Wed. Nov 20th, 2024

Nelamangala: ಆಸ್ತಿ ಕೊಟ್ಟಿಲ್ಲವೆಂದು ಮನನೊಂದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ!!

ನೆಲಮಂಗಲ:(ನ.12) ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಮನನೊಂದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ನಡೆದಿದೆ.

ಇದನ್ನೂ ಓದಿ: ⭕Tumakur : ನನ್ನ ಮಗನನ್ನು ಜೈಲಿಗೆ ಹಾಕಿ , ಇಲ್ಲಾಂದ್ರೆ ನಾನೇ ವಿಷ ಕೊಟ್ಟು ಸಾಯಿಸ್ತೀನಿ ಎಂದ ತಾಯಿ

ತಾಯಿ ಪದ್ಮ ಕೋಣೆಗೆ ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಶಿವನಗರದ ಪೃಥ್ವಿ(20) ಮೃತ ಯುವಕ. ಬಿಎ ಓದಿಕೊಂಡಿದ್ದು ಚಾಲಕನಾಗಿದ್ದ ಕೆಲಸ ಮಾಡುತ್ತಿದ್ದ.


ಅಜ್ಜಿ ಕುಳಯಮ್ಮ ಮತ್ತಿಕೆರೆಯ ಮನೆಯೊಂದನ್ನು ತನ್ನ ಮಗನ ಮಕ್ಕಳಿಗೆ ಆಸ್ತಿ ಕೊಡದೆ ಹೆಣ್ಣು ಮಗಳಿಗೆ ಕೊಟ್ಟಿರುವ ಆರೋಪ ಕೇಳಿಬಂದಿದೆ. ಈ ವಿಷಯವಾಗಿ ಸಂಬಂಧಿಕರನ್ನು ಸೇರಿಸಿ ಮಾತುಕತೆ ಮಾಡಲಾಗಿದ್ದು, ಆದರೆ ಮಾತುಕತೆ ವಿಫಲವಾಗಿದೆ.

ಈ ಘಟನೆಯಿಂದ ಮನನೊಂದ ಪೃಥ್ವಿ, ಮನೆಯ ಕೋಣೆಯಲ್ಲಿ ವೇಲ್ ಬಳಸಿ ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾನೆ. ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *