ಮೇಷ ರಾಶಿ: ಸಾಮಾಜಿಕ ಕಾರ್ಯಗಳಲ್ಲಿ ತೊಡಗಿದ್ದೇ ಇಂದು ನಿಮಗೆ ಲಾಭವಾಗುವುದು. ಸ್ಥಿರಾಸ್ತಿಯನ್ನು ಖರೀದಿಸುವ ಸಂದರ್ಭದಲ್ಲಿ ನಾನಾ ತೊಂದರೆಗಳು ಬರಬಹುದು. ಮಕ್ಕಳ ಆಗಮನದಿಂದ ಮನೆಯಲ್ಲಿ ಸಂತೋಷವು ನೆಲೆಸುವುದು. ಆಸ್ತಿಯನ್ನು ಖರೀದಿಸುವ ಕುರಿತು ಚರ್ಚೋಪಚರ್ಚೆಗಳನ್ನು ಮಾಡುವಿರಿ. ಆರ್ಥಿಕ ಒತ್ತಡದಿಂದ ನೀವು ಹೊರಬರಲು ದಾರಿಯನ್ನು ಹುಡುಕುವಿರಿ. ಇಂದಿನ ಉತ್ಸಾಹವು ಕೆಲಸಕ್ಕೆ ಪೂರಕವಾಗುವುದು. ಹಣದ ಹರಿವು ಸಾಧಾರಣವಾಗಿ ಇರಲಿದೆ. ಪ್ರೀತಿಪಾತ್ರರ ವರ್ತನೆಯಿಂದ ಕಿರಿಕಿರಿ ಆಗಬಹುದು.
ವೃಷಭ ರಾಶಿ: ಇಂದು ನಿಮಗೆ ಸಿಕ್ಕ ಸಂತೋಷವನ್ನು ಇತರರಿಗೂ ಹಂಚುವಿರಿ. ನಿಮಗೆ ಪ್ರಾಪ್ತವಾದ ಸ್ಥಾನದಿಂದ ನಿಮ್ಮ ಆಲೋಚನಾ ಕ್ರಮಗಳೂ ವ್ಯತ್ಯಾಸವಾಗುವುದು. ಸಂಗಾತಿಯ ಮಾತಿನಂತೆ ನಡೆದುಕೊಳ್ಳುವಿರಿ. ಮನೆಯಲ್ಲಿ ಹಿಂದಿನ ಘಟನೆಯೇ ಮರುಕಳಿಸಲಿದ್ದು ಸಣ್ಣ ವಾಗ್ವಾದವೂ ನಡೆಯಬಹುದು. ವ್ಯಾಪಾರವು ಸಾಧಾರಣವಾಗಿ ಇರಲಿದೆ. ಉದ್ಯೋಗವನ್ನು ಬದಲಿಸಲು ಮನಸ್ಸು ಇಲ್ಲದಿದ್ದರೂ ನಿಮಗೆ ಅನಿವಾರ್ಯ ಆಗಬಹುದು. ವಾಹನದಿಂದ ಬಿದ್ದು ಪೆಟ್ಟಾಗಬಹುದು. ಆತುರದ ಚಾಲನೆ ಬೇಡ. ಇಂದು ಬಂಧುಗಳನ್ನು ಮನೆಗೆ ಆಹ್ವಾನಿಸುವಿರಿ. ಮನಸ್ಸಿನ ನೋವನ್ನು ಮರೆಯಲು ಒಂಟಿಯಾಗಿ ದೂರ ಹೋಗುವಿರಿ.
ಮಿಥುನ ರಾಶಿ: ನಿಮ್ಮನ್ನು ನಿಯಂತ್ರಿಸಲಾಗದಿದ್ದರೂ ಸಲ್ಲದ ಪ್ರಯತ್ನಗಳು ಸಾಗುವುದು. ಕಾರ್ಯದ ಸ್ಥಳದಲ್ಲಿ ನಿಮಗೆ ಕಹಿಯಾದ ಅನುಭವವಾಗಲಿದೆ. ಹಿತಶತ್ರುಗಳು ಸಕಾಲಕ್ಕೆ ಕಾರ್ಯದಲ್ಲಿ ತೊಂದರೆಯನ್ನು ಕೊಡುವರು. ಹೊಸತರ ಕಲಿಕೆಯಲ್ಲಿ ಆಸಕ್ತಿಯು ಅಧಿಕವಾಗುವುದು. ಒತ್ತಡದ ನಿವಾರಣಡಗೆ ಸಭೆ-ಸಮಾರಂಭಗಳಿಗೆ ತೆರಳುವಿರಿ. ಕೃಷಿಕರಿಗೆ ಲಾಭದಲ್ಲಿ ಸ್ವಲ್ಪ ಇಳಿಮುಖ ಇರಲಿದೆ. ಸಾಮಾಜಿಕ ಕಾರ್ಯಗಳಿಂದ ಮೆಚ್ಚುಗೆ ಪಡೆಯುವಿರಿ. ಅತಿಯಾದ ಕೋಪದಿಂದ ಎಲ್ಲ ಕೆಲಸವನ್ನು ವ್ಯತ್ಯಾಸ ಮಾಡಿಕೊಳ್ಳುವಿರಿ.
ಕಟಕ ರಾಶಿ: ಧಾರ್ಮಿಕ ಕಾರ್ಯಗಳ ಸಿದ್ಧತೆಯಲ್ಲಿ ನೀವಿರುವಿರಿ. ನಿಮ್ಮ ಸ್ನೇಹಪರವಾದ ವ್ಯಕ್ತಿತ್ವವು ಎಲ್ಲರಿಗೂ ಇಷ್ಟವಾಗುತ್ತದೆ ಎನ್ನಲಾಗದು. ಪರಾಧೀನ ಸ್ಥಿತಿಯಿಂದ ಮಾನಸಿಕ ಹಿಂಸೆಯನ್ನು ಅನುಭವಿಸುವಿರಿ. ಅಧಿಕಾರದಿಂದ ಕೆಲವು ತೊಂದರೆಯನ್ನು ಎದುರಿಸಬೇಕಾದೀತು. ಇಂದಿನ ಕಾರ್ಯವು ಯಾವುದೇ ತೊಂದರೆಗಳಿಲ್ಲದೇ ಮುಗಿಯುವುದು. ಸ್ತ್ರೀಯರು ಅನಾರೋಗ್ಯದಿಂದ ಪೀಡಿತರಾಗುವಿರಿ. ಮನೆಯಿಂದ ದೂರವಿರಲಿದ್ದು ಆಹಾರದ ತೊಂದರೆಯನ್ನು ಅನುಭವಿಸುವಿರಿ. ದಾಂಪತ್ಯದಲ್ಲಿ ಹೊಂದಾಣಿಕೆ ಅವಶ್ಯಕತೆ ಅಧಿಕವಾಗಿ ಇರಲಿದೆ.
ಸಿಂಹ ರಾಶಿ: ಗೌರವವನ್ನು ಕೊಡುವವರಿಗೆ ಅಗೌರವ ತೋರಿಸಿದರೆ ಶತ್ರುಗಳಾಗುವರು. ಇಂದು ವಾಹನದಿಂದ ತೊಂದರೆಯಾಗುವ ಸಾಧ್ಯತೆ ಇದೆ. ಅನಿರೀಕ್ಷಿತ ಪ್ರಯಾಣವು ಆಯಾಸವನ್ನು ಕೊಡಬಹುದು. ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಪರಾಜಯ ಆಗಬಹುದು. ಭಾವನಾತ್ಮಕ ವಿಚಾರಗಳಿಗೆ ಸ್ಪಂದಿಸುವುದು ಕಷ್ಟವಾಗಲಿದೆ. ನಿಮ್ಮವರ ಮಾತುಗಳಿಂದ ನೀವು ಬೇಸರಗೊಳ್ಳುವಿರಿ. ಸಾಲಗಾರರಿಗೆ ಅತಿಯಾದ ಕಿರಿಕಿರಿಯು ಮೇಲಿಂದ ಮೇಲೆ ಬರಲಿದೆ.
ಕನ್ಯಾ ರಾಶಿ; ಪ್ರೀತಿಯ ಪರವಶತೆಯಲ್ಲಿ ನೀವು ಇಂದು ಇರುವಿರಿ. ಹಣದ ಆಸೆಗೆ ಅನ್ಯ ಮಾರ್ಗವನ್ನು ಹಿಡಿಯುವ ಸಾಧ್ಯತೆ ಇದೆ. ಇಂದು ಯಾರ ಬಳಿಯೂ ಸಹಾಯವನ್ನು ಕೇಳುವ ಮನಸ್ಸು ಇರದು. ಆಸ್ತಿಯ ವಿಚಾರವಾಗಿ ಕಾನೂನಾತ್ಮಕ ಹೋರಾಟಕ್ಕೆ ಸಿದ್ಧರಾಗುವಿರಿ. ನಿಮ್ಮ ನಿರ್ಧಾರವನ್ನು ಯಾರು ಏನೇ ಹೇಳಿದರೂ ಬದಲಾಯಿಸುವುದಿಲ್ಲ. ಪರಸ್ಪರ ಸಾಮರಸ್ಯಕ್ಕಾಗಿ ದಂಪತಿಗಳು ದಾರಿಯನ್ನು ಹುಡುಕುವರು. ಕಳೆದು ಹೋದ ಪ್ರೇಮ ವಿಚಾರವು ಮತ್ತೆ ಕಾರಣಾಂತರಗಳಿಂದ ನೆನಪಾಗುವುದು. ತಪ್ಪನ್ನು ಒಪ್ಪಿಕೊಳ್ಳದೇ ಅಹಂಕಾರವನ್ನು ತೋರಿಸುವಿರಿ.
ತುಲಾ ರಾಶಿ: ವೈವಾಹಿಕ ತೀರ್ಮಾನವನ್ನು ನೀವು ಮುಂದಕ್ಕೆ ಹಾಕುವಿರಿ. ಇಂದು ಭೂಮಿಯ ಖರೀದಿಯ ಬಗ್ಗೆ ಚಿಂತನೆ ಇದ್ದರೆ ಮುಂದುವರಿಯಬಹುದು. ಸಹೋದರನ ಮಾತಗಳನ್ನು ನೀವು ಜೀರ್ಣಮಾಡಿಕೊಳ್ಳುವುದು ಕಷ್ಟವಾಗಿ ಸಿಟ್ಟಾಗುವಿರಿ. ಹಳೆಯ ಅನುಭವದ ಆಧಾರದ ಮೇಲೆ ನೀವು ಕೆಲಸವನ್ನು ಮಾಡುವಿರಿ. ನಿಮ್ಮ ಮಾತಿನ ಮೇಲೆ ವಿಶ್ವಾಸದ ಕೊರತೆ ಕಾಣಲಿದೆ. ವಾಹನವನ್ನು ಚಲಾಯಿಸುವಾಗ ಆತುರ ಬೇಡ. ದೂರ ಹೋಗುವವರಿದ್ದರೆ ಹಿರಿಯರ ಆಶೀರ್ವಾದವನ್ನು ಪಡೆದುಕೊಳ್ಳಿ.
ವೃಶ್ಚಿಕ ರಾಶಿ: ಗಂಭೀರವಾದ ಆಲೋಚನೆಯಿಂದ ಹೊಸ ಯೋಜನೆಯು ಹೊರಬರುವುದು. ನೀವು ಇಂದು ಅನೇಕ ದಿನಗಳಿಂದ ನಿಂತಿದ್ದ ಕೆಲಸಗಳನ್ನು ಪೂರ್ಣಗೊಳ್ಳಬಹುದು. ಉದ್ಯೋಗಕ್ಕೆ ಅನೇಕ ಮಾರ್ಗಗಳು ತೆರೆದುಕೊಳ್ಳಲಿವೆ. ಅಧಿಕಾರಿವರ್ಗದಿಂದ ನಿಮ್ಮ ಗೌರವಕ್ಕೆ ದಕ್ಕೆ ಆಗಬಹುದು. ಸಂಗಾತಿಯ ಇಂಗಿತವನ್ನು ಅರಿತು ಕಾರ್ಯವನ್ನು ಮಾಡುವಿರಿ. ಮನೋಭಿಲಾಶೆಯನ್ನು ಪೂರ್ಣಗೊಳಿಸಿಕೊಳ್ಳುವಿರಿ. ಒಂಟಿಯಾಗಿ ಸುತ್ತಾಡಬೇಕೆನಿಸುವುದು.
ಧನು ರಾಶಿ: ಅಧಿಕಾರಿ ವರ್ಗದವರಿಗೆ ಇಂದು ಮೇಲಿನಿಂದ ಒತ್ತಡ ಬರುವುದು. ಇಂದು ನಿಮಗೆ ಸಾಲ ಕೊಡಲಿಕ್ಕಾಗಿ ಒಂದರಮೇಲೆ ಒಂದರಂತೆ ಕರೆಗಳು ಬರಬಹುದು. ತಂದೆಯ ಕಾರ್ಯಕ್ಕೆ ನಿಮ್ಮ ಸಹಕಾರವು ಇರಲಿದೆ. ನಿಮ್ಮವರ ಪ್ರೀತಿಯನ್ನು ಕಳೆದುಕೊಳ್ಳುವ ಭಯವು ಇರಲಿದೆ. ಹೇಳಬೇಕಾದ ವಿಚಾರವನ್ನು ನೇರವಾಗಿ ಹೇಳಿ. ನಿಮ್ಮ ಮಾತು ಚೌಕಟ್ಟನ್ನು ಮೀರಬಹುದು. ಎಲ್ಲರ ಕಣ್ಣಿಗೆ ಪರಮಸ್ವಾರ್ಥಿ ಎನಿಸಿಕೊಳ್ಳುವಿರಿ. ಸರ್ಕಾರದ ಸೌಲಭ್ಯವನ್ನು ಪಡೆಯಲು ನೀವು ಓಡಾಟ ಮಾಡುವಿರಿ. ಮಾತಿನಿಂದ ನೀವು ಗೆಲ್ಲವುದು ಸುಲಭವಲ್ಲ.
ಮಕರ ರಾಶಿ: ನಿಮಗೆ ಗೊತ್ತಿರುವುದನ್ನು ಹೇಳಲು ನಿಮಗೆ ನಿರ್ಭೀತಿ ಇರುವುದು. ಕಿಂಚಿತ್ತಾದರೂ ನಿಮ್ಮಿಂದ ಸಹಕರಾವಾದರೆ ನಿಮಗೆ ಸಮಾಧಾನ ಸಿಗಲಿದೆ. ಹಿರಿಯರಿಗೆ ಅಗೌರವದ ಮಾತುಗಳನ್ನು ಆಡುವಿರಿ. ನಿಮ್ಮ ಮೇಲೆ ಸಂದೇಹವು ಬರಬಹುದು. ಭವಿಷ್ಯದ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳುವಿರಿ. ನಿಮ್ಮ ಮನೆಯ ಸಮಸ್ಯೆಯನ್ನು ಬೇರೆಯವರ ಜೊತೆ ಹಂಚಿಕೊಳ್ಳುವುದು ಬೇಡ. ನಿಮ್ಮ ನಿರ್ಧಾರಕ್ಕೆ ನಿಮಗೆ ಸಂಪೂರ್ಣ ಬೆಂಬಲವಿರುವುದು. ಮನೆಗೆ ಬೇಕಾದ ವಸ್ತುಗಳನ್ನು ನೀವು ಖರೀದಿಸಬೇಕಾಗುವುದು.
ಕುಂಭ ರಾಶಿ; ಆಕಸ್ಮಿಕವಾಗಿ ಬರುವ ಜವಾಬ್ದಾರಿಗಳನ್ನು ಧೈರ್ಯವಾಗಿ ನಿರ್ವಹಿಸುವಿರಿ. ನಿಮ್ಮ ಇಂದಿನ ಯೋಜನೆಗಳು ತಲೆಕೆಳಗಾಗುವುದು. ಎಲ್ಲ ವಿಚಾರಗಳನ್ನೂ ನೀವು ನಿರಾಧಾರವಾಗಿ ತಳ್ಳಿಹಾಕುವಿರಿ. ಅಸತ್ಯವನ್ನು ಹೇಳುವುದು ಗೊತ್ತಾದೀತು. ಹಿತವಚನದಿಂದ ಯಾವ ಪರಿವರ್ತನೆಯೂ ಆಗದು. ನಿಮ್ಮ ನಡೆವಳಿಕೆಯು ಅಸಹಜತೆ ಎಂದು ಕೆಲವರಿಗೆ ಅನ್ನಿಸಬಹುದು. ಅನಿರೀಕ್ಷಿತ ಬದಲಾವಣೆಯನ್ನು ನೀವು ಸ್ವೀಕರಿಸಲಾರಿರಿ. ಎಂದೋ ಕಳೆದುಕೊಂಡ ವಸ್ತುವು ಇಂದು ಪ್ರಾಪ್ತವಾಗುವುದು. ಹಣದ ಅಭಾವವಿದ್ದರೂ ಖರ್ಚನ್ನು ಮಾಡಬೇಕಾದ ಸ್ಥಿತಿಯು ಬರಬಹುದು.
ಮೀನ ರಾಶಿ; ಆಪ್ತರಿಗೆ ನಿಮ್ಮಿಂದ ಸಹಾಯ ಸಿಗಲಿದೆ. ನಿಮ್ಮ ಕನಸುಗಳು ನನಸಾಗಿಸುವ ಸಮಯವನ್ನು ನಿರೀಕ್ಷಿಸುವಿರಿ. ಸಮಯವನ್ನು ವ್ಯರ್ಥ ಮಾಡಲು ಇಷ್ಟಪಡುವುದಿಲ್ಲ. ಯಾವ ಫಲಾಪೇಕ್ಷೆಯನ್ನೂ ಇಂದು ಇಟ್ಟುಕೊಳ್ಳಲಾರಿರಿ. ಉಡುಗೊರೆಯನ್ನು ಸ್ನೇಹಿತರಿಂದ ಸ್ವೀಕರಿಸುವಿರಿ. ಭೂಮಿಯ ವ್ಯವಹಾರದಲ್ಲಿ ಹಿನ್ನಡೆಯಾಗಲಿದೆ. ಇಂದಿನ ಸಮಯವು ವ್ಯರ್ಥವಾಗುವುದು. ಇಂದು ನಿಮ್ಮ ಜವಾಬ್ದಾರಿಯ ಕಾರ್ಯದಲ್ಲಿ ಮಗ್ನರಾಗುವಿರಿ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಲು ಆಸಕ್ತಿಯು ಕಡಿಮೆ ಇರುವುದು. ನಿಮ್ಮ ಪ್ರಾಮಾಣಿಕತೆಯ ಪರೀಕ್ಷೆ ಆಗಬಹುದು. ಸಂಗಾತಿಯನ್ನು ಭೇಟಿಯಾಗಲು ನಾನಾ ಕಾರಣವನ್ನು ಹುಡುಕುವಿರಿ.