ಮೇಷ ರಾಶಿ: ನಿಮ್ಮ ಅತಿಯಾದ ವಿಶ್ವಾಸವೇ ಅಂತಿಮವಾಗಿ ತೊಂದರೆ ಕೊಡಬಹುದು. ನಿಮ್ಮ ಸಹೋದ್ಯೋಗಿಗಳು ನಿಮಗೆ ಅನಿವಾರ್ಯವಾಗಿ ಬಂದ ಸಂಕಟಕ್ಕೆ ಧನಸಹಾಯ ಮಾಡುವರು. ಉದ್ಯಮದಲ್ಲಿ ಬರುವ ಎಂತಹ ಸಮಸ್ಯೆಯನ್ನೂ ಪರಿಹರಿಸಿಕೊಳ್ಳುವಿರಿ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ವೈವಾಹಿಕ ಜೀವನದಲ್ಲಿ ಖುಷಿ ಇರುವುದು. ಕಾನೂನಿಗೆ ವಿರುದ್ಧವಾಗಿ ಕಾರ್ಯವನ್ನು ಮಾಡುವ ಆಲೋಚನೆಯನ್ನು ಬಿಡುವುದು ಇದ್ದರೆ, ಅಂತಹ ಸಾಹಸದಲ್ಲಿ ತೊಡಗಿಕೊಳ್ಳುವುದು ಬೇಡ.
ವೃಷಭ ರಾಶಿ: ಇಂದು ಇನ್ನೊಬ್ಬರ ಇಂಗಿತವನ್ನು ಅರ್ಥಮಾಡಿಕೊಂಡು ಕಾರ್ಯವನ್ನು ನಿರ್ವಹಿಸಿ. ನೀವು ವ್ಯಾಪಾರಸ್ಥರಾಗಿದ್ದರೆ, ನೀವು ಕೆಲಸದ ನಿಮಿತ್ತ ಪ್ರಯಾಣಿಸುವಿರಿ. ನಿಮ್ಮ ಉದ್ಯೋಗಸ್ಥರು ಕಚೇರಿಯಲ್ಲಿ ಮೇಲಿನವರಿಂದ ಹೆಚ್ಚಿನ ಬೆಂಬಲವನ್ನು ಪಡೆಯುವರು. ಹಣದ ಪರಿಸ್ಥಿತಿ ಉತ್ತಮವಾಗಿರೂ, ಖರ್ಚೂ ಇರಲಿದೆ. ಆರೋಗ್ಯವಾಗಿರಲು, ನೀವು ಅಸಂಬದ್ಧ ಚಿಂತೆಗಳಿಂದ ದೂರವಿರಬೇಕು. ಕೋಪದಲ್ಲಿ ಏನನ್ನಾದರೂ ಹೇಳಿ ಮನಸ್ಸನ್ನು ವಿಕಾರ ಮಾಡಿಕೊಳ್ಳುವಿರಿ. ಧಾರ್ಮಿಕ ಕಾರ್ಯದಲ್ಲಿ ಅಲ್ಪ ಆಸಕ್ತಿಯು ಇರಲಿದೆ. ಇಂದಿನ ಘಟನೆಯು ನಿಮ್ಮ ಎಲ್ಲ ಆಸಕ್ತಿಯನ್ನು ಕುಗ್ಗಿಸುವುದು.
ಮಿಥುನ ರಾಶಿ: ನೀವಾಗಿಯೇ ಕಲ್ಪಿಸಿಕೊಂಡಿದ್ದನ್ನು ಬಿಡುವುದು ಒಳ್ಳೆಯದು. ನಿಮ್ಮ ಜೀವನದಲ್ಲಿ ತಪ್ಪು ತಿಳುವಳಿಕೆಗಳೇ ಹೆಚ್ಚು ತೋರುವುದು. ಹೊಸ ಒಪ್ಪಂದವನ್ನು ಮಾಡುವಾಗ ಹೆಚ್ಚು ಜಾಗರೂಕತೆ ಇರಲಿ. ಯಾರನ್ನೂ ಕುರುಡಾಗಿ ನಂಬವುದು ಬೇಡ. ಕುಟುಂಬ ಜೀವನದಲ್ಲಿ ಪರಿಸ್ಥಿತಿಗಳು ಆಹ್ಲಾದಕರವಾಗಿರುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಮಾಡಬೇಡಿ. ಉದ್ಯಮಿಗಳಿಗೆ ರಪ್ತು ವ್ಯವಹಾರವು ಬಹಳ ಕಷ್ಟವೆನಿಸಲಿದೆ. ಪಾಲುದಾರಿಕೆಯನ್ನು ಕೈಬಿಡುವುದು ಒಳ್ಳೆಯದು.
ಕರ್ಕಾಟಕ ರಾಶಿ: ಮಾತಿನ ಹಿಂದಿರುವ ಮುಖ್ಯಂಶವು ಗೊತ್ತಾಗುವುದು. ಅಪ್ರಬುದ್ಧ ಆಲೋಚನೆಗಳಿಂದ ನಿಮ್ಮ ವ್ಯಕ್ತಿತ್ವ ಗೊತ್ತಾಗುವುದು. ನಿಮಗೆ ನಿಮ್ಮದೇ ಹಣ ಬರುವ ಸಾಧ್ಯತೆ ಇದೆ. ಸಂಗಾತಿಯ ಜೊತೆ ಭಿನ್ನಾಭಿಪ್ರಾಯವು ಹೆಚ್ಚಾಗಬಹುದು. ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ. ಉತ್ತಮ ಅವಕಾಶಗಳು ಸಣ್ಣ ಅಂತರದಲ್ಲಿ ಕೈ ತಪ್ಪಿವುದು. ನೀವೇ ಹಾಕಿಕೊಂಡ ಯೋಜನೆಯಲ್ಲಿ ತಪ್ಪುಗಳು ಕಾಣಲಿದ್ದು, ಅದನ್ನು ಬದಲಾಯಿಸಲೂ ಆಗದ ಸ್ಥಿತಿಯೂ ಬರುವುದು.
ಸಿಂಹ ರಾಶಿ: ಇಂದು ಪ್ರಶಂಸೆಯನ್ನೂ ಪೂರ್ಣವಾಗಿ ಒಪ್ಪಿಕೊಳ್ಳಲಾರಿರಿ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯವಾಗಿದ್ದು ಹತಾಶೆಯು ಕಾಡಬಹುದು. ಈ ಸಮಯದಲ್ಲಿ ನೀವು ಉಳಿತಾಯದ ಬಗ್ಗೆ ಹೆಚ್ಚು ಗಮನ ಹರಿಸುವಿರಿ. ನೀವು ಸಾಲವನ್ನು ತೆಗೆದುಕೊಂಡಿದ್ದರೆ, ಅದನ್ನು ಸಾಧ್ಯವಾದಷ್ಟು ಬೇಗ ಮರುಪಾವತಿಸಿ. ಕಛೇರಿಯಲ್ಲಿ ನಿಮ್ಮ ಮಾತು ಮತ್ತು ನಡವಳಿಕೆಯ ಬಗ್ಗೆ ಗಮನಬೇಕು. ವ್ಯಾಪಾರಸ್ಥರಿಗೆ ಮಿಶ್ರ ಲಾಭವಿದೆ. ನಿಮಗೆ ಇಂದು ಕಾರ್ಯದಲ್ಲಿ ಅನಿರೀಕ್ಷಿತ ಜಯವಿರಲಿದೆ. ಭೂಮಿಯ ದಾಖಲೆಗಳನ್ನು ಸರಿಯಾಗಿ ಪಡೆದುಕೊಂಡು ವ್ಯವಹರಿಸಿ. ಭವಿಷ್ಯದ ಕುರಿತು ಬಹಳ ಆಲೋಚನೆ ಇರುವುದು. ಯುಕ್ತಿಯಿಂದ ಕೆಲಸವನ್ನು ಸಾಧಿಸಿದರೆ ಎಲ್ಲವೂ ಕ್ಷೇಮ.
ಕನ್ಯಾ ರಾಶಿ: ಇಂದು ನಿಮಗೆ ಯಾರ ವಿಶ್ವಾಸವನ್ನೂ ವಿಶೇಷವಾಗಿ ಗಳಿಸಲು ಇಷ್ಟವಾಗದು. ಇಂದು ಅಪರಿಚಿತರು ಮಾರಾಟದ ವಿಚಾರದಲ್ಲಿ ಮೋಸ ಮಾಡುವರು. ಇಂದಿನ ನಿಮ್ಮ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಲಿವೆ. ಮನೆಯಲ್ಲಿ ಸಂತೋಷದ ವಾತಾವರಣವನ್ನು ನೀವೇ ಸೃಷ್ಟಿಸುವಿರಿ. ಬಂಧುಗಳು ನಿಮ್ಮ ಸಹಾಯವನ್ನು ಕೇಳಿ ಬರಬಹುದು. ಆಸ್ತಿಯ ವಿಚಾರವಾಗಿ ನೀವು ಕಾನೂನು ಹೋರಾಟವನ್ನು ಮಾಡುವುದು ಒಳ್ಳೆಯದು. ವಿಳಂಬವಾದರೂ ಮಾರ್ಗ ಸರಿಯಾಗಿರಲಿದೆ. ಕಲಾವಿದರು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವರು. ಬೆನ್ನಿನ ನೋವು ಮತ್ತೆ ಕಾಣಿಕೊಂಡು ಸಂಕಟಪಡುವಿರಿ.
ತುಲಾ ರಾಶಿ: ಇಂದು ಸರ್ಕಾರಿ ಉದ್ಯೋಗಿಗಳು ಸವಲತ್ತುಗಳನ್ನು ಕೇಳಿ ಪಡೆಯಬೇಕಾಗುವುದು. ನಿಮ್ಮ ಕೆಲಸದ ಬಗ್ಗೆ ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಸಹಕಾರ ಲಭ್ಯ. ವ್ಯಾಪಾರಸ್ಥರಾದ ನೀವು ಆರ್ಥಿಕ ಸ್ಥಿತಿಯನ್ನು ಬಲಪಡಿಸಿಕೊಳ್ಳುವಿರಿ. ಮಗುವಿನ ಆರೋಗ್ಯದ ಚಿಂತೆ ಇಂದು ಕಾಡಬಹುದು. ಇತರರ ಬೆಂಬಲವು ನಿಮಗೆ ಕಡಿಮೆ ಆಗಬಹುದು. ಸಹೋದ್ಯೋಗಿಗಳು ನಿಮ್ಮ ಬಗ್ಗೆ ದೂರಬಹುದು. ಎಂದೋ ಮಾಡಿದ ಸಾಮಾಜಿಕ ಕೆಲಸಗಳಿಂದ ಗೌರವ ಸಿಗುವ ಸಂದರ್ಭವು ಇದೆ. ಹಠವನ್ನು ಬಿಟ್ಟರೆ ಸಂತೋಷದ ಸಂಗತಿಗಳು ನಿಮ್ಮ ಹುಡುಕಿಕೊಂಡು ಬರಬಹುದು.
ವೃಶ್ಚಿಕ ರಾಶಿ: ಇಂದು ಆದಾಯ ಮತ್ತು ಖರ್ಚನ್ನು ಸಮವಾಗಿ ತೂಗಿಸಿಕೊಂಡರೆ ಸ್ವಲ್ಪಮಟ್ಟಿನ ಚಿಂತೆ ದೂರಾಗುವುದು. ಇಂದು ನಿಮ್ಮ ಪ್ರೀತಿಪಾತ್ರರ ಜೊತೆ ತುಂಬಾ ಮೋಜಿನಿಂದ ಇರುವಿರಿ. ನಿಮ್ಮ ಆರ್ಥಿಕ ಸ್ಥಿತಿ ಸಾಮಾನ್ಯವಾಗಿ ಇರುವುದು. ಆರ್ಥಿಕತೆಯಿಂದ ಸೌಲಭ್ಯಗಳನ್ನು ಹೆಚ್ಚು ಮಾಡಿಕೊಳ್ಳುವಿರಿ. ದುಡಿಯುವವು ತಮ್ಮ ಶ್ರಮಕ್ಕೆ ಉಚಿತ ಫಲಿತಾಂಶವನ್ನು ನಿರೀಕ್ಷಿಸುವರು. ನಿಮ್ಮ ಆಸೆಯನ್ನು ಇನ್ನೊಬ್ಬರ ಎದುರು ಪ್ರಕಟಪಡಿಸಲು ಮುಜುಗರ ಆಗಬಹುದು. ಸಂಗಾತಿಗೆ ಸಿಟ್ಟು ಬರುವಂತೆ ನೀವು ಉದ್ದೇಶಪೂರ್ವಕವಾಗಿ ನಡೆದುಕೊಳ್ಳುವಿರಿ. ನಿಮಗೆ ಸಿಕ್ಕ ಅನಾದರದಿಂದ ಬೇಸರಗೊಳ್ಳುವಿರಿ. ದ್ವೇಷದಿಂದ ನಿಮ್ಮ ಜೀವನವು ನ್ನು ಮಾರ್ಗಭ್ರಷ್ಟವಾಗಬಹುದು.
ಧನು ರಾಶಿ: ಪ್ರಮಾಣವರಿತು ನಿಮ್ಮ ಜೊತೆ ಮಾತನಾಡುವರು. ಅನಿರ್ದಿಷ್ಟ ಅವಧಿಯವರೆಗೆ ಉದ್ಯೋಗದ ಕಾರಣಕ್ಕೆ ಓಡಾಟ ಮಾಡುವಿರಿ. ಇಂದು ನಿಮಗೆ ಹಳೆಯ ಘಟನೆಗಳಿಂದ ಪಾಪಪ್ರಜ್ಞೆ ಕಾಡಬಹುದು. ಕೆಲಸದ ಜಾಗದಲ್ಲಿ ಇನ್ನೊಬ್ಬರ ಕೆಲಸದಲ್ಲಿ ಹಸ್ತಕ್ಷೇಪ ಮಾಡಬೇಡಿ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರು ಇಂದು ಉತ್ತಮ ಲಾಭವನ್ನು ಪಡೆಯುವರು. ಪ್ರೇಮದ ವಿಚಾರದಲ್ಲಿ ನೀವು ಎಚ್ಚರಿಕೆಯಿಂದ ಮುಂದುವರಿಯಿರಿ. ಶತ್ರುಗಳಿಂದ ಕೆಲಸಗಳಿಗೆ ತೊಂದರೆಯಾಗಬಹುದು. ಇಂದು ನಿಮಗೆ ಸ್ವತಂತ್ರವಾದಂತೆ ಅನ್ನಿಸಬಹುದು. ಹೆಚ್ಚು ಪ್ರಯತ್ನವಿದ್ದರೂ ಸ್ವಲ್ಪ ಫಲವು ಇರಲಿದೆ.
ಮಕರ ರಾಶಿ; ಉದ್ವೇಗದಲ್ಲಿ ನೀವು ಭೋಜನವನ್ನು ಸರಿಯಾಗಿ ಮಾಡಲಾಗದು. ನಿಮ್ಮ ಕೆಲಸವು ಇಂದು ಅಪೂರ್ಣವಾಗಿದ್ದರೆ, ನಿಮ್ಮ ಮೇಲೆ ತುಂಬಾ ಕೋಪಗೊಳ್ಳಬಹುದು. ವ್ಯಾಪಾರಸ್ಥರು ಸುಲಭದಲ್ಲಿ ಲಾಭವನ್ನು ಗಳಿಸುವುದು ಕಷ್ಟವಾದೀತು. ಮನೆಯ ವಾತಾವರಣ ಪ್ರಶಾಂತವಾಗಿರುವುದು. ನಿಮ್ಮ ಕಾರ್ಯದ ಪರಿಶೀಲನೆಗೆ ಅಧಿಕಾರಿಗಳು ಬರಬಹುದು. ಯಾವುದಾದರೂ ಒಂದು ಆರೋಪದಲ್ಲಿ ಸಿಕ್ಕಿಹಾಕಿಕೊಳ್ಳುವ ಸನ್ನಿವೇಶವು ಬರಬಹುದು. ನಿಮ್ಮ ಪಾಲಿಗೆ ಬಂದಿದ್ದನ್ನು ಖುಷಿಯಿಂದ ಸ್ವೀಕರಿಸುವಿರಿ. ಭೂಮಿಯ ವ್ಯವಹಾರದಲ್ಲಿ ಗೊಂದಲವನ್ನು ಮಾಡಿಕೊಂಡು ಹಣವನ್ನು ಕಳೆದುಕೊಳ್ಳಬೇಕಾಗಬಹುದು.
ಕುಂಭ ರಾಶಿ: ಸಮಾರಂಭಗಳಿಗೆ ಬರುವ ಕರೆಯನ್ನು ನಿರಾಕರಿಸುವಿರಿ. ಚರಾಸ್ತಿಯನ್ನು ನೀವು ಬಿಡಬೇಕಾಗುತ್ತದೆ. ಇಂದು ನಿಮ್ಮ ಮನಸ್ಸು ಅನೇಕರ ಸಲಹೆಗಳ ಕಾರಣದಿಂದ ಬಹಳ ಚಂಚಲವಾಗಿರಲಿದೆ. ನೀವು ಆರ್ಥಿಕ ನಷ್ಟವನ್ನು ಎದುರಿಸಬೇಕಾಗುವುದು. ನಿಮ್ಮ ಸಂಗಾತಿಯ ಆರೋಗ್ಯವಯ ಕ್ಷೀಣಿಸಿದ್ದು ನಿಮಗೆ ಆತಂಕವು ಹೆಚ್ಚಾಗಬಹುದು. ನಿಮ್ಮ ಕುತೂಹಲವು ಇಂದು ತಣಿಯಬಹುದು. ನಿಮ್ಮ ಉದ್ಯೋಗದ ಕನಸು ನನಸಾಗುವ ಹಂತಕ್ಕೆ ತಲುಪಬಹುದು. ಅಶಿಸ್ತಿನ ವ್ಯವಸ್ಥೆಯಿಂದ ಸಿಟ್ಟಾಗುವಿರಿ.
ಮೀನ ರಾಶಿ: ಅಲ್ಪ ಅಂತರದಲ್ಲಿ ನಿಮ್ಮ ಆಸೆಯನ್ನು ಕಳೆದುಕೊಳ್ಳಬಹುದು. ರಾಜಕೀಯ ಬಲದಿಂದ ಇಂದು ಕಾರ್ಯಗಳು ಸಿದ್ಧಿಸುವುದು. ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಸಹಕಾರ ಸಿಗಲಿದೆ. ಉದ್ಯಮಿಗಳು ಇಂದು ದೊಡ್ಡ ಲಾಭವನ್ನು ಗಳಿಸುವ ಯೋಜನೆಯನ್ನು ನಿರೀಕ್ಷಿಸುವರು. ಇಂದು ನಿಮ್ಮ ಸಂಗಾತಿಯ ಜೊತೆ ತುಂಬಾ ಆಪ್ತವಾಗಿ ವ್ಯವಹರಿಸುವಿರಿ. ನೀವು ಗಳಿಸಲಾಗದ್ದನ್ನು ಉಳಿಸಿಕೊಳ್ಳಲೂ ಆಗದು. ನಿಮ್ಮ ವೈವಾಹಿಕ ಜೀವನದ ಹಳೆಯ ನೆನಪು ನಿಮಗೆ ಖುಷಿಕೊಡಬಹುದು. ನಿಮ್ಮ ವಸ್ತುವನ್ನು ಇನ್ನೊಬ್ಬರಿಗೆ ಕೊಡಲು ಇಚ್ಛಿಸುವಿರಿ.