ಕೇರಳ: (ನ.8) ಇದು ಸುಂದರಿಯ ಸಿಹಿ ಧ್ವನಿ, ಪಿಸು ಮಾತಿನ ವಾಟ್ಸ್ಆ್ಯಪ್ ಕಾಲ್, ವಿಡಿಯೋ ಕಾಲ್ ಸುಳಿಗೆ ಸಿಲುಕಿ ಕೋಟ್ಯಾಂತರ ರೂಪಾಯಿ ಕಳೆದುಕೊಂಡವರ ನೋವಿನ ವ್ಯಥೆ. ಕೇರಳದ ಕಿಲಾಡಿ ದಂಪತಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮಹಿಳೆಯ ಮೋಹದ ಪಾಶಕ್ಕೆ ಸಿಲುಕಿದ ವ್ಯಾಪಾರಿಯೊಬ್ಬರು ವಿಲವಿಲ ಒದ್ದಾಡಿದ್ದಾರೆ.
ತ್ರಿಶೂರ್ ವ್ಯಾಪಾರಿಯೊಬ್ಬರ ಹನಿಟ್ರ್ಯಾಪ್ ಮಾಡಿ ಬರೋಬ್ಬರಿ 2.5 ಕೋಟಿ ರೂಪಾಯಿ ಹಣ ವಸೂಲಿ ಮಾಡಲಾಗಿದೆ. ದೂರು ದಾಖಲಿಸಿಕೊಂಡಿರುವ ತ್ರಿಶೂರ್ ಪೊಲೀಸರು ಕೊಲ್ಲಂ ಜಿಲ್ಲೆಯ 32 ವರ್ಷದ ಸೂಜನ್, 38 ವರ್ಷದ ಶಿಮಿ ಎಂಬ ದಂಪತಿಯನ್ನು ಬಂಧಿಸಿದ್ದಾರೆ.
ಸೂಜನ್ ಹಾಗೂ ಶಿಮಿ ದಂಪತಿ ಐಷಾರಾಮಿ ಜೀವನ ನಡೆಸಲು ಹನಿಟ್ರ್ಯಾಪ್ ಬಲೆ ಹೆಣೆದಿದ್ದಾರೆ. ಮೊದಲಿಗೆ ಶಿಮಿ ಎಂಬ ಯುವತಿ ಸೋಷಿಯಲ್ ಮೀಡಿಯಾ ಮೂಲಕ ವ್ಯಾಪಾರಿಯ ಪರಿಚಯ ಮಾಡಿಕೊಂಡಿದ್ದಾರೆ. ತಾನು ಮದುವೆಯಾಗಿಲ್ಲ ಎಂದು ಹೇಳಿ ವ್ಯಾಪಾರಿ ಜೊತೆ ಬಣ್ಣ, ಬಣ್ಣದ ಮಾತನಾಡಿ ಆತ್ಮೀಯತೆ ಬೆಳೆಸಿಕೊಂಡಿದ್ದಾರೆ.
ಪರಿಚಯದ ಬಳಿಕ ವ್ಯಾಪಾರಿಗೆ ವಿಡಿಯೋ ಕಾಲ್ ಮಾಡಿ ಸಲುಗೆ ಬೆಳೆಸಿಕೊಂಡಿದ್ದಾರೆ. ಸೆಕ್ಸ್ ಚಾಟ್, ತನ್ನ ಫೋಟೋಗಳನ್ನು ಶಮಿ ಕಳಿಸಿದ್ದಾರೆ. ಇದಾದ ಬಳಿಕ ವ್ಯಾಪಾರಿ ಬಳಿ ಹಂತ ಹಂತವಾಗಿ ಶಮಿ ಹಣ ಪಡೆದಿದ್ದಾರೆ.
ಹನಿಟ್ರ್ಯಾಪ್ ಬಲೆಗೆ ಬಿದ್ದ ತ್ರಿಶೂರ್ ಉದ್ಯಮಿ, ಹೆಂಡತಿ, ಅತ್ತೆಯ ಹೆಸರಿನಲ್ಲಿದ್ದ ಫಿಕ್ಸೆಡ್ ಡಿಪಾಸಿಟ್ ಹಣವನ್ನು ವಿತ್ ಡ್ರಾ ಮಾಡಿ ಶಿಮಿಗೆ ನೀಡಿದ್ದಾರೆ. ಇಷ್ಟಕ್ಕೂ ಸುಮ್ಮನಾಗದ ಶಿಮಿ ವ್ಯಾಪಾರಿ ಬಳಿ ಮತ್ತಷ್ಟು ಹಣವನ್ನು ನೀಡುವಂತೆ ಡಿಮ್ಯಾಂಡ್ ಮಾಡಿದ್ದಾರೆ.
ಕೇಳಿದಷ್ಟು ಹಣ ನೀಡದಿದ್ದರೆ ಉದ್ಯಮಿಯ ಸೆಕ್ಸ್ ಚಾಟ್‌ನ ವಿವರ ಹಾಗೂ ಫೋಟೋವನ್ನು ಬಹಿರಂಗಗೊಳಿಸುವ ಬೆದರಿಕೆಯನ್ನು ಶಮಿ ಹಾಕಿದ್ದಾರೆ. ಕೊನೆಗೆ 2.5 ಕೋಟಿ ಕಳೆದುಕೊಂಡ ಕೇರಳದ ಉದ್ಯಮಿ ಪೊಲೀಸರಿಗೆ ದೂರು ನೀಡಿದ್ದಾರೆ. ಹನಿಟ್ರ್ಯಾಪ್ ಕೇಸ್‌ನ ಕಾರ್ಯಾಚರಣೆ ನಡೆಸಿದ ಪೊಲೀಸರು ವಯನಾಡ್‌ನಲ್ಲಿ ಈ ದಂಪತಿಯನ್ನು ಬಂಧಿಸಿದ್ದಾರೆ.
ಸೂಜನ್ ಹಾಗೂ ಶಿಮಿ ದಂಪತಿ ಕಳೆದ 2 ವರ್ಷದಲ್ಲಿ 2.5 ಕೋಟಿ ರೂಪಾಯಿ ಹಣ ವಸೂಲಿ ಮಾಡಿದ್ದಾರೆ. ಇದೇ ಹನಿಟ್ರ್ಯಾಪ್ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಈ ದಂಪತಿಗಳಿಂದ 4 ಲಕ್ಷುರಿ ಕಾರು, ಜೀಪ್, ಅಪಾರ ಚಿನ್ನದ ಒಡವೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವ್ಯಾಪಾರಿಯಿದ ದಂಪತಿಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗಿರುವ ದಾಖಲೆಯನ್ನು ಪೊಲೀಸರು ಸಂಗ್ರಹಿಸಿದ್ದಾರೆ.