ಇರಾಕ್:(ನ.18) ಏನು ಅರಿಯದ 9 ವರ್ಷದ ಬಾಲಕಿ ಪ್ರೆಗ್ನೆಂಟ್ ಆಗಿದ್ದು, ಆ ಖುಷಿಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾಳೆ. ಈ ಕುರಿತಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಇಂತಹ ವಿಲಕ್ಷಣ ಘಟನೆಯೊಂದು ಇರಾಕ್ ನಲ್ಲಿ ನಡೆದಿದೆ. ಇರಾಕ್ ಸರ್ಕಾರವು ವಿವಾಹ ಕಾನೂನಿನಲ್ಲಿ ಮಾಡಲಿರುವ ಬದಲಾವಣೆಗಳ ಅಡಿಯಲ್ಲಿ, ಹೆಣ್ಣುಮಕ್ಕಳ ಮದುವೆಯ ವಯಸ್ಸನ್ನು 18 ವರ್ಷದಿಂದ 9 ವರ್ಷಕ್ಕೆ ಇಳಿಸಲಾಗುವುದು ಎಂದು ಹೇಳಲಾಗುತ್ತಿದೆ. ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳು ಗರ್ಭಿಣಿಯಾಗುತ್ತಿದ್ದಾರೆ.
ಇದರರ್ಥ ಈ ತಿದ್ದುಪಡಿಯ ನಂತರ, ಪುರುಷರು ಹುಡುಗಿಯರನ್ನು ಮದುವೆಯಾಗಲು ಅನುಮತಿಸುತ್ತಾರೆ. ಇರಾಕ್ ನ ಈ ವಿಚಿತ್ರ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಇದು ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನುಗಳ ಉಲ್ಲಂಘನೆ ಮಾತ್ರವಲ್ಲ, ಸಮಾಜದಲ್ಲಿ ಅಸಮಾನತೆ ಮತ್ತು ಮಕ್ಕಳ ಶೋಷಣೆಯನ್ನು ಉತ್ತೇಜಿಸುವ ನಿರ್ಧಾರವಾಗಿದೆ ಎಂದು ಜನರು ಹೇಳುತ್ತಾರೆ.
ಸದ್ಯ ವೈರಲ್ ಆದ ವಿಡಿಯೋದಲ್ಲಿ ಕಂಡುಬಂದ ಹುಡುಗಿಗೆ 9 ವರ್ಷ ವಯಸ್ಸಾಗಿದ್ದು, ಆಕೆ 5 ತಿಂಗಳ ಗರ್ಭಿಣಿಯಾಗಿದ್ದಾಳೆ. ಗರ್ಭಿಣಿಯಾಗಿದ್ದಕ್ಕೆ ಆಕೆ ತುಂಬಾ ಖುಷಿಪಟ್ಟಿದ್ದಾಳಂತೆ.
ಈ ಸಂಭ್ರಮವನ್ನು ಆಕೆ ಪಟಾಕಿ ಸಿಡಿಸಿ ಆಚರಿಸಿದ್ದಾಳೆ. ಒಂದು ಕೈಯಲ್ಲಿ ಬಣ್ಣಗಳನ್ನು ಉಗುಳುತ್ತಿರುವ ಪಟಾಕಿಯನ್ನು ಹಿಡಿದುಕೊಂಡು ಆಟವಾಡುತ್ತ ಇನ್ನೊಂದು ಕೈಯಲ್ಲಿ ತನ್ನ ಹೊಟ್ಟೆಯನ್ನು ಹಿಡಿದುಕೊಂಡಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಹಲವರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.