Wed. Nov 20th, 2024

Sakleshpur: ಶಿರಾಡಿ ಗಡಿ ಚೌಡೇಶ್ವರಿ ಬ್ರಹ್ಮಕಲಶಕ್ಕೆ ಶೀಘ್ರದಲ್ಲಿ ಚಾಲನೆ

ಸಕಲೇಶಪುರ: (ನ.20) ಸಕಲೇಶಪುರ ತಾಲ್ಲೂಕು ಹಾನುಬಾಳು ಹೋಬಳಿ ಶಿರಾಡಿ ಗ್ರಾಮದ ಶ್ರೀ ಚೌಡೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಆಗಿ 32 ವರ್ಷಗಳಾಗಿದ್ದು, ಅಷ್ಟಬಂಧ ಇಲ್ಲದೆ ಅಭಿಷೇಕ ಮಾಡಲು ಆಗುತ್ತಿಲ್ಲ ಎಂಬುದನ್ನು ಅರ್ಚಕರು ಶಾಸಕರ ಗಮನಕ್ಕೆ ತಂದ ತಕ್ಷಣ

ಇದನ್ನೂ ಓದಿ:🔴ಬೆಳ್ತಂಗಡಿ: ವಿಶೇಷ ರೀತಿಯಲ್ಲಿ 50ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಯೋಗೀಶ್ ಆರ್ ಬಿಢೆ

ಸಕಲೇಶಪುರ ತಹಶೀಲ್ಧಾರ್ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ದೇವಸ್ಥಾನಕ್ಕೆ ಕರೆಯಿಸಿ ಸಭೆ ನಡೆಸಿ 2022 ನೇ ಸಾಲಿನಲ್ಲಿ ಅನುಮೋಧನೆಗೆ ಕಳುಹಿಸಿರುವ ಪತ್ರಗಳನ್ನ ಪರಿಶೀಲಿಸಿದರು.

ಮೂರೂ ದಿನಗಳ ಕಾಲ ನಡೆಯುವ ಬ್ರಹ್ಮಕಲಶೋತ್ಸವ ಅದ್ದೂರಿಯಾಗಿ ಆಗಬೇಕು ಎಂದು ತಾಕೀತು ಮಾಡಿದರು. ನೂತನವಾಗಿ ಹೈಟೆಕ್ ಶೌಚಾಲಯ,


ಗ್ರಿಲ್ಸ್ ಕಾಂಪೌಂಡ್, ನೂತನ ಅಡುಗೆ ಮನೆ, ತಡೆಗೋಡೆ, ಸ್ನಾನ ಗೃಹ, ಬಲಿಪೀಠದ ನವೀಕರಣ ವಿವಿಧ ಕಾಮಗಾರಿಗಳು ತಕ್ಷಣ ಆಗಬೇಕು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಹಳ ಮುಖ್ಯವಾಗಿ ದೇವಸ್ಥಾನದ ವಾತಾವರಣ ಸ್ವಚ್ಛತೆಯಿಂದ ಇರಬೇಕು ಎಂದು ದೇವಸ್ಥಾನ ಸಿಬ್ಬಂದಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಹಿಂದೂ ಮುಖಂಡ ರಘು ಸಕಲೇಶಪುರ,

ಶಿವು ಜಿಪ್ಪಿ, ಮಾರನಹಳ್ಳಿ ಹರೀಶ್ ಕುಮಾರ್, ಮುಜರಾಯಿ ಇಲಾಖೆ ಅಧಿಕಾರಿ ಶ್ರೀಮತಿ ಕೃಷ್ಣವೇಣಿ, ಹಾನುಬಾಳು ಲೆಕ್ಕಾಧಿಕಾರಿ ವಂದಿತಾ, ಅರ್ಚಕರಾದ ರಘುಪತಿ ಭಟ್, ಆನಂದ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *


ಇನ್ನಷ್ಟು ಸುದ್ದಿಗಳು