Wed. Nov 20th, 2024

Kapu: ಹಿಟ್ ಆ್ಯಂಡ್ ರನ್ ಕೇಸ್‌ – ಕಾಂಗ್ರೆಸ್ ಮುಖಂಡನ ಪುತ್ರ ಪ್ರಜ್ವಲ್ ಶೆಟ್ಟಿ ಠಾಣೆ ಬೇಲ್​ ಮೇಲೆ ರಿಲೀಸ್!!

ಕಾಪು: (ನ.17): ಹಿಟ್ ಆ್ಯಂಡ್ ರನ್ ಆರೋಪದಲ್ಲಿ ಕಾಂಗ್ರೆಸ್ ಮುಖಂಡ ಬೆಳಪು ದೇವಿಪ್ರಸಾದ್ ಶೆಟ್ಟಿ ಪುತ್ರ ಪ್ರಜ್ವಲ್ ಶೆಟ್ಟಿಯನ್ನು ಪೊಲೀಸರು ಬಂಧಿಸಿದ್ದರು. ಇದೀಗ ಪ್ರಜ್ವಲ್ ಶೆಟ್ಟಿಯನ್ನು ಬೇಲ್​​ ಮೇಲೆ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: 💍ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡ ಡಾಲಿ ಧನಂಜಯ್‌

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಬೆಳಪು ಬೆಳಪುವಿನ ಮಿಲಿಟರಿ ಕಾಲನಿಯಲ್ಲಿ ಪ್ರಜ್ವಲ್ ಶೆಟ್ಟಿ ಹಿಟ್​ ಆ್ಯಂಡ್​ ರನ್​ ನಡೆಸಿ ಪರಾರಿಯಾಗಿದ್ದನು. ಅಪಘಾತದಲ್ಲಿ ಮೊಹಮ್ಮದ್ ಹುಸೈನ್ (39) ಎಂಬುವವರು ಮೃತಪಟ್ಟಿದ್ದಾರೆ. ಪ್ರಜ್ವಲ್ ಶೆಟ್ಟಿ ತನ್ನ ಥಾರ್ ಜೀಪಿನಿಂದ ಮೊಹಮ್ಮದ್ ಹುಸೈನ್​ ಅವರಿಗೆ ಗುದ್ದಿ ಪರಾರಿಯಾಗಿದ್ದನು.

ಅಪಘಾತದ ಭೀಕರತೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಶಿರ್ವ ಪೊಲೀಸರು ಆರೋಪಿ ಪ್ರಜ್ವಲ್​ ಶೆಟ್ಟಿಯನ್ನು ಬಂಧಿಸಿದ್ದರು.

ವಿಚಾರಣೆ ವೇಳೆ ಆರೋಪಿ ಪ್ರಜ್ವಲ್ ಶೆಟ್ಟಿ ನಿದ್ದೆ ಮಂಪರಿನಲ್ಲಿ ಅಪಘಾತ ನಡೆದಿದೆ ಎಂದು ಹೇಳಿದ್ದಾನೆ. ವಿಚಾರಣೆ ಬಳಿಕ, ಆರೋಪಿ ಪ್ರಜ್ವಲ್ ಶೆಟ್ಟಿಯನ್ನು ಠಾಣೆಯ ಬೇಲ್​​​ ಮೇಲೆ ಬಿಡುಗಡೆ ಮಾಡಿದ್ದಾರೆ. ವಿಚಾರಣೆಗೆ ಹಾಜರಾಗಲು ಶಿರ್ವ ಪೊಲೀಸರು ಸೂಚನೆ ನೀಡಿದ್ದಾರೆ.

ಆರೋಪ ಸಾಬೀತಾದರೆ ಪ್ರಜ್ವಲ್​​ಗೆ ಮೂರು ವರ್ಷ ‌ಶಿಕ್ಷೆಯಾಗುತ್ತದೆ. ಮೃತರ ಕುಟುಂಬಸ್ಥರು ಹಿಟ್ ಆ್ಯಂಡ್ ರನ್ ಎಂದು ದೂರು ನೀಡಿದ್ದಾರೆ. ಆರೋಪಿಯ ಥಾರ್ ಜೀಪ್​ ಪೊಲೀಸರ ವಶದಲ್ಲಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *