ಬಾಂಗ್ಲಾದೇಶ:(ನ.20) ಬಾಂಗ್ಲಾದೇಶದಲ್ಲಿ ಮತ್ತೆ ಮುಸಲ್ಮಾನರ ಅಟ್ಟಹಾಸಕ್ಕೆ ಹಿಂದೂ ಯುವಕ ಬಲಿಯಾಗಿದ್ದಾನೆ. ಪದೇ ಪದೇ ನೆರೆಯ ದೇಶವಾದ ಬಾಂಗ್ಲಾದಲ್ಲಿ ಇಂತಹ ಹತ್ಯೆ ಘಟನೆಗಳೂ ನಡೆಯುತ್ತಲೇ ಇದ್ದೂ, ಹಿಂದೂ ಯುವಕನೊಬ್ಬನನ್ನು ಮೂವರು ಮೌಲ್ವಿಗಳು ಹಿಗ್ಗಾಮುಗ್ಗಾ ಥಳಿಸಿಯೇ ಕೊಲೆ ಮಾಡಿದ್ದಾರೆ.
ಇದನ್ನೂ ಓದಿ: 🟣ಬೆಳ್ತಂಗಡಿ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ತರಬೇತಿ ಕೇಂದ್ರದ ನೂತನ ಸಭಾಭವನ ಉದ್ಘಾಟನೆ
ಮುಸ್ಲಿಂ ಯುವತಿಯ ಜೊತೆಗೆ ಪ್ರೇಮ ಸಂಬಂಧ ಹೊಂದಿದ್ದ ಎಂಬ ಕಾರಣಕ್ಕೆ ಹಿಂದೂ ಯುವಕನನ್ನು ಮೂವರು ಮೌಲ್ವಿಗಳು ಹಿಗ್ಗಾಮುಗ್ಗಾ ಥಳಿಸಿ ಹತ್ಯೆ ಮಾಡಿದ್ದಾರೆ.
ಸದ್ಯ ಬೆಳಕಿಗೆ ಬಂದಿರುವ ವಿಚಾರಗಳ ಪ್ರಕಾರ, ಢಾಕಾದಲ್ಲಿನ ಕಿಶೋರಗಂಜ ಜಿಲ್ಲೆಯ ನಿವಾಸಿಯಾದ ರೀಡಾಯ್ ರವಿ ದಾಸ್ ಎಂಬ ಹಿಂದೂ ಯುವಕನನ್ನು ನವಂಬರ್ 17ರಂದು ಹತ್ಯೆ ಮಾಡಲಾಗಿದೆ.
ಮೂವರು ಮೌಲ್ವಿಗಳು ರವಿ ದಾಸ್ ಎಂಬುವನನ್ನು ಅವನ ಅಂಗಡಿಯಿoದ ಅಪಹರಿಸಿ ನಿಗೂಢ ಸ್ಥಳಕ್ಕೆ ಕರೆದುಕೊಂಡು ಹೋಗಿ ಹತ್ಯೆ ಮಾಡಿದ್ದಾರೆ. ಮೌಲ್ವಿಗಳು ಅವನಿಗೆ ಹಿಗ್ಗಾಮುಗ್ಗಾ ಥಳಿಸಿ ಹಿಂಸಾತ್ಮಕವಾಗಿ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ.
“ಈ ಯುವಕ ಮುಸ್ಲಿಂ ಯುವತಿಯ ಜೊತೆಗೆ ಪ್ರೀತಿಯಲ್ಲಿದ್ದು, ಆಕೆಯನ್ನು ಹಿಂದೂ ಧರ್ಮಕ್ಕೆ ಮತಾಂತರಗೊಳಿಸಲು ಬಯಸಿದ್ದನು ಹಾಗಾಗಿ ನಾವು ಅವನನ್ನು ಸಾಯಿಸಿದ್ದೇವೆ” ಎಂದು ಮೌಲ್ವಿಗಳು ಆರೋಪಿಸಿದ್ದಾರೆ. ಈ ಘಟನೆಯ ನಂತರ ರೀಡಾಯ್ ನ ಕುಟುಂಬದವರು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.