ಬೆಳ್ತಂಗಡಿ:(ನ.8) ಬೆಳ್ತಂಗಡಿ ವಕೀಲರ ಸಂಘದಿಂದ ದೀಪಾವಳಿ ಹಬ್ಬದ ಸಂಭ್ರಮಾಚರಣೆಯು ವಕೀಲರ ಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಮನು ಬಿ.ಕೆ. ದೀಪಾವಳಿಯ ಬಗ್ಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದೀಪಾವಳಿ ಹಬ್ಬದ ಮಹತ್ವದ ಬಗ್ಗೆ ಬೆಳ್ತಂಗಡಿ ವಕೀಲರ ಸಂಘದ ಸದಸ್ಯರು ಆದ ನ್ಯಾಯವಾದಿ ಶ್ರೀ ಶ್ರೀಕೃಷ್ಣ ಶೆಣೈ ಬಹಳ ಅರ್ಥವತ್ತಾಗಿ ವಿವರಿಸಿದರು.
ಇದನ್ನೂ ಓದಿ: 🔴ಮಿತ್ತಬಾಗಿಲು: ಎಸ್ ಡಿ ಎಂ ಪದವಿಪೂರ್ವ ಕಾಲೇಜಿನ ರಾ. ಸೇ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ
ಅಧ್ಯಕ್ಷೀಯ ನೆಲೆಯಲ್ಲಿ ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ವಸಂತ ಮರಕಡ ಮಾತನಾಡಿದರು.
ನೆರೆದಿದ್ದ ಎಲ್ಲರನ್ನು ಬೆಳ್ತಂಗಡಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿಯಾದ ಶ್ರೀ ನವೀನ್ ಬಿ.ಕೆ. ಸ್ವಾಗತಿಸಿದರು.
ವೇದಿಕೆಯಲ್ಲಿ ಹಿರಿಯ ವಕೀಲರ ಸಮಿತಿಯ ಅಧ್ಯಕ್ಷರಾದ ಶ್ರೀ ಅಲೋಸಿಯಸ್ ಎಸ್ ಲೋಬೊ ಹಾಗೂ ಕೋಶಾಧಿಕಾರಿಯಾದ ಶ್ರೀ ಪ್ರಶಾಂತ್ ಎಂ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ವೈವಾಹಿಕ ಬೆಳ್ಳಿಹಬ್ಬವನ್ನು ಆಚರಿಸುತ್ತಿರುವ ಶ್ರೀ ಬಿ.ಕೆ .ಧನಂಜಯ ರಾವ್ ಹಾಗೂ ಶ್ರೀಮತಿ ರಾಜರ್ಷಿ ದಂಪತಿಗಳನ್ನು ಗೌರವಿಸಲಾಯಿತು.
ಹಿರಿಯ ವಕೀಲರಾದ ಬಿ.ಕೆ. ಧನಂಜಯ ರಾವ್ ಎಲ್ಲರಿಗೂ ಉಪಹಾರದ ವ್ಯವಸ್ಥೆಯನ್ನು ಏರ್ಪಡಿಸಿದ್ದರು.
ಈ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಪ್ರತೀಕ್ಷಾ ಹಾಗೂ ಸಮೂಹ ಗಾಯನವನ್ನು ಅಕ್ಷಯ್ ಕುಮಾರ್ ಮತ್ತು ಉಷಾ ಎನ್ ಜಿ ತಂಡದವರು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಎಲ್ಲರಿಗೂ ಡಿ ಧನಂಜಯ ಕುಮಾರ್ ಧನ್ಯವಾದಗಳನ್ನು ಸಮರ್ಪಿಸಿದರು.
ಈ ಕಾರ್ಯಕ್ರಮದ ನಿರೂಪಣೆಯನ್ನು ವಕೀಲರಾದ ಹರ್ಷಿತ್ ಕುಮಾರ್ ಹಾಗೂ ಸಂಧ್ಯಾ ರವರು ನಿರೂಪಿಸಿದರು.