ಉಜಿರೆ:(ನ.11) ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ .ವಿ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಎಸ್ ಡಿ ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉಜಿರೆಯ ವತಿಯಿಂದ 14 ವರ್ಷದೊಳಗಿನ ಮಕ್ಕಳಿಗೆ ಸಂಬಂಧಿಸಿದ ಎಲ್ಲಾ ಕಾಯಿಲೆಗಳ ತಪಾಸಣೆಯು ನವೆಂಬರ್ 17 ನೇ ಆದಿತ್ಯವಾರದಂದು ಬೆಳಿಗ್ಗೆ 9.30 ರಿಂದ 1.00 ರವರೆಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ, ಉಜಿರೆಯಲ್ಲಿ ನಡೆಯಲಿದೆ.
ಶಿಬಿರದ ಪ್ರಯೋಜನಗಳು:
- ವೈದ್ಯರ ಸಮಾಲೋಚನೆ ಉಚಿತ
- ಒಳರೋಗಿ ವಿಭಾಗದಲ್ಲಿ 10% ರಿಯಾಯಿತಿ
- ಲ್ಯಾಬ್ ಟೆಸ್ಟ್ ಮತ್ತು ರೇಡಿಯಾಲಜಿಯಲ್ಲಿ 20% ರಿಯಾಯಿತಿ
ಭಾಗವಹಿಸುವ ತಜ್ಞ ವೈದ್ಯರು:
- ಡಾ| ಅರ್ಚನಾ ಕೆ.ಎಂ.(MBBS, MD (PEAD)
ಮಕ್ಕಳ ರೋಗ ತಜ್ಞರು
- ಡಾ| ಪ್ರಥಿತ್ (MBBS, MD (PEAD)
ಮಕ್ಕಳ ರೋಗ ತಜ್ಞರು
- ಡಾ| ನಿಖಿತಾ ಮಿರ್ಲೆ (MBBS, MD (PEAD)
ಮಕ್ಕಳ ರೋಗ ತಜ್ಞರು
ಹೆಸರು ನೋಂದಾಯಿಸಲು ಸಂಪರ್ಕಿಸಿ : 7760397878 / 8073349216