ಬೆಂಗಳೂರು: (ನ.20) ಬೆಂಗಳೂರಿನ ಎಲೆಕ್ಟ್ರಿಕ್ ವಾಹನ ಶೋರೂಂನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಶೋರೂಂನೊಳಗಿದ್ದ ಯುವತಿ ಸಜೀವ ದಹನವಾಗಿ ಹೋಗಿದ್ದಾಳೆ.
ಇದನ್ನೂ ಓದಿ: ⭕ಮಂಗಳೂರು: “ಡ್ರೀಮ್ ಡೀಲ್” ಲಕ್ಕಿ ಡ್ರಾ ವಿಡಿಯೋ ವೈರಲ್
ರಾಜಾಜಿನಗರದ ರಾಜ್ಕುಮಾರ್ ರಸ್ತೆಯ ನವರಂಗ್ ಬಾರ್ ಬಳಿಯ ಗ್ರೀನ್ ಸಿಟಿ ಎಲೆಕ್ಟ್ರಿಕ್ ವಾಹನ ಶೋರೂಂನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ನೋಡ ನೋಡುತ್ತಲೇ ಇಡೀ ಶೋರೂಂ ಹೊತ್ತಿ ಉರಿದಿದೆ.
ಈ ವೇಳೆ ಶೋರೂಂನೊಳಗೆ ಸೇಲ್ಸ್ ಎಕ್ಸಿಕ್ಯುಟಿವ್ ಕೆಲಸ ಮಾಡುತ್ತಿದ್ದ ಯುವತಿ ಪ್ರಿಯಾ ಬೆಂಕಿಗಾಹುತಿಯಾಗಿದ್ದಾಳೆ. ಇನ್ನು ಘಟನೆಯಲ್ಲಿ 3 ಯುವಕರು ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡಿದ್ದಾರೆ. ಪುನೀತ್ ಎಂಬುವವರಿಗೆ ಸೇರಿದ ಈ ಶೋರೂಂನಲ್ಲಿ ಸಂಭವಿಸಿದ ಅಗ್ನಿದುರಂತಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣವಿರಬಹುದು ಎಂದು ಶಂಕಿಸಲಾಗಿದೆ.
ಅಗ್ನಿ ಅವಘಡದಿಂದ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಸಹಕರಿಸುವಂತೆ ಟ್ರಾಫಿಕ್ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.