Thu. Apr 10th, 2025

Abhishek Ambarish: ಅಭಿಷೇಕ್​ ಮನೆಗೆ ಎಂಟ್ರಿ ಕೊಟ್ಟ ಮರಿ ಅಂಬರೀಶ್ – ಗಂಡು ಮಗುವಿಗೆ ಜನ್ಮ ಕೊಟ್ಟ ಅವಿವಾ

Abhishek Ambarish:(ನ.12) ಅಭಿಷೇಕ್ ಅಂಬರೀಶ್ ಮನೆಯಲ್ಲಿ ಸಂಭ್ರಮ ಸಡಗರ ಮನೆ ಮಾಡಿದೆ. ಮಂಡ್ಯದ ಗಂಡು ಅಂಬರೀಶ್ ಮತ್ತೆ ಹುಟ್ಟಿ ಬಂದಿದ್ದಾರೆ. ಅಭಿಷೇಕ್ ಪತ್ನಿ ಅವಿವಾ ಇಂದು 8.30ರ ಸುಮಾರಿಗೆ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದು. ತಾಯಿ ಮಗು ಇಬ್ಬರೂ ಕೂಡ ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: 🔴ಬಂದಾರು : ಬ್ರಹ್ಮಕಲಶೋತ್ಸವ ಸಿದ್ಧತೆಯಲ್ಲಿರುವ ಪೆರ್ಲ ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ

ಇತ್ತೀಚೆಗಷ್ಟೇ ಅದ್ಧೂರಿಯಾಗಿ ಸೀಮಂತ ಕಾರ್ಯವನ್ನು ಮಾಡಿಸಿಕೊಂಡಿದ್ದ ಅವಿವಾ ಅಭಿಷೇಕ್ ಸದ್ಯದಲ್ಲಿಯೇ ಹೊಸ ಅತಿಥಿ ಬರಲಿದ್ದಾನೆ ಎಂಬ ಸಿಹಿ ಸುದ್ದಿಯನ್ನು ನೀಡಿದ್ದರು. ಇಂದು ಅವಿವಾ ಗಂಡು ಮಗುವಿಗೆ ಜನ್ಮ ನೀಡಿದ್ದು. ಕನ್ನಡದ ಧೀಮಂತ ನಟ, ಮಂಡ್ಯದ ಗಂಡು ಅಂಬರೀಶ್ ಮತ್ತೆ ಹುಟ್ಟಿ ಬಂದಿದ್ದಾರೆ ಎಂದು ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ.

ಅಭಿಷೇಕ್ ಮತ್ತು ಅವಿವಾ ರ ಮದುವೆಯು ಕಳೆದ ವರ್ಷ ಜೂನ್ 5ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆದಿತ್ತು. ಅವಿವಾ ಬಿದ್ದಪ್ಪ, ಮಾಡೆಲ್ ಹಾಗೂ ಫ್ಯಾಷನ್ ಡಿಸೈನರ್ ಆಗಿದ್ದಾರೆ. ಅವಿವಾ ತಂದೆ ಕೂಡ ದೊಡ್ಡ ಬ್ಯುಸಿನೆಸ್ ಮ್ಯಾನ್. ಇದೀಗ ಎರಡೂ ಕುಟುಂಬದಲ್ಲೂ ಸಂಭ್ರಮ ಮನೆ ಮಾಡಿದೆ.

Leave a Reply

Your email address will not be published. Required fields are marked *