ಬೆಳ್ತಂಗಡಿ:(ನ.16) ಸಯ್ಯಿದ್ ಉಮರ್ ಅಸ್ಸಖಾಫ್ ತಂಗಳ್ ನೇತೃತ್ವದ ಗೇರುಕಟ್ಟೆಯ ಮನಶರ್ ವಿದ್ಯಾ ಸಂಸ್ಥೆಯ ವತಿಯಿಂದ ಲಾಯಿಲ ವಿಮುಕ್ತಿ ದಯಾ ವಿಶೇಷ ಚೇತನ ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ಇದನ್ನೂ ಓದಿ: 🟣ಬೆಳ್ತಂಗಡಿ: ಮುಳಿಯ ಜ್ಯುವೆಲ್ಸ್ ವತಿಯಿಂದ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರರಿಗೆ ಸನ್ಮಾನ
ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಬೆಳ್ತಂಗಡಿಯ “ದಯಾ ವಿಶೇಷ ಶಾಲೆ” ಗೆ ಭೇಟಿ ನೀಡಿ ಅಲ್ಲಿಯ ವಿಶೇಷ ಚೇತನ ಮಕ್ಕಳೊಂದಿಗೆ ಸಂಪೂರ್ಣವಾಗಿ ಬೆರೆತು ಹೊಸ ಅನುಭವ ಪ್ರಾಪ್ತಿಸಿಕೊಳ್ಳಲಾಯಿತು.
ಬೆಳ್ತಂಗಡಿ ಆಸುಪಾಸಿನ 100 ರಿಂದ 150 ಕ್ಕೂ ಹೆಚ್ಚು ವಿಕಲ ಚೇತನ ವಿದ್ಯಾರ್ಥಿಗಳಿಗೆ ವಿದ್ಯೆಯ ಜೊತೆಗೆ ಜೀವನ ಹಾರೈಕೆ ಮಾಡುತ್ತಿದ್ದು, ಅಲ್ಲಿಯ ಕಾರ್ಯ ವೈಖರಿಯ ಬಗ್ಗೆ ವಿಮುಕ್ತಿ ನಿರ್ದೇಶಕ ಫಾದರ್ ವಿನೋದ್ ಮಸ್ಕರೇನಸ್, ಪ್ರಾಂಶುಪಾಲರು ದಿವ್ಯಾ ವಿವರಿಸಿದರು.
ಮನ್ ಶರ್ ಸಂಸ್ಥೆಯ ಜನರಲ್ ಮ್ಯಾನೇಜರ್ ಹೈದರ್ ಮರ್ದಾಳ ರವರ ನೇತೃತ್ವದಲ್ಲಿ ಈ ಭೇಟಿ ಆಯೋಜನೆಗೊಂಡಿತ್ತು. ಸಂಸ್ಥೆಯ ಕಾರ್ಯನಿರ್ವಾಹಣಾಧಿಕಾರಿ ರಶೀದ್ ಕುಪ್ಪೆಟ್ಟಿ , ಪಿ.ಯು ವಿಭಾಗದ ಪ್ರಾಂಶುಪಾಲೆ ಕೌಸರ್ ಪಲ್ಲಾದೆ, ಶಿಕ್ಷಕಿಯಾರಾದ ಮಾಸಿತಾ, ಸುರಯ್ಯ ಇವರ ತಂಡದಲ್ಲಿ ಸುಮಾರು 70 ಕ್ಕಿಂತ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮನ್ಶರ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ಹಣ್ಣು ಹಂಪಲು, ತರಕಾರಿಗಳು ಹಾಗೂ ವಿವಿಧ ಆಹಾರ ಧಾನ್ಯಗಳನ್ನು ಸಂಗ್ರಹಿಸಿ ಅವುಗಳನ್ನು ವಿಕಲಚೇತನ ಮಕ್ಕಳಿಗೆ ಕೊಡುಗೆಯಾಗಿ ನೀಡಲಾಯಿತು.
ಇಂತಹ ಭೇಟಿಯಿಂದ ಮಕ್ಕಳ ವಿದ್ಯಾರ್ಥಿ ಜೀವನದಿಂದಲೇ ಪರಸ್ಪರ ಸಹಕಾರ ಮನೋಭಾವನೆ ಬೆಳೆಸಲು , ಇತರರೊಂದಿಗೆ ಕರುಣೆ ತೋರಲು ,ತಮ್ಮನ್ನು ತಾವು ಸ್ವಯಂ ತಿದ್ದುವ ಮನೋಭಾವನೆಯನ್ನು ಬೆಳೆಸಲು ಸಹಕಾರವಾಗುತ್ತದೆ ಎಂಬ ದೃಷ್ಟಿಯಿಂದ ಈ ಭೇಟಿ ಆಯೋಜಿಸಲಾಗಿತ್ತು.