Wed. Nov 20th, 2024

Viral News : ಬ್ರೇಕಪ್‌ನಿಂದ ಹೊರ ಬರಲು ಒಂದು ವಾರ ರಜೆ ಕೊಡಿ ಎಂದ ಉದ್ಯೋಗಿ..‼ – ಕಂಪೆನಿ ಮ್ಯಾನೇಜರ್‌ ಮಾಡಿದ್ದೇನು ಗೊತ್ತಾ??

Viral News :(ನ.9) ಬ್ರೇಕಪ್ ನೋವಿನಿಂದ ಹೊರ ಬರುವುದು ಅಷ್ಟು ಸುಲಭದ ವಿಷಯವೇ ಅಲ್ಲ. ಇದು ಹೃದಯದಲ್ಲಿ ಅಳಿಸಲಾಗದ ಗಾಯವನ್ನು ಮಾಡುತ್ತದೆ. ಈ ನೋವಿನಿಂದ ಹೊರ ಬರಲಾರದೆ ಖಿನ್ನತೆಗೆ ಜಾರಿದವರು, ಆತ್ಮಹತ್ಯೆ ಮಾಡಿಕೊಂಡವರೂ ಇದ್ದಾರೆ.

ಇದನ್ನೂ ಓದಿ: 🟠ಉಜಿರೆ: ಬೆನಕ ಆಸ್ಪತ್ರೆಯಲ್ಲಿ ನೂತನ “ವೆಂಟಿಲೇಟರ್” ಉದ್ಘಾಟನೆ

ಇನ್ನೂ ಅನೇಕರು ಬ್ರೇಕಪ್ ನೋವಿನಿಂದ ಹೊರ ಬರಲು ಹಲವಾರು ಸರ್ಕಸ್‌ಗಳನ್ನು ಮಾಡುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ Gen Z ಉದ್ಯೋಗಿ ಬ್ರೇಕಪ್ ನೋವಿನಿಂದ ಹೊರಬರಲು ಬರೊಬ್ಬರಿ 1 ವಾರದ ರಜೆಯನ್ನು ತೆಗೆದುಕೊಂಡಿದ್ದಾನೆ. ಕಂಪೆನಿ ಮ್ಯಾನೇಜರ್ Gen Z ಉದ್ಯೋಗಿಯ ಬ್ರೇಕಪ್ ಲೀವ್ ಸ್ಟೋರಿಯನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

https://twitter.com/siddharthshahx/status/1853748708107837589


ಸೋಷಿಯಲ್‌ ಮೀಡಿಯಾದ ಬಳಕೆದಾರರು ಹಲವಾರು ಇಂಟರೆಸ್ಟಿಂಗ್ ಸ್ಟೋರಿಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬರು ಕಂಪೆನಿ ಮ್ಯಾನೇಜರ್ ತಮ್ಮ Gen Z ಉದ್ಯೋಗಿಯ ಬ್ರೇಕಪ್ ಲೀವ್ ಬಗೆಗಿನ ಕಥೆಯನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಇದೀಗ ಸಖತ್ ವೈರಲ್ ಆಗುತ್ತಿದೆ.

ಕೃಷ್ಣ ಮೋಹನ್ (KiMoJiRa) ಎಂಬವರು ಈ ಪೋಸ್ಟ್ ಅನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ನನ್ನ ತಂಡದ Gen Z ಸದಸ್ಯರೊಬ್ಬರು ಇದ್ದಕ್ಕಿದ್ದಂತೆ 1 ವಾರಗಳ ಕಾಲ ರಜೆ ಬೇಕೆಂದು ಕೇಳಿದರು.

ಇದು ಮೀಟಿಂಗ್ ಮತ್ತು ಪ್ಲಾನಿಂಗ್ಸ್ಗಳ ನಿರ್ಣಾಯಕ ಸಮಯ ಆಗಿದ್ದರಿಂದ ರಜೆ ತೆಗೆದುಕೊಳ್ಳಬೇಡಿ ಎಂದು ನಾನು ಹೇಳಿದೆ. ಆದ್ರೆ ಅವರು ಹಠ ಹಿಡಿದು ಬ್ರೇಕಪ್ ಆದ ಕಾರಣ ಬ್ರೇಕಪ್ ನೋವನ್ನು ಮರೆಯಲು ಬೆಟ್ಟ ಗುಡ್ಡ ಇರುವ ಸ್ಥಳಕ್ಕೆ ಪ್ರವಾಸ ಹೋಗಬೇಕೆಂದು ರಜೆ ತೆಗೆದುಕೊಂಡರು” ಎಂದು ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *