ಮೀರತ್:(ನ.10) ಬೀದಿ ಬದಿಯ ನಾಯಿಮರಿಗಳ ಮೇಲೆ ಪೆಟ್ರೋಲ್ ಸುರಿದು ಸಜೀವ ದಹನ ಮಾಡಿದ ಆರೋಪದ ಮೇಲೆ ಇಬ್ಬರು ಮಹಿಳೆಯರ ವಿರುದ್ಧ ಮೀರತ್‌ನ ಕಂಕೇರಖೇಡಾ ಪ್ರದೇಶದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ⭕ಮುಲ್ಕಿ: ಗ್ಲಾಸ್ ಪೀಸ್ ನಿಂದ ಹೆಂಡತಿ ಮಗುವನ್ನು ಸಾಯಿಸಿ, ತಾನೂ ರೈಲಿನಡಿಗೆ ತಲೆಕೊಟ್ಟು ಆತ್ಮಹತ್ಯೆ!!
ಸ್ಥಳೀಯರ ಪ್ರಕಾರ, ಅದೇ ನೆರೆಹೊರೆಯ ನಿವಾಸಿಗಳಾದ ಮಹಿಳೆಯರು ನಾಯಿಮರಿಗಳ ಬೊಗಳುವಿಕೆಯಿಂದ ಹತಾಶೆಗೊಂಡಿದ್ದರು. ಅದೇ ಕಾರಣಕ್ಕೆ ನಾಯಿಮರಿಗಳನ್ನು ಜೀವಂತವಾಗಿ ಸುಟ್ಟುಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಅನಿಮಲ್ ಕೇರ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಅಂಶುಮಾಲಿ ವಶಿಷ್ಠ್ ನೀಡಿದ ಹೇಳಿಕೆ ಆಧರಿಸಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಠಾಣಾಧಿಕಾರಿ ಜಿತೇಂದ್ರ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.
ಕಂಕೇರಖೇಡ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಇಬ್ಬರು ಆರೋಪಿಗಳಾದ ಶೋಭಾ ಮತ್ತು ಆರತಿ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಸೆಕ್ಷನ್ 325ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆ ದೂರಿನ ಪ್ರಕಾರ, ರೋಹ್ಟಾ ರಸ್ತೆಯ ಸಂತ ನಗರ ಕಾಲೋನಿಯಲ್ಲಿ ನವೆಂಬರ್ 5ರಂದು ಈ ಘಟನೆ ನಡೆದಿದೆ.
ಇತ್ತೀಚೆಗಷ್ಟೇ ಬೀದಿ ನಾಯಿಯೊಂದು 5 ನಾಯಿ ಮರಿಗಳಿಗೆ ಜನ್ಮ ನೀಡಿತ್ತು. ಅವು ರಾತ್ರಿ ವೇಳೆ ಕೂಗುತ್ತಿದ್ದವು. ಇದರಿಂದ ಕಿರಿಕಿರಿಯಾಗಿದ್ದ ಮಹಿಳೆಯರು ಆ ನಾಯಿಮರಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ನಾಯಿ ಮರಿಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.