ಬಂಟ್ವಾಳ:(ನ.19) ಹಿಂದು ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿಗಳ ಇಲಾಖೆಗೆ ಒಳಪಟ್ಟ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ನವೆಂಬರ್ 23ರಿಂದ 24ನೇ ಭಾನುವಾರದವರೆಗೆ ವರ್ಷಾವಧಿ ಕೋಲ ಕಾರ್ಯಕ್ರಮಗಳು ನೆರವೇರಲಿವೆ ಎಂದು ಆಡಳಿತಾಧಿಕಾರಿ ತಹಶೀಲ್ದಾರ್ ಡಿ. ಅರ್ಚನಾ ಭಟ್ ತಿಳಿಸಿದ್ದಾರೆ.
ನ. 23 ರಂದು ಸಂಜೆ ಕೊಪ್ಪರಿಗೆ ಮುಹೂರ್ತ, ಬಳಿಕ ಕುಣಿತ ಭಜನೆ, ದೀಪ ಪ್ರಜ್ವಲನೆ, ನೃತ್ಯಾರಾಧನೆ ಬಳಿಕ ನಾಟಕ ಕಾರ್ಯಕ್ರಮಗಳು ನಡೆಯಲಿವೆ. 24ರಂದು ಬೆಳಗ್ಗೆ ನವಕ ಕಲಶಪ್ರದಾನ,
12 ತೆಂಗಿನಕಾಯಿ ಗಣಹೋಮ, ನಾಗತಂಬಿಲ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ, ಭಜನಾ ಸಂಕೀರ್ತನೆ, ಸಂಜೆ ಪಣೋಲಿಬೈಲು ಶ್ರೀಕೃಷ್ಣ ಮಂದಿರದಲ್ಲಿ ಭಜನಾ ಸಂಕೀರ್ತನೆ ಬಳಿಕ ಮೆರವಣಿಗೆ,
ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ವೈವಿಧ್ಯ, ಗೀತ ಸಾಹಿತ್ಯ ಸಂಭ್ರಮ, ಭಂಡಾರದ ಮನೆಯಿಂದ ದೈವಗಳ ಭಂಡಾರ ಬರುವುದು,
ತುಳು ನಾಟಕ ಬಳಿಕ ರಾತ್ರಿ 12ರಿಂದ ವರ್ಷಾವಧಿ ಕೋಲ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯನಿರ್ವಹಣಾಧಿಕಾರಿ ದಿವಾಕರ ಮುಗುಳ್ಯ ತಿಳಿಸಿದ್ದಾರೆ.