ಮೇಷ ರಾಶಿ: ಹಣಕಾಸಿನ ಮುಲಾಜಿಗೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಇನ್ಮೊಬ್ಬರ ಮಾತಿಗೆ ನೋವಿಗೆ ಸ್ಪಂದಿಸುವ ಗುಣ ಒಳ್ಳೆಯದು. ಗೆಳತಿಯೊಬ್ಬಳಿಂದ ನಿಮ್ಮಆಸಕ್ತಿಯ ಕ್ಷೇತ್ರವು ಬದಲಾಗುವುದು. ಇಂದಿನ ಕಾರ್ಯವನ್ನು ಮುಂದೂಡುವುದು ಬೇಡ. ಇನ್ನೊಬ್ಬರನ್ನು ಅನುಕರಣೆ ಮಾಡುವುದಿಕ್ಕಿಂತ ನಿಮ್ಮದಾದ ಮಾರ್ಗವೇ ಇರಲಿ. ಕುಟುಂಬದಲ್ಲಿ ಸಂತಸದ ವಾತಾವರಣವಿರುವಂತೆ ಮಾಡುವಿರಿ. ವಾಹನವನ್ನು ಚಲಾಯಿಸುವಾಗ ಸ್ವಲ್ಪ ಎಚ್ಚರವಿರಲಿ. ಹೊಸ ವ್ಯಾಪಾರದಲ್ಲಿಯೂ ನಿಮಗೆ ಮನಸ್ಸಾಗಬಹುದು. ಪರರ ಆಪತ್ತಿಗೆ ಸ್ವಲ್ಪವಾದರೂ ಸಹಾಯಮಾಡುವಿರಿ. ಸಂದರ್ಭಕ್ಕೆ ತಕ್ಕುದಾದ ಪಾಠವನ್ನು ನೀವು ಕಲಿಯುವಿರಿ.
ವೃಷಭ ರಾಶಿ: ವೃತ್ತಿಯ ಸಂಕಟವನ್ನು ಹೇಳಲಾಗದು. ಯಾರದೋ ಜಗಳದಲ್ಲಿ ತಲೆ ಹಾಕಿ ಅಪಾಯಕ್ಕೆ ಸಿಕ್ಕಿಕೊಳ್ಳಬೇಕಾದೀತು. ಹೊಸ ವಿಷಯಗಳತ್ತ ಉತ್ಸಾಹವೇ ಇರಲಿದ್ದು, ಇದು ತಾತ್ಕಾಲಿಕ ಅಷ್ಟೇ. ದಾಂಪತ್ಯದಲ್ಲಿನ ವಿರಸದಿಂದ ಮಾನಸಿಕ ಆರೋಗ್ಯವನ್ನು ಕೆಡಿಸುವುದು. ಬಹಳ ಶ್ರಮದಿಂದ ಇಂದು ನ್ಯಾಯಾಲಯಸಲ್ಲಿ ಗೆಲುವನ್ನು ಸಾಧಿಸುವಿರಿ. ನಿಮ್ಮಲ್ಲಿ ಅನಾರೋಗ್ಯದ ಭಯವು ಇರುವುದು. ಹಿರಿಯರಿಂದ ನಿಮ್ಮ ಜೀವನಕ್ಕೆ ಮಾರ್ಗದರ್ಶನ ಸಿಗಲಿದೆ. ಉದ್ಯೋಗದ ಕಾರಣಕ್ಕೆ ಇಂದು ನೀವು ಪ್ರಯಾಣವನ್ನು ಮಾಡಬೇಕಾಗುವುದು.
ಮಿಥುನ ರಾಶಿ: ಆತ್ಮರಕ್ಷಣೆಯ ವಿಷಯದಲ್ಲಿ ಹಿನ್ನಡೆ ಆಗಬಹುದು. ಸ್ತ್ರೀಯರಿಗೆ ಈ ದಿನ ಒತ್ತಡ ಹೆಚ್ಚಾಗುವುದು. ಅತಿಯಾದ ಮರೆವಿನ ಸಮಸ್ಯೆಯಿಂದ ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮವನ್ನು ಬೀರುವುದು. ನಿವೃತ್ತಿಯ ಅಂಚಿನಲ್ಲಿದ್ದು ನಡತೆಯನ್ನು ಸರಿಯಾಗಿ ಇಟ್ಟುಕೊಳ್ಳಿ. ಮನೆಮಂದಿಯವರ ಜೊತೆ ಸಿಟ್ಟುಗೊಂಡರೆ ನಿಮಗೇ ತೊಂದರೆಯಾದೀತು. ಅನಾರೋಗ್ಯದ ಭೀತಿಯಿಂದ ದಿನವನ್ನು ಕಳೆಯುವಿರಿ. ನಿಮ್ಮ ಇಂದಿನ ಕಾರ್ಯದಿಂದ ಕಛೇರಿಯಲ್ಲಿ ನಿರೀಕ್ಷೆ ಮೀರಿ ಪ್ರಶಂಸೆ ಸಿಗುವುದು. ನಿಮ್ಮವರೇ ನಿಮ್ಮ ಯಶಸ್ಸನ್ನು ಸಹಿಸದೇ ತೊಂದರೆ ಕೊಡುವರು.
ಕರ್ಕಾಟಕ ರಾಶಿ: ಕಷ್ಟವಾದರೂ ಇಷ್ಟಪಡುವುದು ಅನಿವಾರ್ಯವಾಗುವುದು. ಸತತವಾದ ಸೋಲಿನಿಂದ ಉತ್ಸಾಹವೂ ಕುಗ್ಗಿದೆ. ಬೇರೆಯವರಿಗೆ ನಿಮ್ಮ ಬಗ್ಗೆ ನಕಾರಾತ್ಮ ಭಾವಗಳು ಇರಬಹುದು. ಗುರಿಯನ್ನು ಬದಲಿಸದೇ ಮುನ್ನುಗ್ಗಿ. ಮಕ್ಕಳಿಗೆ ಪ್ರೋತ್ಸಾಹವನ್ನು ಕೊಡುವಿರಿ. ನಿಮ್ಮ ಉಳಿಕೆಯ ಹಣದ ಬಗ್ಗೆ ಎಚ್ಚರವಿರಲಿ. ನಿಮ್ಮ ಅನುಪಸ್ಥಿತಿಯು ಬೇರೆ ಸೂಚನೆಯನ್ನು ನೀಡಬಹುದು. ಕುಟುಂಬದಲ್ಲಿ ಬಂದ ಭಿನ್ನಾಭಿಪ್ರಾಯವನ್ನು ನೀವು ಸರಿ ಮಾಡಲು ನೀವು ಸಮರ್ಥರಾಗುವಿರಿ. ಕರಗತವಾದ ವಿಷಯವನ್ನು ಮರೆಯುವ ಸಾಧ್ಯತೆ ಇದೆ. ಪ್ರತಿಯೊಬ್ಬರದ್ದೂ ಜೀವನವು ಭಿನ್ನವಾಗಿದ್ದು ಹೋಲಿಕೆ ಬೇಡ.
ಸಿಂಹ ರಾಶಿ: ಪರರ ದೋಷವನ್ನು ಹೇಳುವ ಮೊದಲು ಗುಣಗಳನ್ನು ಹೇಳಿ. ಸಮಯ ಕಳೆದ ಅನಂತರ ಸಹವಾಸವು ದೋಷ ಎನಿಸಬಹುದು. ತೊಂದರೆಗೆ ಸಿಕ್ಕಿಕೊಳ್ಳಲು ನಿಮ್ಮ ಮೊಂಡುತನವೇ ಕಾರಣ. ಇದೇ ನಿಮಗೆ ಮುಳುವಾಗಬಹುದು. ಕುಟುಂಬದ ಬಗ್ಗೆ ನಿಮಗೆ ಅಭಿಮಾನದ ಕೊರತೆ ಕಾಣುವುದು. ಸಾಲಗಾರರಿಂದ ಹಿಂಸೆ ಹೆಚ್ಚಾಗುವುದು. ನಿಷ್ಪಕ್ಷಪಾತದ ನಿರ್ಧಾರದಿಂದ ನೀವು ದೊಡ್ಡವರಾಗಬಹುದು. ಹಣಕಾಸಿನ ವ್ಯವಹಾರದಲ್ಲಿ ಅಪರಿಚಿತರ ಆಗಮನವಾಗಬಹುದು. ನಿಮ್ಮನ್ನು ಕೆಲಸದಿಂದ ತೆಗೆಯುತ್ತಾರೆ ಎಂಬ ಭಯವು ಇರಲಿದೆ. ಸುಲಭದ ತುತ್ತನ್ನು ಕಷ್ಟದಿಂದ ನುಂಗಬೇಕಾಗುವುದು.
ಕನ್ಯಾ ರಾಶಿ: ಜೀವನದ ಹೊಸ ಅಧ್ಯಾಯಕ್ಕೆ ಒಳ್ಳೆ ಹೆಜ್ಜೆ ಇರಲಿ. ಹೊಸತನಕ್ಕೆ ನೀವು ಒಗ್ಗುವುದು ಕಷ್ಟವಾದೀತು. ಇಂದು ನೀವು ಅನ್ಯಸ್ಥಳದಲ್ಲಿ ಆಕಸ್ಮಿಕವಾಗಿ ವಾಸಮಾಡಬೇಕಾಗುವುದು. ನಿಮ್ಮ ಇಂದಿನ ಸ್ಥಿತಿಯು ಅಭಿವೃದ್ದಿಗೆ ಹಲವಾರು ದಾರಿಗಳನ್ನು ಹುಡುಕುವಿರಿ. ನಿಮಗಿರುವ ಚಂಚಲ ಮನಸ್ಸಿನಿಂದ ನಕಾರಾತ್ಮಕ ಯೋಚನೇಗಳೇ ಕಾಣಿಸಬಹುದು. ನಿಮ್ಮ ಸ್ಥಿರಾಸ್ತಿಯನ್ನು ಮಾರಾಟಮಾಡುವಿರಿ. ಇಂದು ನೀವು ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯಲು ಇಚ್ಛಿಸುವಿರಿ. ವೃತ್ತಿಯ ಸ್ಥಳದಲ್ಲಿ ಪ್ರೇಮವು ಅಂಕುರಿಸುವುದು. ಆತುರತೆಯು ನಿಮ್ಮ ಮನಸ್ಸನ್ನು ಕೆಡಿಸೀತು.
ತುಲಾ ರಾಶಿ: ಹಳೆಯ ಘಟನೆಗಳನ್ನು ಸ್ಮರಿಸಿ ದುಃಖಿಸುವಿರಿ. ಬೇರೆಯವರು ತಪ್ಪು ಮಾಡಿದ್ದಾರೆ ಎಂದು ನೀವೂ ಮಾಡಲು ಹೋದರೆ ಸಿಕ್ಕಿಬೀಳುವಿರಿ. ಯಾರದೋ ಮೇಲಿನ ಸಿಟ್ಟನ್ನು ಮನೆಮಂದಿಯ ಮೇಲೆ ತೋರಿಸುವಿರಿ. ನಿಮ್ಮ ಸಂಕಟಕ್ಕೆ ಪರರನ್ನು ಜರಿದು ಪ್ರಯೋಜನವಾಗದು. ವಾಹನ ಓಡಾಡವು ಸುಖಕರವಲ್ಲ. ತಾಯಿಗೆ ಕೊಡುವ ಗೌರವವು ಕಡಿಮೆ ಆದೀತು. ಕರ್ತವ್ಯಗಳನ್ನು ದೃಢ ಮನಸ್ಸಿನಿಂದ ಮಾಡುವಿರಿ. ಇಂದು ವಾಸದ ಮನೆಯನ್ನು ಬದಲಿಸುವಿರಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣುವುದು. ನಿಮ್ಮ ಬಗ್ಗೆ ಸಹೋದ್ಯೋಗಿಗಳು ಆಡುಕೊಳ್ಳುವರು.
ವೃಶ್ಚಿಕ ರಾಶಿ: ದೈವಬಲದಿಂದ ಯಶಸ್ಸು ಸಿಗುವುದು. ಹೊಸ ಮನೆಯಲ್ಲಿ ನಿಮಗೆ ಬೇಕಾದ ಅನುಕೂಲತೆಗಳ ಮನೆಯವರಲ್ಲಿ ಹೇಳುವಿರಿ. ನೀವು ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಬೇಕಾದೀತು. ಹಣ ಕೊಟ್ಟರೂ ಸಿಗದ ಸಂಪತ್ತನ್ನು ಗಳಿಸುವಿರಿ.ಇಷ್ಟ ಪಟ್ಟವರನ್ನು ಮದುವೆಯಾಗುವ ಮಕ್ಕಳ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುವಿರಿ. ಅಮೂಲ್ಯ ವಸ್ತುಗಳನ್ನು ಕಳೆದುಕೊಂಡು ಸಂಕಟಪಡಬೇಕಾದೀತು. ಹಳೆಯ ಖಾಯಿಲೆಗಳು ಕಾಣಿಸಿಕೊಳ್ಳಬಹುದು. ಏಕಾಂತದಲ್ಲಿ ಹೆಚ್ಚಿನ ಸಮಯವನ್ನು ಕಳೆಯುವಿರಿ. ಹಳೆಯ ನಿಮ್ಮ ಸ್ನೇಹಿತವು ದೂರಾಗುವುದು. ಹೊಸ ಮನೆಯ ನಿರ್ಮಾಣದ ಬಗ್ಗೆ ದೊಡ್ಡ ಕನಸು ಕಾಣುವಿರಿ.
ಧನು ರಾಶಿ: ಬೆಂಬಲಿಗರಿಗೆ ಸಂತೋಷವನ್ನು ಕೊಡುವಿರಿ. ಸರಳ ಎಂದುಕೊಂಡ ಕೆಲಸವೇ ಇಂದು ಕಷ್ಟವಾಗುವುದು. ಯಾರ ಮೇಲೋ ಹಠಸಾಧಿಸುವುದು ಬೇಡ. ನಿಮ್ಮ ಸಂಬಂಧಗಳ ಬಗ್ಗೆ ಇಂದು ಹೆಚ್ಚು ಆಲೋಚಿಸುವಿರಿ. ಸದ್ಭಾವದಿಂದ ಮಾಡುವ ಕಾರ್ಯವು ಸತ್ಫಲವನ್ನೇ ಕೊಡುವುದು. ಇಂದು ನಿಮ್ಮ ನಕಾರಾತ್ಮಕ ಭಾವನೆಗಳು ಹೆಚ್ಚಿರುವುದು. ನಿಮ್ಮ ಸ್ವಭಾವದಂತೆ ಎಲ್ಲರನ್ನು ನಂಬುವಿರಿ. ಎಲ್ಲ ಜವಾಬ್ದಾರಿಯನ್ನೂ ಮಕ್ಕಳಿಗೆ ವಹಿಸಿ ನೀವು ನಿಶ್ಚಿಂತರಾಗುವಿರಿ. ನಿಮ್ಮ ಕೆಲಸವು ಪೂರ್ಣವಾಗದೇ ಹೇಳಿಸಿಕೊಳ್ಳುವಿರಿ. ನೆಮ್ಮದಿಯನ್ನು ಪಡೆಯಲು ನಿಮಗೆ ಸಮಯ ಬೇಕಾದೀತು. ನಿಗದಿತ ಸಮಯಕ್ಕೆ ನಿಮ್ಮ ಕಾರ್ಯವನ್ನು ಮುಗಿಸಿ. ಅಪ್ರಾಮಾಣಿಕರಂತೆ ನಿಮಗೇ ಅನ್ನಿಸಬಹುದು.
ಮಕರ ರಾಶಿ: ವಿವಾಹದ ಮಾತುಕತೆಗೆ ನಿಮ್ಮ ಒಪ್ಪಿಗೆ ಇರದು. ನಾಚಿಕೆಯ ಸ್ವಭಾವವು ಯಸರ ಜೊತೆಯೂ ಬೆರೆಯಲಾಗದು. ಸ್ತ್ರೀಯರಲ್ಲಿ ಸಹಾಯವನ್ನು ಕೇಳಲು ಹಿಂಜರಿಕೆ ಆಗುವುದು. ನಿಮಗೆ ಇಷ್ಟವಾದದನ್ನು ಪಡೆಯುವ ಕಡೆಗೆ ನಿಮ್ಮ ಗಮನ ಇರಲಿ. ನಿಮ್ಮ ಕೆಲಸವನ್ನು ಬೇರೆಯವರ ಮೂಲಕ ಮಾಡಿಸಿಕೊಳ್ಳುಬಿರಿ. ಇಂದು ನಿಮಗೆ ಅವ್ಯಕ್ತ ಭಯವು ಇರಲಿದೆ. ಸಹೋದರರು ನಿಮಗೆ ಧನ ಸಹಾಯವನ್ನು ಕೇಳಿದರೆ ಮಾಡಬಹುದು. ಉದ್ಯೋಗದಲ್ಲಿ ವೇತನವನ್ನು ಹೆಚ್ಚಿಸಿಕೊಳ್ಳಲು ಮೇಲಧಿಕಾರಿಗಳ ಜೊತೆ ಮಾತನಾಡುವಿರಿ.
ಕುಂಭ ರಾಶಿ: ನಿಮ್ಮ ಸಾಹಸಕ್ಕೆ ಮೆಚ್ಚುಗೆ ಸಿಗಬಹುದು. ಬಂಧುಗಳ ಬಗ್ಗೆ ನಿಮಗೆ ಒಳ್ಳೆಯ ಅಭಿಪ್ರಾಯ ಬರದು. ಇಂದು ನಿಮಗೆ ಆತ್ಮೀಯರ ಒಡನಾಡ ಅಧಿಕವಾಗಲಿದೆ. ನಿಮ್ಮ ಸ್ವಭಾವದಿಂದ ನಿಮಗೆ ಕಿರಿಕಿರಿಯಾಗಬಹುದು. ನಿಮ್ಮ ಕೆಲಸವನ್ನು ಮಾಡಿಸಿಕೊಳ್ಳಲು ಹಣವನ್ನು ನೀಡಬೇಕಾಗುವುದು. ಇನ್ನೊಬ್ಬರ ಮಾತುಗಳನ್ನು ನೀವು ಸಹಿಸುವುದು ಕಷ್ಟವಾದೀತು. ಮಕ್ಕಳಿಂದ ಇಂದು ಹೆಚ್ಚು ನಿರೀಕ್ಷಿಸುವಿರಿ. ಹೊಸ ಉದ್ಯೋಗದಲ್ಲಿ ಉತ್ಸಾಹವು ಇರಲಿದೆ. ಆತ್ಮವಿಶ್ವಾಸದ ಕೊರತೆಯನ್ನು ನಿಮ್ಮ ಪ್ರಾಮಾಣಿಕ ಪ್ರಯತ್ನವು ಸಾಧಿಸಬಹುದು. ಒಂಟಿ ಜನರು ಇಂದು ಆಸಕ್ತಿದಾಯಕ ವ್ಯಕ್ತಿಯನ್ನು ಭೇಟಿಯಾಗುತ್ತಾರೆ.
ಮೀನ ರಾಶಿ: ನಿಮ್ಮನ್ನು ಎಲ್ಲ ಕಡೆಯಿಂದ ನಿಯಂತ್ರಿಸುವ ಕಾರ್ಯವನ್ನು ಮಾಡುವರು. ಸೋಲು ಗೆಲುವನ್ನು ನೀವು ಸಮಾನವಾಗಿ ಸ್ವೀಕರಿಸುವುದು ಮುಖ್ಯ. ಸಾಮಾಜಿಕ ಜಾಲತಾಣದಿಂದ ಸಮಸ್ಯೆಗೆ ಸಿಕ್ಕಿಕೊಳ್ಳುವಿರಿ. ಕೆಡಕು ಮಾಡುವ ಮನಸ್ಸು ನಿಮಗೆ ಶೋಭೆಯಲ್ಕ. ಕರ್ತವ್ಯಕ್ಕೆ ನಿಮ್ಮ ಮನಸ್ಸನ್ನು ಕೊಟ್ಟುಕೊಳ್ಳುವಿರಿ. ಸಂಗಾತಿಯ ಬಗ್ಗೆ ಸಂಶಯ ಬೇಡ. ಕೆಟ್ಟ ಸುದ್ದಿಯಿಂದ ವಿಚಲಿತರಾಗದಿರಿ. ಯಾರ ಮಾತನ್ನೂ ಅಲ್ಲಗಳೆಯಲು ಹೋಗಲಾರಿರಿ. ಪಾಲುದಾರಿಕೆಯಲ್ಲಿ ನಿಮಗೆ ಆಸಕ್ತಿಯು ಕಡಿಮೆಯಾಗಬಹುದು. ಮಕ್ಕಳಿಂದ ನಿಮಗೆ ಧನಪ್ರಾಪ್ತಿಯ ಸಂಭವವಿದೆ. ನಿಮ್ಮ ನಡವಳಿಕೆಯಿಂದ ಅನುಮಾನ ಬರಬಹುದು.