ಉಜಿರೆ: (ನ.6) ಅಖಿಲ ಭಾರತೀಯ ಸಾಹಿತ್ಯ ಪರಿಷತ್ (ರಿ) ಕರ್ನಾಟಕ ಹಾಗೂ ಗಮಕಕಲಾ ಪರಿಷತ್ತು ಬೆಳ್ತಂಗಡಿ ಇದರ ಇದರ ಜಂಟಿ ಆಶ್ರಯದಲ್ಲಿ ನ.04 ರಂದು ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಗಮಕ ಕಾರ್ಯಕ್ರಮವು ನಡೆಯಿತು.
ಇದನ್ನೂ ಓದಿ :⭕ಕೊಕ್ಕಡ: ಸೌತಡ್ಕ ದೇವಾಲಯದ ಭೂ ಅವ್ಯವಹಾರದ ಆರೋಪ
ಮುಖ್ಯ ಅತಿಥಿಗಳಾಗಿ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದವಂದನೀಯಫಾ. ವಿಜಯ್ ಲೋಬೊ, ಅಖಿಲ ಭಾರತ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷರಾದ ಶ್ರೀ ಗಣಪತಿ ಭಟ್ ಕುಳಮರ್ವ, ಹಾಗೂ ಗಮಕಲಾ ಪರಿಷತ್ತು ಬೆಳ್ತಂಗಡಿ ತಾಲೂಕಿನ ಅಧ್ಯಕ್ಷರಾದ ಶ್ರೀ ರಾಮಕೃಷ್ಣ ಭಟ್ ಉಪಸ್ಥಿತರಿದ್ದರು.
ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಮುಖ್ಯ ಅತಿಥಿಗಳಾ ಶ್ರೀ ಗಣಪತಿ ಕುಳಮರ್ವಅವರು ಮಾತನಾಡಿ, ಇಂದಿನ ಈಗಮಕ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ರಸದೌತಣವನ್ನು ನೀಡುತ್ತದೆ ಎಂದು ಹೇಳುತ್ತಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಸಂಸ್ಥೆಯ ಪ್ರಾಂಶುಪಾಲರಾದವಂದನೀಯ ಫಾ. ವಿಜಯ್ ಲೋಬೊ ಅವರು ಮಾತನಾಡಿ ವಿದ್ಯಾರ್ಥಿಗಳ ಕಾವ್ಯಸಕ್ತಿಗೆ ಅಭಿರುಚಿಗೆ ಇದು ಉತ್ತಮ ವೇದಿಕೆ. ಕಾವ್ಯವಾಚನ ಆಸಕ್ತಿಯನ್ನು ಮಕ್ಕಳು ಬೆಳೆಸಿಕೊಳ್ಳಲು ಈ ಕಾರ್ಯಕ್ರಮ ಪೂರಕವಾಗಿದೆ ಎಂದು ಹೇಳಿದರು.
ನಂತರ ನಡೆದ ಗಮಕ ಕಾರ್ಯಕ್ರಮದಲ್ಲಿ ಶ್ರೀಮತಿ ಮೇಧಾ, ಶ್ರೀ ಸುರೇಶ್ ಕುದ್ರೆಂತಾಯ ಹಾಗೂ ಶ್ರೀರಾಮಕೃಷ್ಣ ಭಟ್ ಇವರು 10ನೇ ತರಗತಿಯ ಕನ್ನಡ ಪದ್ಯ ಕುಮಾರವ್ಯಾಸನ ಕೌರವೇಂದ್ರನ ಕೊಂದೆ ನೀನು ಎಂಬ ಪದ್ಯಭಾಗದ ಕಾವ್ಯವಾಚನವನ್ನು ನಡೆಸಿಕೊಟ್ಟರು.
ಶ್ರೀಮತಿ ಆಶಾ ಅಡೂರು ಇವರು ಕಾರ್ಯಕ್ರಮವನ್ನು ನಿರೂಪಿಸಿ, ಶ್ರೀಗಣೇಶ್ ಇವರು ಸ್ವಾಗತವನ್ನು ನೀಡಿ, ಶ್ರೀಮತಿ ಸುಭಾಷಿಣಿ ಇವರು ಧನ್ಯವಾದಗಳನ್ನಿತ್ತರು.