Aghori:(ನ.14) ಕೆಲವು ಪದಗಳು ಕಿವಿಗೆ ಬಿದ್ದ ತಕ್ಷಣ ಮನಸ್ಸಿನಲ್ಲಿ ಅವುಗಳ ಫೋಟೋ ಬಂದು ಹೋಗುತ್ತವೆ. ಅದು ಅರ್ಥಮಾಡಿಕೊಳ್ಳಲು ಸ್ವಲ್ಪ ಕಷ್ಟವಾಗುತ್ತದೆ. ಆದರೆ ಅವುಗಳು ನಮಗೆ ಹೆಚ್ಚು ಆಕರ್ಷಿತವಾಗಿರುತ್ತದೆ.
ಇದನ್ನೂ ಓದಿ: ⭕ಶಿವಮೊಗ್ಗ: ತೆಪ್ಪ ಮುಳುಗಿ ಜೀವ ಕಳಕೊಂಡ ಯುವಕರು
ಅಘೋರ ಅಥವಾ ಅಘೋರಿ ಪದದ ವಿಷಯವೂ ಇದೇ ಆಗಿದೆ. ಸಂಸ್ಕೃತದಲ್ಲಿ ಅಘೋರಿ ಪದದ ಅರ್ಥವನ್ನು ‘ಬೆಳಕಿನ ಕಡೆಗೆ’ ಎಂದು ವಿವರಿಸಲಾಗಿದೆ. ನಾವು ಅಘೋರಿಯನ್ನು ಕಲ್ಪಿಸಿಕೊಂಡರೆ, ಸ್ಮಶಾನದಲ್ಲಿ ತಂತ್ರ ಕ್ರಿಯೆಯನ್ನು ಮಾಡುವ ಸಾಧುವಿನ ಚಿತ್ರವು ಮನಸ್ಸಿನಲ್ಲಿ ಹೊರಹೊಮ್ಮುತ್ತದೆ. ಅವರ ವೇಷಭೂಷಣಗಳು ಭಯಾನಕವಾಗಿರುತ್ತದೆ. ಅಘೋರಿಗಳನ್ನು ಭಯಾನಕ ಅಥವಾ ಅಪಾಯಕಾರಿ ಋಷಿಗಳೆಂದು ಪರಿಗಣಿಸಲಾಗುತ್ತದೆ.
ಅಘೋರಿಗಳು ಸರಳ ಜೀವನವನ್ನು ನಡೆಸಲು ಕಠಿಣ ಹಾದಿಯನ್ನು ತೆಗೆದುಕೊಳ್ಳುತ್ತಾರೆ. ಅಘೋರಿಗಳಾಗುವುದು ಅಷ್ಟೊಂದು ಸುಲಭವಾದ ಕಾರ್ಯವಲ್ಲ. ಅವರ ಜೀವನ ಶೈಲಿಯೇ ವಿಭಿನ್ನ ಮಾತ್ರವಲ್ಲ, ವಿಚಿತ್ರ ಕೂಡ. ಅಂತೆಯೇ ಅಘೋರಿಗಳು ಶವದ ಜೊತೆಯಲ್ಲಿ ಲೈಂಗಿಕ ಕ್ರಿಯೆ ನಡೆಸುವ ಬಗ್ಗೆ ಹೆಚ್ಚಿನವರಿಗೆ ಗೊತ್ತಿದೆ. ಇದು ಯಾಕೆ ಹೀಗೆ? ಇದರಿಂದ ಅವರಿಗೆ ಏನು ಪ್ರಯೋಜನ ಗೊತ್ತಾ?
ಅಘೋರಿಗಳು ಶಿವ ಮತ್ತು ಶಕ್ತಿಯ ಆರಾಧಕರು. ಅತ್ಯಂತ ಕೆಟ್ಟ ಸಂದರ್ಭಗಳಲ್ಲಿಯೂ ದೇವರಿಗೆ ಶರಣಾಗುವುದು ಪೂಜೆಯ ಸರಳ ಮಾರ್ಗ ಎಂದು ಅಘೋರಿಗಳು ಹೇಳುತ್ತಾರೆ. ಇದೇ ಕಾರಣಕ್ಕೆ ಅವರು ಶವದ ಜೊತೆ ಶಾರೀರಿಕ ಸಂಬಂಧವನ್ನು ಬೆಳೆಸ್ತಾರೆ.
ಅಘೋರಿ ಸಾಧುಗಳು, ಮೃತ ದೇಹಗಳನ್ನು ಪೂಜೆ ಮಾಡ್ತಾರೆ. ಜೊತೆಗೆ ದೈಹಿಕ ಸಂಬಂಧ ಬೆಳೆಸ್ತಾರೆ. ಶಿವ ಮತ್ತು ಶಕ್ತಿಯನ್ನು ಪೂಜಿಸುವ ವಿಧಾನವೆಂದು ಅವರು ನಂಬುತ್ತಾರೆ. ಮೃತದೇಹದೊಂದಿಗೆ ದೈಹಿಕ ಚಟುವಟಿಕೆಯನ್ನು ಮಾಡುವಾಗ ಮನಸ್ಸು ದೇವರ ಭಕ್ತಿಯಲ್ಲಿ ಲೀನವಾಗಿರುತ್ತದೆ ಎಂಬುದು ಅವರ ನಂಬಿಕೆ.
ಮೃತ ದೇಹಕ್ಕೆ ಬೂದಿ ಬಳಿದ ಮಂತ್ರಗಳನ್ನು ಉಚ್ಚರಿಸ್ತಾ, ಡ್ರಮ್ ಬಾರಿಸುವ ಮೂಲಕ ದೈಹಿಕ ಸಂಬಂಧವನ್ನು ಸೃಷ್ಟಿಸುತ್ತಾರೆ. ಮಹಿಳೆಯರು ತಮ್ಮ ಮುಟ್ಟಿನ ಸಮಯದಲ್ಲಿದ್ದಾಗ ಶಾರೀರಿಕ ಸಂಬಂಧ ಬೆಳೆಸಿದ್ರೆ ಅಘೋರಿಗಳ ಶಕ್ತಿ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ. ಅಘೋರಿಗಳು ಇತರ ಸಾಧುಗಳಂತೆ ಬ್ರಹ್ಮಚರ್ಯವನ್ನು ಪಾಲಿಸುವುದಿಲ್ಲ. ಅವರು ಶವದ ಜೊತೆ ಮಾತ್ರವಲ್ಲ ಜೀವಂತ ವ್ಯಕ್ತಿ ಜೊತೆ ದೈಹಿಕ ಸಂಬಂಧ ಬೆಳೆಸುತ್ತಾರೆ.