Wed. Nov 20th, 2024

Bengaluru: ಡೇಟಿಂಗ್ ಆ್ಯಪ್ ನಲ್ಲಿ ಪರಿಚಯ, ಪ್ರೆಗ್ನೆಂಟ್ ಮಾಡಿ ಅಬಾರ್ಷನ್..!! – ಮದುವೆಗೆ ಒತ್ತಾಯಿಸಿದ್ದಕ್ಕೆ ಆತ ಮಾಡಿದ್ದೇನು ಗೊತ್ತಾ?!

ಬೆಂಗಳೂರು(ನ.17): ಮದುವೆಯಾಗುವುದಾಗಿ ನಂಬಿಸಿ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿ ವಿರುದ್ಧ ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಿಹಾಲ್ ಹುಸೇನ್ ಅತ್ಯಾಚಾರ ಎಸಗಿದ ಆರೋಪಿ. ಇದೇ ವರ್ಷ ಮಾರ್ಚ್​ನಲ್ಲಿ ಯುವತಿಗೆ ನಿಹಾಲ್​ ಹುಸೇನ್​ ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿದ್ದಾನೆ.​ ಬಳಿಕ, ನಿಹಾಲ್​ ಹುಸೇನ್​ ಇಬ್ಬರೂ ಅನ್ಯೋನ್ಯವಾಗಿ ಸುತ್ತಾಡಲು ಆರಂಭಿಸಿದ್ದಾರೆ. ಒಂದು ದಿನ, ಆರೋಪಿ ನಿಹಾಲ್​ ಹುಸೇನ್​ ಪಾರ್ಟಿಗೆಂದು ಹೋಟೆಲ್​ವೊಂದಕ್ಕೆ ಯುವತಿಯನ್ನು ಕರೆಸಿಕೊಂಡಿದ್ದಾನೆ ಎಂದು ಯುವತಿ ದೂರಿನಲ್ಲಿ ದಾಖಲಿಸಿದ್ದಾಳೆ.

ಇದನ್ನೂ ಓದಿ: ⭕ಪುತ್ತೂರು: ಕಾರ್ಮಿಕನ ಶವ ರಸ್ತೆಯಲ್ಲಿ ಬಿಟ್ಟು ಹೋದ ಪಿಕಪ್ ಡ್ರೈವರ್!

ಬಳಿಕ, ಜ್ಯೂಸ್​ನಲ್ಲಿ ಮದ್ಯ ಬೆರೆಸಿ ಯುವತಿಗೆ ಕುಡಿಸಿದ್ದಾನೆ. ನಂತರ, ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಯುವತಿ ಗರ್ಭಾವತಿಯಾದ ವಿಚಾರ ತಿಳಿಯುತ್ತಿದ್ದಂತೆ ನಿಹಾಲ್​ ಹುಸೇನ್​​ ಗರ್ಭಪಾತ ಮಾಡಿಸಿದ್ದಾನೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ನಂತರ, ಯುವತಿ ಮದುವೆ ಆಗುವಂತೆ ನಿಹಾಲ್​ ಹುಸೇನ್​ಗೆ ಹೇಳಿದ್ದಾಳೆ. ಆದರೆ, ಇದಕ್ಕೆ ಒಪ್ಪದ ನಿಹಾಲ್​ ಹುಸೇನ್​ ಯುವತಿಯ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

ಯುವತಿ ಹಳೆ ಕೇಸ್​ ಓಪನ್​:
ಯುವತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆಗೆ ಇಳಿದಾಗ, ಮತ್ತೊಂದು ವಿಚಾರ ಬಹಿರಂಗವಾಗಿದೆ. ಯುವತಿ ಇದೇ ರೀತಿ ಮತ್ತೊಬ್ಬ ಯುವಕ ವಿರುದ್ಧ 2023ರಲ್ಲಿ ದೂರು ನೀಡಿದ್ದಳು ಎಂಬ ಮಾಹಿತಿ ತಿಳಿದಿದೆ.

ಇಲ್ಲಿಯೂ ಕೂಡ ಯುವತಿ, ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಲಾಗಿದೆ ಎಂದು ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಸದ್ಯ ಪೊಲೀಸರು ಎಲ್ಲ ಆಯಾಮಗಳಲ್ಲೂ ತನೆಖೆ ನಡೆಸುತ್ತಿದ್ದಾರೆ.

ಇತ್ತೀಚಿಗೆ ದಾವಣೆಗೆರೆಯಲ್ಲಿ ಯುವಕನೊಬ್ಬ ಮದುವೆಯಾಗುವುದಾಗಿ ನಂಬಿಸಿ ಯುವತಿಯರಿಂದ ಬರೊಬ್ಬರಿ 62 ಲಕ್ಷ ರೂ. ಪಡೆದು ವಂಚಿಸಿದ್ದ ಪ್ರಕರಣ ಬಯಲಾಗಿತ್ತು. ಯುವಕ ಮ್ಯಾಟ್ರಿಮೋನಿಯಲ್ಲಿ ಯುವತಿಯರಿಗೆ ಪರಿಚಯವಾಗಿ, ಮದುವೆಯಾಗುವುದಾಗಿ ನಂಬಿಸುತ್ತಿದ್ದನು. ಬಳಿಕ, “ನಿಮಗೆ ಸರ್ಕಾರಿ ಕೆಲಸ ಕೊಡಿಸುತ್ತೇನೆ, ನಂತರ ವಿವಾಹವಾಗುತ್ತೇನೆ” ಎಂದು ಹೇಳುತ್ತಿದ್ದನು. ಅಲ್ಲದೇ, “ಸರ್ಕಾರಿ ಕೆಲಸ ಪಡೆಯಲು ಇಷ್ಟು ಹಣ ನೀಡಿ” ಎಂದು ಹೇಳುತ್ತಿದ್ದನು.

ಈತನ ಮಾತು ನಂಬಿದ ಯುವತಿಯರು ಹಣ ಆತನ ಅಕೌಂಟ್​ಗೆ ಹಾಕುತ್ತಿದ್ದರು. ಬಳಿಕ, ಆರೋಪಿ ಸಂಪರ್ಕಕ್ಕೆ ಸಿಗದೆ ಪರಾರಿಯಾಗುತ್ತಿದ್ದನು. ಆರೋಪಿ ಈ ರೀತಿ ಅನೇಕ ಯುವತಿಯರಿಗೆ ವಂಚಿಸಿದ್ದಾನೆ.

Leave a Reply

Your email address will not be published. Required fields are marked *