Sat. Apr 12th, 2025

Koppa: ಡೆತ್‌ ನೋಟ್‌ ಬರೆದಿಟ್ಟು ದಂಪತಿ ಆತ್ಮಹತ್ಯೆ..! – ಕಾರಣವೇನು?

ಕೊಪ್ಪ:(ನ.14) ಉದ್ಯಮದಲ್ಲಿ ನಷ್ಟ ಮತ್ತು ಸಾಲಗಾರರ ಕಿರುಕುಳ ದಿಂದ ಬೇಸತ್ತು ದಂಪತಿಗಳು ನೇಣಿಗೆ ಶರಣಾಗಿರುವ ಘಟನೆ ಕುಶಾಲನಗರ ಸಮೀಪದ ಕೊಪ್ಪದಲ್ಲಿ ನಡೆದಿದೆ.

ಇದನ್ನೂ ಓದಿ: 🔴ಧರ್ಮಸ್ಥಳ : ಧರ್ಮಸ್ಥಳದ ಗ್ರಾಮಾಭಿವೃದ್ದಿ ಯೋಜನೆಯ ಸ್ವ-ಸಹಾಯ ಸಂಘಗಳಿಗೆ 600 ಕೋಟಿ ಲಾಭಾಂಶ ವಿತರಿಸಿದ ಸಚಿವೆ ನಿರ್ಮಲಾ ಸೀತಾರಾಮನ್

ಕೊಪ್ಪ ನಿವಾಸಿ ಸುರೇಶ್( 39) ಮತ್ತು ಪತ್ನಿ ಪಲ್ಲವಿ (28) ಮೃತ ದುರ್ದೈವಿಗಳು. ರಿಯಲ್ ಎಸ್ಟೇಟ್ ಉದ್ಯಮ ಮಾಡುತ್ತಿದ್ದ ಸುರೇಶ್ ದಂಪತಿಗಳು ದೇವಸ್ಥಾನಕ್ಕೆ ಎಂದು ಮನೆಯಿಂದ ತೆರಳಿ ತಮ್ಮ ದೊಡ್ಡ ಹೊನ್ನೂರು ಕಾವಲ್ ಜಮೀನು ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ.

ಮೃತದೇಹಗಳನ್ನು ಕುಶಾಲನಗರ ಸಮುದಾಯ ಅರೋಗ್ಯ ಕೇಂದ್ರದ ಶವಗಾರದಲ್ಲಿ ಇರಿಸಲಾಗಿದೆ. ಮೃತರು ಇಬ್ಬರು ಪುಟ್ಟ ಕಂದಮ್ಮಗಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *