂಟುಮಾಡುವುದು. ಇಂದಿನ ಕೆಲಸದಲ್ಲಿ ಮಂದಗತಿ ಇರಲಿದೆ. ಇತರರಿಂದ ಗೌರವ ಪ್ರಾಪ್ತವಾಗಬಹುದು. ವ್ಯಾಪಾರದಲ್ಲಿ ಅಲ್ಪ ಲಾಭವೇ ಆದರೂ ನೆಮ್ಮದಿ ಇರಲಿದೆ.

ವೃಷಭ ರಾಶಿ :ವಿಭಿನ್ನವಾಗಿ ಯಾವುದನ್ನಾದರೂ ಮಾಡಬಹುದು. ಆದರೆ ಅದು ಸ್ವೀಕಾರ್ಯವೇ ಎಂಬುದೂ ಮುಖ್ಯ. ಯಾವುದನ್ನೂ ಸಹಿಸಿಕೊಳ್ಳುವ ಶಕ್ತಿ ನಿಮ್ಮಲ್ಲಿ ಇರದು. ವಾಸಸ್ಥಳವನ್ನು ನೀವು ಇಂದು ಬದಲಿಸುವ ಆಲೋಚನೆ ಮಾಡುವಿರಿ. ಸರ್ಕಾರದ ನಿಮ್ಮ ಕೆಲಸವು ಬೇಗನೆ ಮುಗಿದುಹೋಗುವುದು. ಆಭರಣ ಖರೀದಿ ಜೋರಾಗಿ ನಡೆಯವುದು. ಮಾರಾಟದ ವಿಚಾರವಾಗಿ ನೀವು ಬೇರೆ ಊರಿಗೆ ಹೋಗಬೇಕಾಗಬಹುದು. ನಿಮಗೆ ಅವಿವಾಹಿತನಾಗಿದ್ದೇನೆ ಎಂಬ ಕೊರಗು ಕಾಡಬಹುದು.

ಮಿಥುನ ರಾಶಿ :ಇಂದು ಮಾಡುವ ಕಾರ್ಯವನ್ನು ಮುಂದೂಡುವುದು ಬೇಡ. ಮಂತ್ರಕ್ಕಿಂತ ಉಗುಳೇ ಜಾಸ್ತಿ ಎನ್ನುವಂತೆ ಎಲ್ಲರಿಗೂ ಬೈಯುತ್ತ ಇರುವಿರಿ. ಸ್ಥಿರಾಸ್ತಿಗಾಗಿ ಹೆಚ್ಚು ಓಡಾಟವಿರುವುದು. ವಿದೇಶ ಪ್ರಯಾಣವು ನಿಮಗೆ ಇಷ್ಟವಿಲ್ಲದಿದ್ದರೂ ಮಾಡಬೇಕಾದೀತು. ಉದ್ಯಮವು ಒಂದೊಂದೇ ಹೆಜ್ಜೆ ಬೆಳೆಯುತ್ತಿರುವುದು ಸಂತೋಷ ಕೊಡುವುದು. ನಿಮ್ಮ ಕೆಲಸಕ್ಕೆ ಇಂದೇ ಫಲಬೇಕು ಎನ್ನುವುದು ಮುರ್ಖತನವಾದೀತು. ಅಪರಿಚಿತರಿಗೆ ನೀವು ಹಣವನ್ನು ಕೊಡುವಿರಿ.

ಕರ್ಕಾಟಕ ರಾಶಿ : ಒಳ್ಳೆಯ ಗುಣಗಳೇ ನಿಮಗೆ ಸತ್ಫಲವನ್ನು ಕೊಡುವುದು. ಉದ್ಯೋಗದ ಕಾರಣದಿಂದ ಅನಾರೋಗ್ಯ ಕಾಣಿಸಿಕೊಳ್ಳಬಹುದು. ಭೂಮಿಯಿಂದ ಅಧಿಕ ಲಾಭ ಪಡೆಯಲು ಚರ್ಚೋಪಚರ್ಚೆಗಳು ಆಗಬಹುದು. ದುಸ್ಸಾಧ್ಯ ಎನಿಸಿದ ಕಾರ್ಯವನ್ನು ಮಾಡಲು ಪ್ರಯತ್ನಿಸುವುದು ಬೇಡ. ಸಂಬಂಧದ ವಿಚಾರದಲ್ಲಿ ದೃಷ್ಟಿ ಬದಲಾದರೆ ಸಾಕು. ಸ್ಥಿರಾಸ್ತಿಯನ್ನು ಮಾರಾಟ ಮಾಡುವ ಪ್ರಯತ್ನದಲ್ಲಿ ಇರುವಿರಿ.

ಸಿಂಹ ರಾಶಿ :ಇಂದು ಯಾರ ಮಾತನ್ನೂ ಎದುರಿಸುವ ಸಾಮರ್ಥ್ಯ ಇರದು. ತಂದೆಯ ಮನಸ್ಸನ್ನು ಅರಿತು ಅವರ ಜೊತೆ ವ್ಯವಹರಿಸಿ. ಇಂದು ನಿಮ್ಮ ಹಿತಶತ್ರುಗಳಿಂದ ತೊಂದರೆ‌ ಕೊಡಬಹುದು. ನಾಯಕತ್ವದ ಗುಣವನ್ನು ಹೆಚ್ಚು ಮಾಡಿಕೊಳ್ಳಬೇಕು. ಮನೆಗೆ ಸಹಕಾರವನ್ನು ನೀವು ನೀಡಲಿದ್ದು ಬಂಧುಗಳಿಂದ ಪ್ರಶಂಸೆಯು ಸಿಗಲಿದೆ. ಅಂದುಕೊಂಡಂತೆ ಕಾರ್ಯವು ಸಾಗದು ಎಂಬ ಕೊರಗು ಇರುವುದು. ನಿಮ್ಮ ಬಲದ ಮೇಲೇ ಕೆಲಸವನ್ನು ಪ್ರಾರಂಭಿಸಿ.

ಕನ್ಯಾ ರಾಶಿ :ದೈವಾನುಗ್ರಹಕ್ಕೆ ಬೇಕಾದ ಧಾರ್ಮಿಕ ಕಾರ್ಯಗಳನ್ನು ಮಾಡುವಿರಿ. ಮಕ್ಕಳ ಮೇಲಿನ‌ ಮೋಹಕ್ಕೆ ಅವರ ತಪ್ಪನ್ನು ತಿದ್ದಲಾರಿರಿ. ಸ್ನೇಹಿತರಿಂದ ಇಂದು ಮನೆ ತುಂಬಲಿದೆ. ಸಾಮೂಹಿಕ ವ್ಯವಸ್ಥೆಯನ್ನು ತೂಗಿಸಲು ಆಗದು.‌ ವಿದ್ಯಾಭ್ಯಾಸದಲ್ಲಿ ಯಶಸ್ಸನ್ನು ಸಾಧಿಸಲು ಅನೇಕ ಮಾರ್ಗಗಳು ಇರಲಿದೆ. ವಿವಾಹಕ್ಕೆ ಸಂಬಂಧಿಸಿದಂತೆ ಸ್ಪಷ್ಟವಾದ ನಿಮ್ಮ ಅಭಿಪ್ರಾಯವನ್ನು ತಿಳಿಸಿ. ನಿಮ್ಮವರ ತಪ್ಪುಗಳನ್ನು ತಿದ್ದಿಕೊಳ್ಳಲು ಸಮಯವನ್ನು ಕೊಡಿ.

ತುಲಾ ರಾಶಿ : ನ್ಯಾಯಕ್ಕೆ ಬೇಕಾದ ಸೂಕ್ತ ಸಾಕ್ಷಿಯ ಕೊರತೆ ಇರುವುದು. ಸರ್ಕಾರದ ಕೆಲಸದಲ್ಲಿ ಗೊತ್ತಿಲ್ಲದೇ ತಪ್ಪುಗಳು ಆಗಬಹುದು. ನಿಮಗೆ ಬರಬೇಕಾದ ಹಣದ ವಿಚಾರದಲ್ಲಿಯೂ ನಿಮಗೆ ಸೋಲಾಗುವುದು. ಮನೆಯಲ್ಲಿಯೂ ನಿಮ್ಮ ಮಾತಿಗೆ ಸರಿಯಾದ ಬೆಲೆಯೂ ಸಿಗದು. ಕಛೇರಿಯಲ್ಲಿ ಇಂದು ನಿಮ್ಮಿಂದ ತಪ್ಪಾಗಿದ್ದು ಅದನ್ನು ನೀವು ಒಪ್ಪಿಕೊಳ್ಳಲಾರಿರಿ.

ವೃಶ್ಚಿಕ ರಾಶಿ :ನೋವನ್ನು ಮರೆಯುವ ಪ್ರಯತ್ನವು ಬೇರೆ ರೀತಿಯಲ್ಲಿ ನಡೆಯುವುದು. ಐಷಾರಾಮಿಯಾಗಿ ಬದುಕಲು ನಿಮ್ಮ ಹಣವನ್ನೇ ಖರ್ಚುಮಾಡುವಿರಿ. ವಿದ್ಯಾರ್ಥಿಗಳಿಗೆ ಅಹಂಕಾರದ ವರ್ತನೆಯನ್ನು ತೋರಿಸಬಹುದು. ತಿಳಿವಳಿಕೆಯನ್ನು ಹೇಳಬೇಕಾದೀತು. ಎಲ್ಲವನ್ನೂ ನಂಬಿಕೆಯ ಆಧಾರದ ಮೇಲೆ ಸ್ವೀಕರಿಸಬೇಕಿಲ್ಲ. ಸರ್ಕಾರಿ ಉದ್ಯೋಗಿಗಳಿಗೆ ನಿಮ್ಮ ಚಾತುರ್ಯದ ಕಾರಣದಿಂದ ಹೆಚ್ಚಿನ ಅಧಿಕಾರವು ಪ್ರಾಪ್ತವಾಗುವುದು.

ಧನು ರಾಶಿ :ವಿದೇಶದ ವೃತ್ತಿಯಲ್ಲಿ ಇರುವವರಿಗೆ ಒತ್ತಡ ಹೆಚ್ಚಾಗುವುದು. ನಿಮ್ಮ ವರ್ತನೆಗಳೇ ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಯುವಂತೆ ಮಾಡುವುದು. ಶುಭ ಕಾರ್ಯದಲ್ಲಿ ನೀವು ಭಾಗವಹಿಸುವಿರಿ. ಕಳೆದುಕೊಂಡ ಸಂಪತ್ತು ಮತ್ತಾವುದೋ ರೀತಿಯಲ್ಲಿ ಬರಬಹುದು. ಸಣ್ಣ ಮಕ್ಕಳಿಂದ ನೆಮ್ಮದಿಯು ಸಿಗಲಿದೆ. ನಿಮ್ಮ ಯಶಸ್ಸನ್ನು ಮನೆಯವರು ಸಂಭ್ರಮಿಸಬಹುದು. ಅಸ್ಥಾನದಲ್ಲಿ ಇಂದು ಒಲವು ಹುಟ್ಟಿಕೊಳ್ಳಬಹುದು.

ಮಕರ ರಾಶಿ :ನಿಮಗೆ ನೆಮ್ಮದಿ ಬೇಕಾದರೆ ಸುತ್ತಲಿನವರ ಜೊತೆ ಸೌಹಾರ್ದತೆ ಮುಖ್ಯ. ನಿಮ್ಮ ಸುರಕ್ಷತೆಯ ಬಗ್ಗೆ ಮೊದಲು ಗಮನವಿರಲಿ. ಅನಂತರ ಉಳಿದುದರ ರಕ್ಷಣೆ. ಹಣವು ವ್ಯಯವಾಗಬಹುದು. ಕಳ್ಳರ ಭೀತಿಯು ಇರಲಿದೆ. ಒತ್ತಡದಿಂದ ನಿಮ್ಮ ಕಾರ್ಯವು ಮಂದಗತಿಯಲ್ಲಿ ಸಾಗುವುದು. ಮೇಲ್ನೋಟಕ್ಕೆ ಶಾಂತಸ್ವಭಾವದಂತೆ ಕಾಣಿಸುವುದು.‌ಸ್ವಲ್ಪ ಮಾನಸಿಕ‌ ಆಲಸ್ಯವು ಇರುವುದು. ಗೊಂದಲವನ್ನು ಇನ್ನೊಬ್ಬರ ಬಳಿ ಹೇಳಿ. ಪರಿಹಾರವನ್ನು ಕಂಡುಕೊಳ್ಳಬಹುದು.

ಕುಂಭ ರಾಶಿ : ಇಂದು ನಿಮ್ಮ ತಂತ್ರಗಾರಿಕೆಯು ವಿಫಲವಾಗಬಹುದು. ನಿಮಗಿರುವ ಸ್ಥಾನಮಾನದ ಬಗ್ಗೆ ಆತಂಕ ಬರಬಹುದು. ಇಂದು ನಿಮ್ಮ ಯೋಜನೆಗೆ ಇಂದು ಎಲ್ಲವೂ ವಿರುದ್ಧವಾಗಬಹುದು. ವಿವಾಹಕ್ಕೆ ಸಂಬಂಧಿಸಿದ ದೋಷಗಳನ್ನು ದೈವಜ್ಞರ ಬಳಿ ಕೇಳಿ ಸರಿಪಡಿಸಿಕೊಳ್ಳುವುದು ಉತ್ತಮ. ಅಧಿಕಾರಿಗಳು ನಿಮಗೆ ಅಪಮಾನ ಮಾಡಬಹುದು. ಊಹಾಪೋಹಗಳಿಗೆ ಕಿವಿಗೊಡದೇ ನಿಮ್ಮ ಕಾರ್ಯದಲ್ಲಿ ಮುಂದುವರಿಯಿರಿ.

ಮೀನ ರಾಶಿ : ರಾಜಕಾರಣದಿಂದ ಕಿರಿಕಿರಿ ಸೃಷ್ಟಿಯಾಗಬಹುದು.‌ ಆಸ್ತಿಯ ಆಧಾರದ ಮೇಲೆ ನೀವು ಸಾಲವನ್ನು ಪಡೆಯಬೇಕಾಗಬಹುದು. ಯಾವುದೋ ಆಲೋಚನೆಯಲ್ಲಿ ನಿಮ್ಮ ಮನಸ್ಸು ಇರುವುದು. ನಿಮ್ಮ ಆಸ್ತಿಗಳನ್ನು ಸ್ವಾಧೀನ ಮಾಡಿಕೊಳ್ಳಬಹುದು. ಹೆಚ್ಚಿನ ಸೌಕರ್ಯದಿಂದ ನೀವು ಸೋಮಾರಿಯಾಗುವಿರಿ. ಕೇಳಿದವರಿಗೆ ನಿಮ್ಮ‌ ಸಹಾಯವು ಸಿಗಲಿದೆ.‌ ಕೇಳಿದ್ದಕ್ಕೆ ಮಾತ್ರ ನಿಮ್ಮ ಉತ್ತರವಿರಲಿ. ಕಳೆದ ಕೆಟ್ಟ ಕಾಲವನ್ನು‌ ನೆನಪಿಸಿಕೊಳ್ಳುವಿರಿ. ಉದ್ಯೋಗದಲ್ಲಿ ನಿಮ್ಮ ಕೇಂದ್ರವಾಗಿ ಇರಿಸಿಕೊಂಡು ಮಾತನಾಡುವರು. ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಮಾದರಿ ಬೇಡ.

Leave a Reply

Your email address will not be published. Required fields are marked *