Wed. Apr 16th, 2025

Malpe: ನೀರಿನ ಡ್ರಮ್ ಒಳಗೆ ಬಸ್ ಡ್ರೈವರ್ ಮೃತದೇಹ ಪತ್ತೆ – ಡ್ರೈವರ್ ಸಾವು ಕೊಲೆಯೋ..? ಆತ್ಮಹತ್ಯೆಯೋ..? ಎಂಬ ಶಂಕೆ!!

ಮಲ್ಪೆ:(ನ.18) ಬಸ್ ಚಾಲಕನ ಮೃತದೇಹ ಸಂಶಯಾಸ್ಪದ ರೀತಿಯಲ್ಲಿ ನೀರಿನ ಡ್ರಮ್ ಒಳಗೆ ಪತ್ತೆಯಾದ ಘಟನೆ ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ನಡೆದಿದೆ. ಪಾಳೆಕಟ್ಟೆ ನಿವಾಸಿಯಾಗಿರುವ 40 ವರ್ಷದ ಪ್ರಸಾದ್ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದ ಚಾಲಕ.

ಇದನ್ನೂ ಓದಿ: ⭕ಕಲಬುರಗಿ: ಭಕ್ತರನ್ನು ಒಳಗೆ ಬಿಡುವ ವಿಚಾರದಲ್ಲಿ ವಿವಾದ

ಕೊಡವೂರು ಗ್ರಾಮದ ಪಾಳೆಕಟ್ಟೆ ಒಂದನೇ ಕ್ರಾಸ್‍ನಲ್ಲಿ ನೀರು ತುಂಬಿಸಿಟ್ಟಿದ್ದ ಪ್ಲಾಸ್ಟಿಕ್ ಡ್ರಮ್‍ನೊಳಗೆ ಪ್ರಸಾದ್ ದೇಹ ಪತ್ತೆಯಾಗಿದೆ. ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದ ಇವರು, ಸಿಟಿ ಬಸ್ ಚಾಲಕರಾಗಿದ್ದರು.

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಪ್ರಸಾದ್ ಮನೆಯ ಬಳಿ ಇದ್ದ ನೀರು ತುಂಬಿಸಿಟ್ಟಿದ್ದ ಪ್ಲಾಸ್ಟಿಕ್ ಡ್ರಮ್‍ನ ಒಳಗೆ ಸೊಂಟದಿಂದ ಮೇಲ್ಭಾಗದಿಂದ ಹೊರಗೆ ಚಾಚಿಕೊಂಡು ಮೇಲ್ಮುಖವಾಗಿ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಮೃತರ ಕುತ್ತಿಗೆ, ಮುಖ ಭಾಗದಿಂದ ರಕ್ತ ಬರುತ್ತಿದ್ದು, ಮುಖ ಊದಿ ಕೊಂಡಿದೆ. ಇವರ ಸಾವಿನ ಕಾರಣ ತಿಳಿದು ಬಂದಿಲ್ಲ ಎಂದು ದೂರಲಾಗಿದೆ.

ಈ ಬಗ್ಗೆ ಮಲ್ಪೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತ ಪ್ರಸಾದ್ ಅವರ ಸಾವು ಹಲವು ಸಂಶಯಕ್ಕೆ ಎಡೆಮಾಡಿದ್ದು, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ತಕ್ಷಣ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸದಸ್ಯ ಜಯನ್ ಮಲ್ಪೆ ಆಗ್ರಹಿಸಿದ್ದಾರೆ.

ಮೃತದೇಹದ ಹಲವು ಭಾಗಗಳಲ್ಲಿ ಗಾಯಗಳಿದ್ದು ಇದು ಸಂಶಯಕ್ಕೆ ಎಡೆಮಾಡಿ ಕೊಟ್ಟಿದೆ. ಆತ್ಮಹತ್ಯೆ ಎಂದು ಬಿಂಬಿಸಿರುವ ಈ ಘಟನೆ ಹಲವು ಸಂಶಯಾಸ್ಪದ ರೀತಿಯಲ್ಲಿ ಮೃತದೇಹ ಪತ್ತೆಯಾಗಿರುವುದರಿಂದ ಊರಿನ ಸುತ್ತಮುತ್ತ ಭಯದ ವಾತಾವರಣ ನಿರ್ಮಾಣವಾಗಿದೆ.

ಮೃತನ ಮನೆಯವರು ಸೂಕ್ತ ತನಿಖೆ ನಡೆಸಿ ನ್ಯಾಯ ನೀಡುವಂತೆ ಜಿಲ್ಲಾ ಪೋಲೀಸ್ ಅಧೀಕ್ಷಕರಿಗೆ ದಲಿತ ಮುಖಂಡರಾದ ವಾಸುದೇವ ಮುದ್ದೂರು, ಗಣೇಶ್ ನೆರ್ಗಿ, ಹರೀಶ್ ಸಾಲ್ಯಾನ್, ರವಿ ಲಕ್ಷ್ಮೀನಗರ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *