Wed. Nov 20th, 2024

Uttarakhand: ಓವರ್‌ ಸ್ಪೀಡ್‌ ನಲ್ಲಿ ಬರುತ್ತಿದ್ದ ಕಾರು ಟ್ರಕ್‌ ಗೆ ಡಿಕ್ಕಿ – ಚೆಲ್ಲಾಪಿಲ್ಲಿಯಾಗಿ ರಸ್ತೆ ತುಂಬೆಲ್ಲಾ ಬಿದ್ದ ಕಾರಿನಲ್ಲಿದ್ದವರ ದೇಹ!! – ಅಷ್ಟಕ್ಕೂ ಓವರ್‌ ಸ್ಪೀಡ್‌ ಗೆ ಕಾರಣವೇನು?!

ಉತ್ತರಾಖಂಡ್:‌ (ನ.16) ಹೊಸ ಕಾರು ಖರೀದಿ ಮಾಡೋದು ಅಂದ್ರೆ ಸಾಮಾನ್ಯವಾದ ಮಾತಲ್ಲ. ಅದು ಕೂಡ ದುಬಾರಿ ಬೆಲೆಯ ಕಾರು ಖರೀದಿ ಮಾಡಬೇಕು ಅಂದ್ರೆ ಒಂದು ಆಗರ್ಭ ಶ್ರೀಮಂತ ಆಗಿರಬೇಕು.

ಇದನ್ನೂ ಓದಿ: 🛑ರಾಮನಗರ: ಬೇಡಿಕೆ ಈಡೇರಿಕೆಗಾಗಿ ಗ್ರಾಮ ಪಂಚಾಯಿತಿ ನೌಕರರಿಂದ ನವಂಬರ್ 27ಕ್ಕೆ ಬೃಹತ್ ಹೋರಾಟ

ಇಲ್ಲವೇ ತನ್ನ ಅರ್ಧ ಜೀವನವನ್ನೇ ಅದಕ್ಕಾಗಿ ಮುಡಿಪಾಗಿ ಇಡಬೇಕು ಅಷ್ಟೇ. ಹೀಗೆ ಕಳೆದ ನವೆಂಬರ್ 12ರಂದು ಮಧ್ಯರಾತ್ರಿ ಸ್ನೇಹಿತರೆಲ್ಲರೂ ಸೇರಿಕೊಂಡು ಸಖತ್ ಪಾರ್ಟಿ ಮಾಡಿದ್ದಾರೆ.

ಆ ಪಾರ್ಟಿಯಲ್ಲಿ ವಿಪರೀತ ಕುಡಿದು ವಾಹನ ಚಲಿಸಿ ಪ್ರಾಣ ಬಿಟ್ಟಿದ್ದಾರೆ. ಭಾರತದಲ್ಲಿ ವಾಹನ ಕಾಯಿದೆಯಡಿಯಲ್ಲಿ ಕುಡಿದು ವಾಹನ ಚಲಾಯಿಸುವುದು ಅಥವಾ ಚಾಲನೆ ಮಾಡುವುದು (ಡಿಯುಐ) ಕ್ರಿಮಿನಲ್ ಅಪರಾಧವಾಗಿದೆ. ಆದರೆ ಇನ್ನೂ ಮೀಸೆ ಚಿಗುರದ ಯುವಕರು ಕುಡಿದು ವಾಹನ ಚಲಾಯಿಸಿ ಸಾವಿನ ಮನೆ ಸೇರಿದ್ದಾರೆ.

ಉತ್ತರಾಖಂಡ್‌ನ ಡೆಹ್ರಾಡೂನ್‌ನಲ್ಲಿ ಓವರ್‌ ಸ್ಪೀಡ್‌ನಲ್ಲಿ ಬರುತ್ತಿದ್ದ ಕಾರು ಟ್ರಕ್‌ಗೆ ಡಿಕ್ಕಿಯಾಗಿದ್ದು, 5 ಸ್ನೇಹಿತರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಧ್ಯರಾತ್ರಿ 1.30ರ ಸುಮಾರಿಗೆ ಟ್ರಕ್‌ಗೆ, 100ಕಿ.ಮೀ ಸ್ಪೀಡ್ ನಲ್ಲಿ ಬಂದ ಟೊಯೋಟಾ ಇನ್ನೋವಾ ಗುದ್ದಿದೆ. ಪರಿಣಾಮ 5 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ, ಕಾರು, ಟ್ರಕ್‌ಗೆ ಗುದ್ದಿದ ರಭಸಕ್ಕೆ ಕಾರಿನ ರೂಫ್ ಟಾಪ್ ಕಿತ್ತುಕೊಂಡು ಆಕಾಶದೆತ್ತರಕ್ಕೆ ಹಾರಿ ಹೋಗಿದೆ. ಕಾರು ನಜ್ಜುಗುಜ್ಜಾಗುವ ಜೊತೆಗೆ ಕಾರಿನಲ್ಲಿದ್ದವರ ದೇಹ ಚೆಲ್ಲಾಪಿಲ್ಲಿಯಾಗಿ ರಸ್ತೆ ತುಂಬೆಲ್ಲಾ ಬಿದ್ದಿದೆ.

ಈ ಅಪಘಾತದಲ್ಲಿ ಮೃತಪಟ್ಟವರನ್ನು ಹಿಮಾಚಲ ಪ್ರದೇಶದ 23 ವರ್ಷದ ಕುನಾಲ್ ಕುಕ್ರೇಜಾ ಎಂದು ಗುರುತಿಸಲಾಗಿದೆ. ಉಳಿದವರು ಡೆಹ್ರಾಡೂನ್ ಮೂಲದ ಅತುಲ್ ಅಗರವಾಲ್ (24), ರಿಷಭ್ ಜೈನ್ (24), ನವ್ಯಾ ಗೋಯೆಲ್ (23) ಕಾಮಾಕ್ಷಿ (20) ಮತ್ತು ಗುನೀತ್ (19) ಎಂದು ಗುರುತಿಸಲಾಗಿದೆ. 25 ವರ್ಷದ ಸಿದ್ದೇಶ್ ಅಗರ್ವಾಲ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದಾರೆ.

Leave a Reply

Your email address will not be published. Required fields are marked *