Wed. Nov 20th, 2024

Madantyaru: ಜೆಸಿಐ ಮಡಂತ್ಯಾರು ವಿಜಯ 2024 ರ ಅದ್ದೂರಿ ಜೇಸಿ ಸಪ್ತಾಹ ಆಳ್ವಾಸ್ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಮುಕ್ತಾಯ

ಮಡಂತ್ಯಾರು:(ನ.6) ಜೆಸಿಐ ಮಡಂತ್ಯಾರು ವಿಜಯ 2024ರ ಜೇಸಿ ಸಪ್ತಾಹವು ಅಕ್ಟೋಬರ್ 13ರಿಂದ 19ರವರೆಗೆ ಕೊರೆಯ ಕಂಪೌಂಡ್ ಮಡಂತ್ಯಾರು ಇಲ್ಲಿ ಜೆಸಿ ವಿಕೇಶ್ ಮಾನ್ಯ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಇದನ್ನೂ ಓದಿ: ⭕ಕಡೆಗೋಳಿ : ಬೈಕ್ ಗೆ ಡಿಕ್ಕಿಯಾದ ಯಮಸ್ವರೂಪಿ ಸೆಲಿನಾ ಬಸ್‌

ದಿ| ಕೃಷ್ಣಪ್ಪ ಪೂಜಾರಿ ಮಾನ್ಯ ಸಭಾವೇದಿಕೆಯಲ್ಲಿ ಉದ್ಘಾಟನಾ ಕಾರ್ಯಕ್ರಮವನ್ನು ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಪ್ರದಾನ ಅರ್ಚಕರಾದ ಶ್ರೀ ಪೇಜಾವರ ಶ್ರೀಧರ ಭಟ್ ರವರ ದಿವ್ಯ ಹಸ್ತದಲ್ಲಿ ನೆರವೇರಿಸಲಾಯಿತು.

ನಂತರ ಅನೇಕ ಗಣ್ಯರ ಉಪಸ್ಥಿತಿಯಲ್ಲಿ ಸಪ್ತಾಹ ಆಯೋಜಿಸಲಾಯಿತು. ಏಳು ದಿನಗಳ ಈ ಕಾರ್ಯಕ್ರಮದಲ್ಲಿ ಡಾ/ ಎಂ. ಮೋಹನ ಆಳ್ವ, JCI sen ಸಂಪತ್ ಬಿ ಸುವರ್ಣ, ಶ್ರೀ ಶಶಿಧರ್ ಶೆಟ್ಟಿ ಬರೋಡ , ಶ್ರೀ ಅಲೆಕ್ಸ್ ಐವನ್ ಸಿಕ್ವೇರಾ, ರೆ|ಸ್ವಾಮಿ| ಸ್ಟ್ಯಾನಿ ಗೋವಿಯಸ್, ಶ್ರೀ ಪೃಥ್ವಿ ಸಾನಿಕಂ ಮಾನ್ಯ ತಹಶೀಲ್ದಾರರು, ವಲಯದ್ಯಕ್ಷರಾದ JCI Sen Adv ಗಿರೀಶ್ ಎಸ್ ಪಿ, ಎಕ್ಸೆಲ್ ಕಾಲೇಜಿನ ಅಧ್ಯಕ್ಷರಾದ ಶ್ರೀ ಸುಮಂತ್ ಕುಮಾರ್ ಜೈನ್, ಶ್ರೀ ಯೋಗೀಶ್ ಪೂಜಾರಿ ಕಡ್ತಿಲ, ಪೂರ್ವ ರಾಷ್ಟ್ರೀಯ ಕಾನೂನು ಸಲಹೆಗಾರರಾದ JCI PPP ಸೌಜನ್ಯ ಹೆಗ್ಡೆ, ಪ್ರಖ್ಯಾತ ಭಾಗವತರಾದ ಶ್ರೀಮತಿ ಕಾವ್ಯಶ್ರೀ ಗುರುಪ್ರಸಾದ್ ನಾಯಕ್, ಪಿಡಿಜಿ ಪ್ರಕಾಶ್ ಕಾರಂತ್, ಶ್ರೀ ಗಂಗಾಧರ್ ಇ ಮಂಡಗಲಲೆ, ಹೀಗೆ ಹಲವು ಗಣ್ಯರ ಉಪಸ್ಥಿಯಲ್ಲಿ ವಿಜೃಂಭಣೆಯಿಂದ ಜರುಗಿತು.

ಏಳು ದಿನಗಳ ವಿಶೇಷ ಮನರಂಜನಾ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ವರ್ಷದ ಅತ್ಯುತ್ತಮ ಪ್ರಶಸ್ತಿ ಜೇಸಿ ಸಪ್ತಾಹ ವಿಜಯ 2024 ಪುರಸ್ಕಾರವನ್ನು ಬದುಕು ಕಟ್ಟೋಣ ಬನ್ನಿ ಇದರ ಸ್ಥಾಪಕರಾದ ಶ್ರೀ ಮೋಹನ್ ಕುಮಾರ್ ಲಕ್ಷ್ಮೀ ಗ್ರೂಪ್ಸ್ ಉಜಿರೆ ಇವರಿಗೆ ನೀಡಿ ಗೌರವಿಸಲಾಯಿತು. ಹಾಗೆಯೇ ಪದ್ಮ ಶ್ರೀ ಪುರಸ್ಕೃತರಾದ ಶ್ರೀ ಹರೆಕ್ಕಳ ಹಾಜಬ್ಬ ರವರನ್ನು ಜೇಸಿ ವಿಜಯ 2024 ಪುರಸ್ಕಾರ ನೀಡಿ ಗೌರವಿಸಲಾಯಿತು.

ಹೀಗೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

ಈ ಸಮಯದಲ್ಲಿ ಮಡಂತ್ಯಾರು ಘಟಕವನ್ನು ಕಟ್ಟಿ ಬೆಳೆಸಿದ 32 ಪೂರ್ವಾದ್ಯಕ್ಷರುಗಳ ಸಂಪೂರ್ಣ ಸಹಕಾರ 2023 ರ ಅಧ್ಯಕ್ಷರಾದ ಜೇಸಿ ಅಶೋಕ್ ಗುಂಡಿಯಲ್ಕೆ, ಸಪ್ತಾಹ ಸಂಯೋಜಕ ಜೇಸಿ ಯತೀಶ್ ರೈ ಹಾಗೂ ಈ ವರ್ಷದ ಕಾರ್ಯದರ್ಶಿ ಜೇಸಿ ಸಂಯುಕ್ತ ಪೂಜಾರಿಯವರ ಸರ್ವ ರೀತಿಯ ಸಹಕಾರದೊಂದಿಗೆ ಸಪ್ತಾಹ ಯಶಸ್ವಿಯಾಗಿ ಸುಸಂಪನ್ನವಾಯಿತು.

Leave a Reply

Your email address will not be published. Required fields are marked *