Thu. Apr 17th, 2025

Ujire: ಅನುಗ್ರಹ ಕಾಲೇಜಿನಲ್ಲಿ ಸಾಹಿತ್ಯ ಹಾಗೂ ವ್ಯಕ್ತಿತ್ವ ವಿಕಸನ

ಉಜಿರೆ:(ನ.13) ಅನುಗ್ರಹ ಕಾಲೇಜಿನಲ್ಲಿ ಕನ್ನಡ ಸಂಘದ ವತಿಯಿಂದ ಸಾಹಿತ್ಯ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.

ಇದನ್ನೂ ಓದಿ: ⭕ವಿಟ್ಲ: ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಕಾರು ಬ್ರೇಕ್ ಫೇಲ್ ಆಗಿ ಪಲ್ಟಿ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ವಂ.ಫಾ.ವಿಜಯ್ ಲೋಬೋ ವಹಿಸಿ ಶುಭ ಹಾರೈಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಬೆಳಾಲು ಶ್ರೀ.ಧ.ಮಂಜುನಾಥೇಶ್ವರ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ರಾಮಕೃಷ್ಣ ಭಟ್ ಚೊಕ್ಕಡಿ ಮಾತನಾಡಿ ಸೃಜನಶೀಲತೆ ನಮ್ಮ ವ್ಯಕ್ತಿತ್ವ ವಿಕಸನದ ಲಕ್ಷಣ, ವ್ಯಕ್ತಿತ್ವ ವಿಕಸನಕ್ಕೆ ಜ್ಞಾನ ವೃದ್ದಿಯಾಗಬೇಕು.

ವ್ಯಕ್ತಿತ್ವವು ಸಾಹಿತ್ಯ ರೂಪದಲ್ಲಿ ವಿಕಸಿತವಾಗುತ್ತದೆ ಎಂದರು. ಕನ್ನಡ ಸಂಘದ ನಿರ್ದೇಶಕರಾದ ಅರುಣ್ ಕುಮಾರ್ ಪ್ರಾಸ್ತವಿಕವಾಗಿ ಮಾತಾಡಿ ಅತಿಥಿಗಳನ್ನು ಪರಿಚಯಿಸಿ ಸರ್ವರನ್ನು ಸ್ವಾಗತಿಸಿದರು.

ಕಾರ್ಯದರ್ಶಿ ಯೋಗಿತ ಇವರು ಕಾರ್ಯಕ್ರಮದ ಮಹತ್ವ ತಿಳಿಸಿದರು. ವಿದ್ಯಾರ್ಥಿ ಅಲೇನ್ ಪಿಂಟೋ ಸ್ವಾಗತಿಸಿ, ಹೆಝಲ್ ಪಿಂಟೋ ಧನ್ಯವಾದ ನೀಡಿದರು.

Leave a Reply

Your email address will not be published. Required fields are marked *