ನೋಯ್ಡಾ:(ನ.14) ಇತ್ತೀಚೆಗಷ್ಟೇ ಮಾದಕ ದ್ರವ್ಯ ತಯಾರಿ ಮಾಡುತ್ತಿದ್ದ ಲ್ಯಾಬ್ ಒಂದರ ಮೇಲೆ ದಾಳಿ ಮಾಡಿದ ಗ್ರೇಟರ್ ನೋಯ್ಡಾ ಪೊಲೀಸರು, ಇದೀಗ ಮತ್ತೊಂದು ಜಾಲವನ್ನು ಭೇದಿಸಿರುವ ಘಟನೆಯೊಂದು ನಡೆದಿದೆ.
ಇದನ್ನೂ ಓದಿ: 🟣ಬೆಳ್ತಂಗಡಿ: ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ
ವ್ಯಕ್ತಿಯೋರ್ವ ತಾನು ವಾಸ ಮಾಡುತ್ತಿದ್ದ ಅಪಾರ್ಟ್‌ಮೆಂಟ್‌ನ ರೂಮ್‌ನಲ್ಲಿಯೇ ಗಾಂಜಾ ಬೆಳೆಯುತ್ತಿದ್ದು, ಈತನನ್ನು ನೋಯ್ಡಾ ಪೊಲೀಸರು ಹಾಗೂ ನಾರ್ಕೊಟಿಕ್ಸ್ ಡಿಪಾರ್ಟ್‌ಮೆಂಟ್ ಜಂಟಿ ಕಾರ್ಯಾಚರಣೆ ಮಾಡಿ ಬಂಧನ ಮಾಡಿದ್ದಾರೆ.
ಆರೋಪಿಯನ್ನು ರಾಹುಲ್ ಚೌಧರಿ ಎಂದು ಗುರುತಿಸಲಾಗಿದೆ. ಮೀರತ್ ಜಿಲ್ಲೆಯವನಾದ ಈತ ಇಂಗ್ಲೀಷ್‌ನಲ್ಲಿ ಮಾಸ್ಟರ್ ಪದವಿ ಪಡೆದಿದ್ದಾನೆ. ಬುದ್ಧಿವಂತನಾಗಿರುವ ಈತ ತೋಟಗಾರಿಕೆ ನೆಪದಲ್ಲಿ ತಾನು ಬಾಡಿಗೆಗೆ ಇದ್ದ ಅಪಾರ್ಟ್‌ಮೆಂಟ್‌ನ ಒಂದು ರೂಮಲ್ಲಿ ಗಾಂಜಾ ಬೆಳೆಯನ್ನು ಬೆಳೆದಿರುವುದು ಬಹಿರಂಗಗೊಂಡಿದೆ.
ಬಗೆಬಗೆಯ ಗಾಂಜಾ ಬೆಳೆಗಳನ್ನು ಬೆಳೆದಿದ್ದಾನೆ ಈತ. ವೆಬ್‌ಸಿರೀಸ್ ಮೂಲಕ ಪ್ರಭಾವಗೊಂಡಿರುವ ಈತ ಗಾಂಜಾ ಕೃಷಿ ಬೆಳೆಯುವುದನ್ನು ಹೇಗೆ ಮಾಡಬೇಕೆಂದು ಅರಿತುಕೊಂಡಿದ್ದಾನೆ. ಈತ ಅಂತರಾಷ್ಟ್ರೀಯ ಕಳ್ಳ ಮಾರುಕಟ್ಟೆಯಿಂದ ಗಾಂಜಾ ಬೀಜಗಳನ್ನು ಖರೀದಿಸಿದ್ದು, ಪೇಮಂಟನ್ನು ಪೇಯ್‌ಪಲ್ ಮೂಲಕ ಮಾಡಿದ್ದಾನೆ.
ಒಂದು ರೂಮಿನೊಳಗೆ ಇವುಗಳನ್ನು ಬೆಳೆದಿರುವ ಕಾರಣ ಅವುಗಳಿಗೆ ಸೂರ್ಯ ಕಿರಣ ಸಿಗುತ್ತಿರಲಿಲ್ಲ. ಅದಕ್ಕೆ ಈತ ಏರ್‌ಕಂಡೀಷನರ್ ಹಾಗೂ ಫುಲ್ ಸ್ಪೆಕ್ಟ್ರಮ್ ಲೈಟ್ಸ್‌ಗಳನ್ನು ಉಪಯೋಗ ಮಾಡಿ ತಾಪಮಾನ ಸಿಗುವ ಹಾಗೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೂವಿನ ಗಿಡಗಳ ಮಧ್ಯೆಯೇ ಈತ ಗಾಂಜಾ ಕೃಷಿಯನ್ನು ಮಾಡಿದ್ದ. ಈತ ಇದನ್ನೆಲ್ಲ ಡಾರ್ಕ್‌ವೆಬ್‌ನಲ್ಲಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಇದೀಗ ಅಧಿಕಾರಿಗಳು ರಾಹುಲ್‌ನನ್ನು ಬಂಧನ ಮಾಡಿದ್ದು, ಈತನಿಂದ ಭರ್ಜರಿ ಎರಡು ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.