Wed. Nov 20th, 2024

Koyyuru: ಕೊಯ್ಯೂರಿನಲ್ಲಿ ಜಾತಿ ಭೇದವಿಲ್ಲದೆ ಆಚರಿಸಿದ ದೀಪಾವಳಿ

ಕೊಯ್ಯೂರು: (ನ.6) ಹಿಂದೂ ಹಬ್ಬವಾದ ದೀಪಾವಳಿಯನ್ನು ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದ ಜನರೊಂದಿಗೆ ಸೇರಿಕೊಂಡು ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಕೊಯ್ಯೂರು ಗ್ರಾಮದಲ್ಲಿ ವಿಶೇಷವಾಗಿ ದೀಪಾವಳಿ‌ ಹಬ್ಬವನ್ನು ಆಚರಣೆ ಮಾಡಲಾಗಿದೆ.

ಇದನ್ನೂ ಓದಿ: 💥ಅಮೆರಿಕ: 2 ನೇ ಬಾರಿ ಟ್ರಂಪ್‌ ಗೆ ಅಮೆರಿಕ ಅಧ್ಯಕ್ಷ ಪಟ್ಟ

ಕೊಯ್ಯುರು ಗ್ರಾಮದ ಅಂಬೇಡ್ಕರ್ ಭವನದಲ್ಲಿ ಹಿಂದೂ ಬಾಂಧವರಿಂದ ಮುಸ್ಲಿಂ ಮತ್ತು ಕ್ರೈಸ್ತ ಬಾಂಧವರಿಗೆ ಔತಣಕೂಟ ಏರ್ಪಡಿಸಿ ದೀಪಾವಳಿಯ ಸಂದೇಶವನ್ನು ಸಾರುವುದರೊಂದಿಗೆ ದೀಪಾವಳಿ ಹಬ್ಬವನ್ನು ಆಚರಣೆ ಮಾಡಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಕೊಯ್ಯೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮೋಹನ್ ಗೌಡ ವಹಿಸಿದ್ದರು ಎಸ್ ಡಿ ಎಂ ಕಾಲೇಜು ಉಜಿರೆ ಇದರ ಉಪನ್ಯಾಸಕರಾದ ದಿವ ಕೊಕ್ಕಡ ಮುಖ್ಯ ಅತಿಥಿಯಾಗಿ ಹಾಜರಿದ್ದರು.

ಊರಿನ ಪ್ರಮುಖರಾದ ಗ್ರಾಮ ಪಂಚಾಯತ್ ಸದಸ್ಯ ಲೋಕೇಶ ಗೌಡ ಪಾಂಬೇಲು,ಉಜ್ವಲ್ ಗೌಡ ಪಾಂಬೆಲ, ದಿನೇಶ್ ಗೌಡ ಕೀನ್ಯಾಜೆ, ಕೊಯ್ಯೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಹರೀಶ್ ಗೌಡ, ಕೊಯ್ಯೂರು ಗ್ರಾಮ ಪಂಚಾಯತ್ ಕಾರ್ಯದರ್ಶಿ ಪರಮೇಶ್ವರ,ಕೇಶವ ಕೊಂಗುಜೆ, ಕೇಶವ ಕಂಗಿತ್ಲು, ಕೊಯ್ಯೂರು ಗ್ರಾಮ ಪಂಚಾಯತ್ ಸದಸ್ಯರಾದ ಲತಿಫ್ ಕುಮ್ಮೆರು,ಮನ್ಸಾರ್ ವಿದ್ಯಾಸಂಸ್ಥೆ ಪ್ರಾಂಶುಪಾಲರು ಮುಂತಾದ ಗಣ್ಯರ ವೇದಿಕೆಯಲ್ಲಿದ್ದು ಸಮಾಜಕ್ಕೆ ದೀಪಾವಳಿಯ ಸಂದೇಶವನ್ನು ಸಾರಿದರು ನಾವೆಲ್ಲರೂ ಮಾನವರು ಮಾನವರಾಗಿ ಬದುಕುವ ಎಲ್ಲಾ ಧರ್ಮದವರು ಎಲ್ಲಾ ಪಂಗಡದವರು ಒಂದಾಗಿ ಒಂದೇ ತಾಯಿಯ ಮಕ್ಕಳಂತೆ ಬಾಳಿ ಬದುಕೋಣ ಎನ್ನುತ್ತಾ ಮುಂದಿನ ಪೀಳಿಗೆಗೆ ಉತ್ತಮ ಸಮಾಜವನ್ನು ನಿರ್ಮಿಸಿ ಕೊಡೋಣ ಎಂದರು.

ದೇಶದ ಪ್ರಜೆಗಳಿಗಾಗಿ ಇಂಥ ಒಂದು ಉತ್ತಮ ಕಾರ್ಯಕ್ರಮ ಇಡೀ ರಾಜ್ಯಕ್ಕೆ ಮಾದರಿಯಾಗಲಿ ಎಂದು ಎಲ್ಲರೂ ಹಾರೈಸಿದರು.


ಈ ಸಂದರ್ಭದಲ್ಲಿ ನವೀನ್ ಗೌಡ ಕೊಯ್ಯೂರು. ಪ್ರವೀಣ್ ಗೌಡ ಮಾವಿನ ಕಟ್ಟೆ,ಸಿದ್ದಿಕ್ ಮಲೇಬೆಟ್ಟು, ಸಲೀಂ ಪಾತ್ರಲ, ಸುಜಿತ್ ಕುಮಾರ್, ಮಹಮ್ಮದ್ ಹಾರುನ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *