Wed. Nov 20th, 2024

Nelamangala: ಗಂಡ್ಸಾಗಿದ್ದರೆ ಪೊಲೀಸ್​​ಗೆ ಹೊಡಿ ಎಂದ ತಾಯಿ – ಮಗ ಮಾಡಿದ್ದೇನು ಗೊತ್ತಾ?!

ನೆಲಮಂಗಲ (ನ.8) : ತಾಯಿಯ ಮಾತಿನಿಂದ ಪ್ರಚೋದನೆಗೊಂಡ ಮಗ ಮಹಿಳಾ ಪಿಎಸ್​ಐ ಮೇಲೆ ಹಲ್ಲೆ ಮಾಡಿದ್ದಾನೆ. ಮಧುಸೂದನ್​ ಹಲ್ಲೆ ಮಾಡಿದ ಆರೋಪಿ. ಬಿಇ ಡ್ರಾಪ್​ಔಟ್ ಆಗಿರುವ ಮಧುಸೂದನ್​ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಮುಕ್ತಿನಾಥೇಶ್ವರ ಬಡಾವಣೆಯಲ್ಲಿ ವಾಸವಾಗಿದ್ದಾನೆ.

ಇದನ್ನೂ ಓದಿ: 💥Samantha Ruth Prabhu: ಪಡ್ಡೆ ಹುಡುಗರ ಎದೆಬಡಿತ ಹೆಚ್ಚಿಸಿದ ಸಮಂತಾ

ಈ ಸಂದರ್ಭದಲ್ಲಿ ಸುಶೀಲಮ್ಮ, “ದೂರು ಕೊಟ್ಟು ಪೊಲೀಸರಿಂದ ಹೊಡೆಸಿದರೇ, ಪೊಲೀಸರಿಗೆ ತಿರುಗಿ ಹೊಡೆಯುವೆ ಅಂತ ಹೇಳುತ್ತಿದ್ದಿಯಲ್ಲ. ಈಗ ಹೊಡಿ ನೋಡೋಣ. ನೀನು ಗಂಡಸಾಗಿದ್ದರೆ ಪೊಲೀಸರಿಗೆ ಹೊಡೆದು ತೋರಿಸು. ಹೊಡಿ ಈಗ ಪೊಲೀಸರಿಗೆ ನೋಡೋಣ” ಎಂದು ಮಗ ಮಧುಸೂದನ್​ನನ್ನು ಪ್ರಚೋದಿಸಿದ್ದಾಳೆ. ಪ್ರಚೋದನೆಗೊಂಡ ಮಧುಸೂದನ್​ ಮಹಿಳಾ ಪಿಎಸ್​ಐ ಜಯಂತಿ ಮೇಲೆ ಹಲ್ಲೆ ಮಾಡಿದ್ದಾನೆ. ಮಹಿಳಾ ಪಿಎಸ್​​ಐ ಜಯಂತಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುರುವಾರ ರಾತ್ರಿ 10 ಗಂಟೆ ಸುಮಾರು ನೆಲಮಂಗಲ ಟೌನ್ ಠಾಣೆಯಲ್ಲಿ ಘಟನೆ ನಡೆದಿದೆ. ಮಧುಸೂದನ್​ ವಿರುದ್ಧ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಮಧುಸೂದನ್​ನನ್ನು ಪೊಲೀಸರು ಬಂಧಿಸಿದ್ದಾರೆ. ಮಧುಸೂದನ್​ ವಿರುದ್ಧ ಕಲಂ-132 ,121(1 ),121(2),352, 54, ಜೊತೆಗೆ 3(5) ಬಿಎನ್ಎಸ್ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *