Mon. Apr 14th, 2025

Pakshikere: ಗ್ಲಾಸ್ ಪೀಸ್ ನಿಂದ ಹೆಂಡತಿ ಮಗುವನ್ನು ಸಾಯಿಸಿ, ತಾನೂ ರೈಲಿನಡಿಗೆ ತಲೆಕೊಟ್ಟು ಆತ್ಮಹತ್ಯೆ!! – ಕೃತ್ಯ ಎಸಗುವ ಮುನ್ನ ಡೆತ್‌ ನೋಟ್‌ ಬರೆದ ಕಾರ್ತಿಕ್!!‌ – ಸುದೀರ್ಘ ಡೆತ್‌ ನೋಟ್‌ ನಲ್ಲಿ ಏನಿದೆ?! – ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಹೇಳಿದ್ದೇನು?!

ಪಕ್ಷಿಕೆರೆ :(ನ.10) ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಕ್ಷಿಕೆರೆ ಜಲಜಾಕ್ಷ ರೆಸಿಡೆನ್ಸಿ ಬಹು ಮಹಡಿ ಕಟ್ಟಡದಲ್ಲಿ ವಾಸವಿದ್ದ ವ್ಯಕ್ತಿಯೋರ್ವ ಪತ್ನಿ, ಮಗುವನ್ನು ಹತ್ಯೆಗೈದು ತಾನೂ ರೈಲಿನಡಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ದುರಂತ ಘಟನೆ ನಡೆದಿದೆ.

ಇದನ್ನೂ ಓದಿ: ⭕ಬಂಟ್ವಾಳ: ಪ್ರಿಯತಮೆಯನ್ನು ಭೇಟಿಯಾಗಲು ನಡುರಾತ್ರಿ ಬಂದ ಲವ್ವರ್‌

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಸ್ಥಳೀಯ ನಿವಾಸಿ ಕಾರ್ತಿಕ್ ಭಟ್ (32) ಎಂದು ಗುರುತಿಸಲಾಗಿದ್ದು, ಪತ್ನಿ ಪ್ರಿಯಾಂಕ (28), ಮಗು ಹೃದಯ್ (4) ಹತ್ಯೆಗೀಡಾದ ದುರ್ದೈವಿಗಳು ಎಂದು ತಿಳಿದುಬಂದಿದೆ. ನ.08 ಶುಕ್ರವಾರ ಈ ಘಟನೆ ನಡೆದಿದೆ ಎನ್ನಲಾಗಿದೆ.

ಆರೋಪಿ ಕಾರ್ತಿಕ್ ಪಕ್ಷಿಕೆರೆಯಲ್ಲಿರುವ ತನ್ನ ಮನೆಯಲ್ಲಿ ಪತ್ನಿ ಮತ್ತು ಮಗುವನ್ನು ಹತ್ಯೆಗೈದು ಮುಲ್ಕಿಯ ಬೆಳಾಯರುನಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಶುಕ್ರವಾರ ಮಧ್ಯಾಹ್ನ ವ್ಯಕ್ತಿಯೋರ್ವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ತನಿಖೆ ನಡೆಸುವಾಗ ಆತ್ಮಹತ್ಯೆ ಮಾಡಿಕೊಂಡವನು ಪಕ್ಷಕೆರೆಯ ಕಾರ್ತಿಕ್ ಭಟ್ ಎಂದು ತಿಳಿದಿದ್ದು, ಮನೆಗೆ ಬಂದಾಗ ಪತ್ನಿ ಮಗು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಹೇಳಿದ್ದೇನು?!

ವಾಷ್ ರೂಂನ ಕಿಟಕಿ ಗ್ಲಾಸ್ ಒಡೆದು ಪತ್ನಿ ಮಗುವಿನ ಹತ್ಯೆ ಮಾಡಿದ್ದಾನೆ, ಇಬ್ಬರ ದೇಹದ ಬೇರೆ ಬೇರೆ ಭಾಗದಲ್ಲಿ ಗಾಯಗಳಾಗಿವೆ. ಕೋಣೆಯಲ್ಲೇ ಫ್ಯಾನ್ ಗೆ ನೇಣುಹಾಕಲು ಯತ್ನಿಸಿದ್ದಾನೆ. ಬಳಿಕ ರೈಲು ಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕಾರ್ತಿಕ್ ಕೃತ್ಯ ಎಸಗುವ ಮುನ್ನ ಸುದೀರ್ಘ ಡೆತ್ ನೋಟ್ ಬರೆದಿದ್ದಾನೆ . ತನ್ನ ಅಂತ್ಯ ಸಂಸ್ಕಾರ, ಆಸ್ತಿ ಯಾರ ಪಾಲಾಗಬೇಕೆಂದು ಡೆತ್ ನೋಟ್ ನಲ್ಲಿದೆ. ತನ್ನ ತಂದೆ ತಾಯಿ ಅಂತ್ಯ ಸಂಸ್ಕಾರ ಮಾಡಬಾರದು ಎಂಬುವುದು ಉಲ್ಲೇಖ ಇದೆ. ತಮ್ಮ ಸಾವಿಗೆ ಯಾರೂ ಕಾರಣ ಅಲ್ಲ ಅಂತಾನೂ ಡೆತ್ ನೋಟ್ ನಲ್ಲಿ ಬರೆದಿದ್ದಾನೆ.


ಕಾರ್ತಿಕ್ ಕುಟುಂಬಕ್ಕೆ ಹಾಗೂ ಆತನ ತಂದೆ ತಾಯಿಗೆ ಮೂರು ವರ್ಷದಿಂದ ಮಾತುಕತೆ ಇರಲಿಲ್ಲ. ಕಾರ್ತಿಕ್ ಕುಟುಂಬ ಹೊರಗೆ ಹೋಗಿರಬಹುದು ಎಂದು ಕಾರ್ತಿಕ್ ತಂದೆ ಭಾವಿಸಿದ್ದರು. ಕಾರ್ತಿಕ್ ಇತ್ತೇಚೆಗೆ ಆರ್ಥಿಕ ಸಮಸ್ಯೆಯಿಂದ ಇರೋದು ಕೂಡಾ ಗೊತ್ತಾಗಿದೆ. ಕಾರ್ತಿಕ್ ಪತ್ನಿ ಪ್ರಿಯಾಂಕ ಶಿವಮೊಗ್ಗ ಮೂಲದವರು, ಆಕೆಯ ಹೆತ್ತವರು ಬಂದ ಬಳಿಕ ಶವ ಪೋಸ್ಟ್ ಮಾರ್ಟಂ ವ್ಯವಸ್ಥೆ ಮಾಡಲಾಗುತ್ತದೆ ಎಂದು ಪಕ್ಷಿಕೆರೆಯಲ್ಲಿ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಹೇಳಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *