ಕಾಪು: (ನ.17): ಹಿಟ್ ಆ್ಯಂಡ್ ರನ್ ಆರೋಪದಲ್ಲಿ ಕಾಂಗ್ರೆಸ್ ಮುಖಂಡ ಬೆಳಪು ದೇವಿಪ್ರಸಾದ್ ಶೆಟ್ಟಿ ಪುತ್ರ ಪ್ರಜ್ವಲ್ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದರು. ಇದೀಗ ಪ್ರಜ್ವಲ್ ಶೆಟ್ಟಿಯನ್ನು ಬೇಲ್ ಮೇಲೆ ಬಿಡುಗಡೆ ಮಾಡಿದ್ದಾರೆ.
ಇದನ್ನೂ ಓದಿ: 💍ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ ಡಾಲಿ ಧನಂಜಯ್
ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬೆಳಪು ಬೆಳಪುವಿನ ಮಿಲಿಟರಿ ಕಾಲನಿಯಲ್ಲಿ ಪ್ರಜ್ವಲ್ ಶೆಟ್ಟಿ ಹಿಟ್ ಆ್ಯಂಡ್ ರನ್ ನಡೆಸಿ ಪರಾರಿಯಾಗಿದ್ದನು. ಅಪಘಾತದಲ್ಲಿ ಮೊಹಮ್ಮದ್ ಹುಸೈನ್ (39) ಎಂಬುವವರು ಮೃತಪಟ್ಟಿದ್ದಾರೆ. ಪ್ರಜ್ವಲ್ ಶೆಟ್ಟಿ ತನ್ನ ಥಾರ್ ಜೀಪಿನಿಂದ ಮೊಹಮ್ಮದ್ ಹುಸೈನ್ ಅವರಿಗೆ ಗುದ್ದಿ ಪರಾರಿಯಾಗಿದ್ದನು.
ಅಪಘಾತದ ಭೀಕರತೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಶಿರ್ವ ಪೊಲೀಸರು ಆರೋಪಿ ಪ್ರಜ್ವಲ್ ಶೆಟ್ಟಿಯನ್ನು ಬಂಧಿಸಿದ್ದರು.
ವಿಚಾರಣೆ ವೇಳೆ ಆರೋಪಿ ಪ್ರಜ್ವಲ್ ಶೆಟ್ಟಿ ನಿದ್ದೆ ಮಂಪರಿನಲ್ಲಿ ಅಪಘಾತ ನಡೆದಿದೆ ಎಂದು ಹೇಳಿದ್ದಾನೆ. ವಿಚಾರಣೆ ಬಳಿಕ, ಆರೋಪಿ ಪ್ರಜ್ವಲ್ ಶೆಟ್ಟಿಯನ್ನು ಠಾಣೆಯ ಬೇಲ್ ಮೇಲೆ ಬಿಡುಗಡೆ ಮಾಡಿದ್ದಾರೆ. ವಿಚಾರಣೆಗೆ ಹಾಜರಾಗಲು ಶಿರ್ವ ಪೊಲೀಸರು ಸೂಚನೆ ನೀಡಿದ್ದಾರೆ.
ಆರೋಪ ಸಾಬೀತಾದರೆ ಪ್ರಜ್ವಲ್ಗೆ ಮೂರು ವರ್ಷ ಶಿಕ್ಷೆಯಾಗುತ್ತದೆ. ಮೃತರ ಕುಟುಂಬಸ್ಥರು ಹಿಟ್ ಆ್ಯಂಡ್ ರನ್ ಎಂದು ದೂರು ನೀಡಿದ್ದಾರೆ. ಆರೋಪಿಯ ಥಾರ್ ಜೀಪ್ ಪೊಲೀಸರ ವಶದಲ್ಲಿದೆ ಎಂದು ತಿಳಿದು ಬಂದಿದೆ.