Fri. Apr 18th, 2025

Bengaluru: ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ಉದ್ಯಮಿ ಆತ್ಮಹತ್ಯೆ!!! – ಪತ್ನಿಯಿಂದ ಅಸಲಿ ಕಾರಣ ಬಯಲು?!

ಬೆಂಗಳೂರು:(ನ.17) ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ಉದ್ಯಮಿ ಆತ್ಮಹತ್ಯೆಗೆ ಶರಣಾದ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮುದ್ದಿನಪಾಳ್ಯದಲ್ಲಿ ನಡೆದಿದೆ.

ಇದನ್ನೂ ಓದಿ: 🛑ಹಾಸನ: ಬಿಪಿಎಲ್​, ಎಪಿಎಲ್​ ಕಾರ್ಡ್ ​ದಾರರಿಗೆ ಬಿಗ್​ ಶಾಕ್​!!

ಮೃತನನ್ನು ನಾಗರಬಾವಿ ನಿವಾಸಿ ಪ್ರದೀಪ್ (42) ಎಂದು ಗುರುತಿಸಲಾಗಿದ್ದು, ಅವರು ಬಸವನಗುಡಿಯಲ್ಲಿ ಹೋಟೆಲ್ ನಡೆಸುತ್ತಿದ್ದರು. ಮಧ್ಯಾಹ್ನ ಬ್ಯಾಡರಹಳ್ಳಿ ಬಂದಿರುವ ಪ್ರದೀಪ್, ಅನ್ನಪೂರ್ಣೇಶ್ವರಿ ನಗರದ ಪೆಟ್ರೋಲ್ ಬಂಕ್ ಒಂದರಲ್ಲಿ 4 ಲೀಟರ್ ಪೆಟ್ರೋಲ್ ಖರೀದಿಸಿದ್ದರು.

ನಂತರ ಮುದ್ದಿನಪಾಳ್ಯದ ನಿರ್ಜನ ಪ್ರದೇಶಕ್ಕೆ ಬಂದು ಕಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮಾಹಿತಿ ಪ್ರಕಾರ, ಪೆಟ್ರೋಲ್ ಬಂಕ್‍ನಲ್ಲಿ ಸ್ಕೋಡಾ ಕಾರಿನಲ್ಲಿ ಬಂದು ಬಾಟೆಲ್ ನೀಡಿ ಪೆಟ್ರೋಲ್ ಹಾಕಿಸಿಕೊಂಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಮೇಲ್ನೋಟಕ್ಕೆ ಸಾಲದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಸದ್ಯ ಪ್ರದೀಪ್ ಪತ್ನಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಲಾಗುತ್ತಿದೆ. ಇನ್ನು ಎಎಸ್‍ಐ ಶ್ರೀನಿವಾಸಮೂರ್ತಿಯವರು ನೀಡಿದ ದೂರಿನ ಆಧಾರದ ಮೇಲೆ ಯುಡಿಆರ್ ಅಡಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *