Sun. Apr 13th, 2025

Hubballi: ಅಣ್ಣ-ತಮ್ಮಂದಿರ ಜಗಳ ಬಿಡಿಸಲು ಬಂದ ಅತ್ತಿಗೆಯ ಕತ್ತು ಸೀಳಿದ ಮೈದುನ!!

ಹುಬ್ಬಳ್ಳಿ: (ನ.18) ಅಣ್ಣ-ತಮ್ಮಂದಿರ ಜಗಳ ಬಿಡಿಸಲು ಬಂದಿದ್ದ ಅತ್ತಿಗೆಯನ್ನೇ ಕತ್ತು ಸೀಳಿ ಹತ್ಯೆಗೈದ ದುರ್ಘಟನೆ ಹುಬ್ಬಳ್ಳಿ ಎಸ್‌ಎಂ ಕೃಷ್ಣನಗರದಲ್ಲಿ ನಡೆದಿದೆ. ಸಾಜಿಯಾಬಾನು ಕೊಲೆಯಾದ ಮಹಿಳೆ, ನಾಸೀರ್ ಹತ್ಯೆಗೈದ ಆರೋಪಿ. ಸಾದಿಕ್ ಹಾಗೂ ನಾಸೀರ್ ಸಂಬಂಧದಲ್ಲಿ ಅಣ್ಣ-ತಮ್ಮಂದಿರು. ಹತ್ಯೆಯಾದ ಸಾಜಿಯಾಭಾನು ಸಾದಿಕ್ ಪತ್ನಿಯಾಗಿದ್ದಾಳೆ.

ಇದನ್ನೂ ಓದಿ: 🍄ಪುತ್ತೂರು: ಮಳೆಗಾಲದ ಅಪರೂಪದ ಕೌತುಕದ ಅತಿಥಿ ಪೌಡರ್ ಬ್ರಷ್ ಅಣಬೆ…!

ಕ್ಷುಲ್ಲಕ ಕಾರಣಕ್ಕೆ ಸಾದಿಕ್ ಹಾಗೂ ನಾಸೀರ್ ಮಧ್ಯೆ ಗಲಾಟೆಯಾಗಿದೆ. ಮಾತಿಗೆ ಮಾತು ಬೆಳೆದು ಪರಸ್ಪರ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಹರಿತವಾದ ಚಾಕು ಹಿಡಿದು ಅಣ್ಣನ ಮೇಲೆ ದಾಳಿ ಮಾಡಿದ್ದ ನಾಸಿರ್. ಚಾಕು ಹಿಡಿದು ದಾಳಿ ಮಾಡುವುದು ಕಂಡು ಜಗಳ ಬಿಡಿಸಲು ಬಂದಿರುವ ಸಾಜಿಯಾಬಾನು.

ಜಗಳ ಬಿಡಿಸಲು ಮಧ್ಯೆ ನೀನು ಬರ್ತಿಯಾ ಅಂತಾ ಸಾಜಿಯಾಬಾನು ಕುತ್ತಿಗೆಗೆ ಚಾಕುವಿನಿಂದ ಇರಿದಿರುವ ನಾಸಿರ್. ನೋಡನೋಡುತ್ತಿದ್ದಂತೆ ರಕ್ತದ ಮಡುವಿನಲ್ಲಿ ಒದ್ದಾಡುತ್ತ ಬಿದ್ದ ಸಾಜಿಯಾಬಾನು. ಸ್ಥಳೀಯರ ಸಹಾಯದಿಂದ ತಕ್ಷಣ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ತೀವ್ರ ರಕ್ತಸ್ರಾವದಿಂದ ಸಾಜಿಯಾಭಾನು ಮೃತಪಟ್ಟಿದ್ದರು.

Leave a Reply

Your email address will not be published. Required fields are marked *