Mon. Apr 7th, 2025

Sullia: ವ್ಯಾಪಾರ ವ್ಯವಹಾರದಲ್ಲಿ ಮೋಸ – ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು !!!

ಸುಳ್ಯ:(ನ.13) ಸುಳ್ಯ ತಾಲೂಕಿನಲ್ಲಿ ವ್ಯಾಪಾರ ವ್ಯವಹಾರದಲ್ಲಿ ಮೋಸಕ್ಕೆ ಒಳಗಾಗಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.

ಇದನ್ನೂ ಓದಿ: ⭕ರಾಯಚೂರು: ಹಾಸ್ಟೆಲ್ ಹಿಂದೆ ರಾಶಿ ರಾಶಿ ಕಾಂಡೋಮ್ ಪತ್ತೆ!!

ಸುಳ್ಯದ ಗಾಂಧಿನಗರ ಅಡಿಕೆ ಅಂಗಡಿಯಲ್ಲಿ ಅಕೌಂಟ್‌ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಂಗಳೂರು ಕೊಣಾಜೆ ಸಮೀಪದ ಯುವಕ ಅಭಿಲಾಷ್‌ ಕಂಬ್ಲಿಪದವು (30) ಮೃತ ಯುವಕ. ಅಭಿಲಾಷ್‌ ಕೆಲವು ವರ್ಷಗಳ ಹಿಂದೆ ಸುಳ್ಯದಲ್ಲಿ ಖಾಸಗಿ ಟಿವಿ ಚಾನೆಲ್‌ವೊಂದನ್ನು ನಡೆಸುತ್ತಿದ್ದರು.

ಅಭಿಲಾಷ್‌ ನ. 5ರಂದು ಮಂಗಳೂರಿನಲ್ಲಿರುವ ತನ್ನ ಮನೆಯಿಂದ ಹಿಂದಿರುಗುವ ಸಂದರ್ಭದಲ್ಲಿ ಕಲ್ಲಡ್ಕದಲ್ಲಿರುವ ಅಂಗಡಿಯೊಂದರಿಂದ ರ್ಯಾಟೋಲ್‌ ಖರೀದಿಸಿ ವಿಟ್ಲದ ಹೊಟೇಲ್‌ವೊಂದರಲ್ಲಿ ಸೇವಿಸಿದ್ದರು.

ಸ್ಲೋ ಪಾಯಸನ್‌ ಸೇವಿಸಿದ್ದರಿಂದ ವೈದ್ಯರು ಪರೀಕ್ಷೆ ನಡೆಸಿ ವಿಷ ಪದಾರ್ಥವನ್ನು ಶರೀರದಿಂದ ಹೊರತೆಗೆಯುವ ಚಿಕಿತ್ಸಾ ಕ್ರಮವನ್ನು ಕೈಗೊಂಡಿದ್ದರು. ಆದರೆ ಅವರು ಮಂಗಳವಾರ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *