Fri. Jan 2nd, 2026

Mangalore : ವಾಹನ ಹಿಮ್ಮುಖ ಚಲಿಸಿ ಮೂರುವರೆ ವರ್ಷದ ಮಗು ಸಾವು

ಮಂಗಳೂರು: ನಿಲ್ಲಿಸಿದ್ದ ವಾಹನವೊಂದು ಹಿಮ್ಮುಖವಾಗಿ ಚಲಿಸಿದ ಪರಿಣಾಮ, ಹಿಂಬದಿ ಆಟವಾಡುತ್ತಿದ್ದ ಪುಟ್ಟ ಮಗು ವಾಹನದಡಿ ಸಿಲುಕಿ ಸಾವನ್ನಪ್ಪಿದ ಘಟನೆ ಬುಧವಾರ ಬಂಟ್ವಾಳ ತಾಲೂಕಿನ ಲೊರೆಟ್ಟೊಪದವು ಎಂಬಲ್ಲಿ ನಡೆದಿದೆ.


ಫರಂಗಿಪೇಟೆ ಸಮೀಪದ ಪತ್ತನಬೈಲ್ ನಿವಾಸಿಯಾಗಿರುವಬ ಉನೈಸ್ ಮತ್ತು ಆಶೂರಾ ದಂಪತಿಯ ಮಗಳು ಆಶೀಕಾ ಎಂಬ ಮೂರುವರೆ ವರ್ಷದ ಹೆಣ್ಣುಮಗು ಸಾವನ್ನಪ್ಪಿದ್ದಾಳೆ.


ಮಗುವಿನ ತಾಯಿಯ ತವರು ಲೊರೆಟ್ಟೊಪದವಿನ ಟಿಪ್ಪುನಗರದಲ್ಲಿದ್ದು, ತಾಯಿಯೊಂದಿಗೆ ಮಗು ಅಲ್ಲಿಗೆ ಬಂದಿದ್ದು, ಬುಧವಾರ ಮನೆಯ ಹೊರಗೆ ಆಟವಾಡುತ್ತಿತ್ತು. ತಾಯಿಯ ಸಹೋದರ ಟಾಟಾ ಏಸ್ ವಾಹನವನ್ನು ಹೊಂದಿದ್ದು, ಅದನ್ನು ಮನೆಯಂಗಳದಲ್ಲಿ ನಿಲ್ಲಿಸಿ ಹೋಗಿದ್ದರು. ಮಗು ಆಟವಾಡುತ್ತಿದ್ದ ವೇಳೆ ವಾಹನ ಏಕಾಏಕಿ ಹಿಂದಕ್ಕೆ ಚಲಿಸಿದೆ ಎನ್ನಲಾಗಿದೆ.

ಈ ಘಟನೆಯ ಕುರಿತು ಅರಿವಿಲ್ಲದ ಮಗು ಆಟವಾಡುತ್ತಿದ್ದ ಜಾಗಕ್ಕೇ ವಾಹನ ಹಿಂದಕ್ಕೆ ಬಂದು ಮಗುವಿನ ಮೇಲೆರಗಿದೆ. ಈ ವಿಷಯ ಮನೆಯವರಿಗೆ ಗೊತ್ತಾದ ತಕ್ಷಣ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ವಾಹನದ ಘಾತದಿಂದ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಕುರಿತು ಮಾಹಿತಿ ಪಡೆದ ಬಂಟ್ವಾಳ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *