ಬಿಗ್ಬಾಸ್ 11:(ನ.17) ಕಿಚ್ಚ ಸುದೀಪ್ ಅವರು, ಕಳೆದ 11 ವರ್ಷದಿಂದಲೂ ಬಿಗ್ಬಾಸ್ ಕನ್ನಡ ನಿರೂಪಣೆ ಮಾಡುತ್ತಿದ್ದಾರೆ. ಆದರೆ ಅವರು ಬಿಗ್ಬಾಸ್ ವೇದಿಕೆಯಲ್ಲಿ ತಾಳ್ಮೆ ಕಳೆದುಕೊಂಡಿರುವುದು ಬಹಳ ಕಡಿಮೆ.
ಇದನ್ನೂ ಓದಿ: ⭕ಉಜಿರೆ: ಡಿವೈಡರ್ ಗೆ ಡಿಕ್ಕಿ ಹೊಡೆದ ಲಾರಿ!!
ತೀರ ಅಪರೂಪಕ್ಕೆ ಅವರು ಯಾರ ಮೇಲಾದರೂ ಸಿಟ್ಟು ಮಾಡಿಕೊಳ್ಳುತ್ತಾರೆ. ಅದರಲ್ಲೂ ಮಹಿಳಾ ಸ್ಪರ್ಧಿಗಳ ಮೇಲೆ ಸಿಟ್ಟಿನಿಂದ ಮಾತನಾಡಿದ್ದು ಬಹುತೇಕ ಇಲ್ಲವೆಂದೇ ಹೇಳಬಹುದು. ಆದರೆ ಸುದೀಪ್ ಅವರಿಗೆ ಸಿಟ್ಟು ಬರುವಂತಹ ಸನ್ನಿವೇಶ ಮನೆಯಲ್ಲಿ ನಡೆಯಿತು. ಸುದೀಪ್ ಸಿಟ್ಟಿಗೆ ಗುರಿಯಾಗಿದ್ದು ಚೈತ್ರಾ ಕುಂದಾಪುರ.
ಚೈತ್ರಾ ಕುಂದಾಪುರ, ಅನಾರೋಗ್ಯದ ಕಾರಣಕ್ಕೆ ಮನೆಯಿಂದ ಹೊರಗೆ ಹೋಗಿದ್ದರು. ಹೊರಗೆ ವೈದ್ಯರ ಬಳಿ ಚಿಕಿತ್ಸೆ ತೆಗೆದುಕೊಂಡು ಮರಳಿ ಬಂದರು. ಆದರೆ ಮರಳಿ ಬಂದ ಮೇಲೆ ಹೊರಗೆ ತಾನಗೆ ಹೊರಗಡೆ ಕೆಲವು ಹಿಂಟ್ಗಳು ಸಿಕ್ಕಿವೆ, ಯಾರು ಹೇಗೆ ಆಟ ಆಡುತ್ತಿದ್ದಾರೆ ಎಂದು ಆಸ್ಪತ್ರೆಯ ಕೆಲ ಸಿಬ್ಬಂದಿ ನನಗೆ ಹೇಳಿದ್ದಾರೆ ಎಂದು ಹೇಳಿದ ಚೈತ್ರಾ ಕೆಲವು ಕತೆಗಳ ಮೂಲಕ, ಸಂಜ್ಞೆಗಳ ಮೂಲಕ ಮನೆಯವರಿಗೆ ಅದನ್ನು ಹೇಳಿದರು.
ಸುದೀಪ್ ಇದೇ ವಿಷಯದ ಬಗ್ಗೆ ಚೈತ್ರಾ ಬಳಿ ಮಾತನಾಡುತ್ತಿದ್ದರು. ಇಂದಿನ ಎಪಿಸೋಡ್ನಲ್ಲಿ ಬಹುತೇಕ ಚೈತ್ರಾ ಅವರ ಆಸ್ಪತ್ರೆ ವಿಷಯವೇ ಚರ್ಚೆ ಆಯಿತು.
ಪ್ರತಿ ಬಾರಿ ಸುದೀಪ್ ಮಾತನಾಡುವಾಗಲೂ, ಅಥವಾ ಬೇರೊಬ್ಬರ ಅಭಿಪ್ರಾಯ ಕೇಳುವಾಗಲೂ ಸಹ ಚೈತ್ರಾ ಪದೇ ಪದೇ ಕೈ ಎತ್ತುವುದು, ಮಧ್ಯ ಮಾತನಾಡುವುದು ಮಾಡುತ್ತಲೇ ಇದ್ದರು. ಸುದೀಪ್ ಸಹ ಹೀಗೆ ಮಾಡೋದು ಬೇಡ, ಕೈ ಎತ್ತಿ ಮಾತನಾಡಿ ಎಂದು ಹೇಳಿದ್ದರು. ಆದರೆ ಚೈತ್ರಾ ಸುದೀಪ್ ಹೇಳಿದ ಮಾತು ಗಮನಕ್ಕೆ ತೆಗೆದುಕೊಳ್ಳದೆ ಮಧ್ಯೆ ಬಾಯಿ ಹಾಕಿದರು.
ಇದು ಸುದೀಪ್ ಅವರನ್ನು ಕೆರಳಿಸಿತು, ಒಂದೇ ಬಾರಿ ಸಿಟ್ಟಿನಿಂದ ಮಾತನಾಡಿದ ಸುದೀಪ್, ಚೈತ್ರಾಗೆ ಎಚ್ಚರಿಕೆ ನೀಡಿದರು. ಆದರೆ ಅದರ ಜೊತೆಗೆ ಸಮಾಧಾನಗೊಂಡು “ನಿಮ್ಮೊಡನೆ ಮಾನವೀಯತೆಯಿಂದ, ಪ್ರೀತಿಯಿಂದ ನಡೆದುಕೊಳ್ಳಲು ಅವಕಾಶ ಮಾಡಿಕೊಡಿ, ನನಗೆ ಅಗೌರವ ಮಾಡಬೇಡಿ, ನಾನು ಹೊರಗಡೆ ಜನರ ಪ್ರೀತಿಯನ್ನು ಸಂಪಾದಿಸಿದ್ದೇನೆ ಅದನ್ನು ಡಿಮ್ಯಾಂಡ್ ಮಾಡಿ ಸಂಪಾದಿಸಿಲ್ಲ,
ಕಮಾಂಡ್ ಮಾಡಿ ಸಂಪಾದಿಸಿರೋದು, ಸಾಧ್ಯವಾದರೆ ನೀವು ಅದರಲ್ಲಿ ಸ್ವಲ್ಪ ಹಂಚಿಕೊಳ್ಳಿ” ಎಂದರು. ಐದು ನಿಮಿಷದ ಮುಂಚೆ ನಾನು ನಿಮ್ಮ ಬಳಿ ದನಿ ಎತ್ತಿ ಮಾತನಾಡಿದೆ ಅದಕ್ಕೆ ನಾನು ಕ್ಷಮೆ ಕೇಳುತ್ತೀನಿ ಎಂದರು ಸುದೀಪ್, ಆದರೆ ಅದಕ್ಕೆ ಚೈತ್ರಾ ಕುಂದಾಪುರ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.