Sat. Nov 23rd, 2024

ಮೇಷ ರಾಶಿ: ನಿಮಗೆ ಅಂದಾಜು ಸಿಗದೇ ಇಂದಿನ ಹಣವು ಅಧಿಕವಾಗಿ ಖರ್ಚಾಗುವುದು. ಯಾವುದಾದರೂ ಒಪ್ಪಂದವನ್ನು ಮಾಡಿಕೊಳ್ಳುವಾಗ ಸ್ವಲ್ಪ ಚಿಂತನೆ ಮಾಡುವುದು ಅವಶ್ಯಕ. ವಾಹನದ ಉದ್ಯೋಗವನ್ನು ಮಾಡುತ್ತಿದ್ದರೆ ಲಾಭ ಗಳಿಸುವ ಸಾಧ್ಯತೆ ಇದೆ. ಇಂದು ನಿಮಗೆ ವೃತ್ತಿಯಲ್ಲಿ ಸಹಕಾರವು ಸಿಗದೇ ತೊಂದರೆಪಡುವಿರಿ. ನಿಮ್ಮ ಮನಸ್ಸು ಯಾವುದರಲ್ಲಿಯೂ ಸ್ಥಿರವಾಗಿ ಇರದೇ ಬಹಳ ಚಂಚಲವಾಗಿ ಇರುವುದು. ಪ್ರಯಾಣವನ್ನು ಮುಂದೂಡುವ ಸಾಧ್ಯತೆ ಇದೆ. ನಿಮ್ಮ ಆಲೋಚನೆಯನ್ನು ದೀರ್ಘವಾಗಿ ಹರಿದುಬಿಡುವಿರಿ. ಮನಸ್ಸು ಬಹಳ ದುರ್ಬಲಗೊಂಡು ನಕಾರಾತ್ಮಕ ಆಲೋಚನೆಯೇ ಹೆಚ್ಚು ಇರುವುದು.

ವೃಷಭ ರಾಶಿ: ನಿಮಗೆ ಆಗಬೇಕಾದ ಕಾರ್ಯವನ್ನು ಯಾರಿಂದಲೋ ಮಾಡಿಸುವಿರಿ. ಇಂದು ನೀವು ಏನನ್ನಾದರೂ ನಿರೀಕ್ಷಿಸಿ ಮಾಡಿದ ಕಾರ್ಯಕ್ಕೆ ಫಲ ಸಿಗದು. ದಿನದ ಆರಂಭದಲ್ಲಿ ಉತ್ಸಾಹವಿರದು. ನಮ್ಮ ಪ್ರಾಮಾಣಿಕತೆಗೆ ಉತ್ತಮ ಯಶಸ್ಸನ್ನು ಪಡೆಯುವಿರಿ. ಅಂದುಕೊಂಡ ಕಾರ್ಯಗಳು ಸುಗಮವಾಗಿ ಸಾಗಲಿದ್ದು ನೆಮ್ಮದಿಯು ಇರಲಿದೆ. ಸಿಟ್ಟಿನ ಮೇಲೆ ನಿಯಂತ್ರಣ ಬೇಕಾಗುವುದು. ನಿಮ್ಮ ಮೇಲೆ‌ ಜವಾಬ್ದಾರಿಗಳು ಅಧಿಕವಾಗಲಿವೆ. ನಿಮ್ಮ ಮೇಲಿಟ್ಟ ನಂಬಿಕೆಯನ್ನು ನೀವು ಹುಸಿಗೊಳಿಸುವಿರಿ. ಉದ್ಯೋಗವು ಸಾಕೆನಿಸಿ ನೀವು ಹೊಸ ಉದ್ಯಮವನ್ನು ಆರಂಭಿಸುವ ಯೋಚನೆ ಇರುವುದು.

ಮಿಥುನ ರಾಶಿ: ಹಿರಿಯರ ಉಪದೇಶವನ್ನು ಕೇಳುವ ಆಸಕ್ತಿ ಇರದು. ಇಂದು ಎಲ್ಲವನ್ನೂ ದೈವಲೀಲೆ ಎಂದು ಹೇಳುವುದಕ್ಕಿಂತ ಮನುಷ್ಯ ಪ್ರಯತ್ನವೂ ಸ್ವಲ್ಪ ಇರದು. ಸೌಂದರ್ಯಕ್ಕೆ ಹೆಚ್ಚು ಮನಸ್ಸು ಕೊಡುವಿರಿ. ವ್ಯಾಪಾರದಲ್ಲಿ ಸಾಧಾರಣ ಆದಾಯವು ಇದ್ದು ನಿಮಗೆ ಸಮಾಧಾನವಾಗುವುದು. ವಾಹನ ಖರೀದಿಯಲ್ಲಿ ಮೋಸವಾಗುವ ಸಂಭವವಿದೆ. ಮಕ್ಕಳ ಪ್ರಗತಿಯು ನಿಮಗೆ ಸಂತೋಷವನ್ನು ಕೊಡುವುದು. ಕಛೇರಿಯ ಕೆಲಸಗಳು ಒತ್ತಡದಿಂದ ಇರಲಿದೆ. ಸ್ವಂತ ಉದ್ಯಮದಲ್ಲಿ ನೀವು ನಷ್ಟವನ್ನು ಅನುಭವಿಸುವಿರಿ. ಉದ್ಯೋಗಕ್ಕೆ ಸಮಯವನ್ನು ಕೊಡಲಾಗದು.

ಕರ್ಕಾಟಕ ರಾಶಿ: ಸಹನೆಯಿಂದ ಕೆಲವರನ್ನು ಗೆಲ್ಲಲು ಸಾಧ್ಯ. ಇಂದು ಮಿತ್ರರು ಸಹಾಯವನ್ನು ಕೇಳುವ ಮೊದಲೇ ನೀವೇ ಸಹಾಯ ಮಾಡುವಿರಿ. ಹಿರಿಯರ ಆಶೀರ್ವಾದವನ್ನು ಪಡೆದು ಕಾರ್ಯದಲ್ಲಿ ಪ್ರವೃತ್ತರಾಗುವಿರಿ. ಜಾಣ್ಮೆಯ ವ್ಯವಹಾರದಿಂದ ನಿಮಗೆ ಲಾಭವಾಗುವುದು. ವಿರೋಧಿಗಳು ನಿಮ್ಮ ಹತ್ತಿರ ಬರಲು ಹೆದರುವರು. ಗೌರವ ಸಿಗುವಲ್ಲಿಗೆ ಮಾತ್ರ ನಿಮ್ಮ ಪ್ರಯಾಣ ಇರುವುದು. ನಿಮಗೆ ಅನೇಕ ಕಾರ್ಯಗಳು ಇರುವುದರಿಂದ ಸಮಯವನ್ನು ಹೊಂದಿಸಿಕೊಳ್ಳಲು ಅನಿವಾರ್ಯವಾಗುವುದು. ಇಂದು ಬೆಳಗಿನ ವಾಯುವಿಹಾರದಿಂದ ಆರೋಗ್ಯವು ಕೆಡಬಹುದು. ರಾಜಕೀಯವಾಗಿ ಬೆಳೆಯಲು ಬಹಳ ಆಸಕ್ತಿಯನ್ನು ತೋರುವಿರಿ.

ಸಿಂಹ ರಾಶಿ: ಆರ್ಥಿಕವಾಗಿ ಸಬಲರಾಗಲು ಗುರಿಯೂ ಹಾದಿಯೂ ಮುಖ್ಯ. ಕೆಲವನ್ನು ಪಡೆಯಲು ಕೆಲವನ್ನು ಬಿಡಬೇಕು. ಆದರೆ ನಿಮ್ಮ ವಿವೇಚನೆಯಿಂದ ಮುಖ್ಯಾಮುಖ್ಯಗಳನ್ನು ತಿಳಿದರೆ ನೆಮ್ಮದಿಯಿಂದ ಇರಬಹುದು. ಇಂದಿನ ನಿಮ್ಮ ಮಾತಿನಿಂದ ದ್ವೇಷವು ಬರಬಹುದು. ಬಹಳ ದಿನಗಳಿಂದ ಉಳಿದಿದ್ದ ಕಾರ್ಯವು ಪೂರ್ಣವಾಗಬಹುದು. ವಿದ್ಯಾದಾನವನ್ನು ಮಾಡಿದವರನ್ನು ಗೌರವಿಸುವಿರಿ. ಭೂಮಿಯ ವ್ಯವಹಾರದಲ್ಲಿ ಮಾತುಕತೆಗಳು ನಡೆಯಲಿದ್ದು ತೀರ್ಮಾನವಾಗದು.

ಕನ್ಯಾ ರಾಶಿ: ನಿಮ್ಮ ಬಳಿಯೇ ಬೆಳಕಿದ್ದರೆ ಕತ್ತಲೆಯಾಗುವ ಭಯವೇ ಇರದು. ಇಂದು ಎಲ್ಲರಿಂದ ನೀವು ದೂರವಾಗುವ ಸ್ಥಿತಿ ಬರುವುದು. ಕೆಟ್ಟ ಆಲೋಚನೆಯಿಂದ ದೂರವಿರುವುದು ಸುಖ. ಹಿರಿಯರಿಗೆ ಬಾಯ್ತಪ್ಪಿ ಮಾತನಾಡಿ ಪಶ್ಚಾತ್ತಾಪಪಡುವಿರಿ. ತೀರ್ಥಯಾತ್ರೆಯ ಸಂದರ್ಭವು ಬರಬಹುದು. ಹಣಕಾಸಿನ ಕೊರತೆಯಿಂದ ಯಾವದೋ ಕಾರ್ಯವನ್ನು ಮಾಡುವಿರಿ. ಎಂದೋ ಮಾಡಿದ ಸಹಾಯವು ಇಂದು ಉಪಯೋಗಕ್ಕೆ ಬರುವುದು. ಎಲ್ಲರ ಜೊತೆ ಅತಿಯಾದ ಸಲುಗೆ ಬೇಡ.

ತುಲಾ ರಾಶಿ: ಕೃತಜ್ಞತೆಯಿಂದ ಉತ್ತಮ‌ ಸಂಬಂಧಗಳು ಏರ್ಪಡುವುದು. ನೀವು ಕಾರ್ಯದಲ್ಲಿ ಎಷ್ಟೇ ಪಳಗಿದರೂ ಎಚ್ಚರಿಕೆಯಿಂದ ಇರುವುದು ಮುಖ್ಯ. ಉತ್ತಮ‌ ದಿನದ ನಿರೀಕ್ಷೆಯಿಂದ ನಿಮಗೆ ಬೇಸರವಾಗಬಹುದು. ಇನ್ನೊಬ್ಬರ ಸಂಧಾನಕ್ಕೆ ಮಧ್ಯಸ್ತಿಕೆಯನ್ನು ವಹಿಸುವಿರಿ. ಕಛೇರಿಯ ವ್ಯವಹಾರವು ನಿಮಗೆ ಸರಿ ಕಾಣಿಸದು. ಹೇಳದೇ ಮೌನದಿಂದ ಇರುವಿರಿ. ಭಾವಾವೇಶಕ್ಕೆ ಸಿಲುಕಿ ನೆಮ್ಮದಿಗಾಗಿ ಚಡಪಡಿಸುವಿರಿ. ಒತ್ತಡವು ನಿಮಗೆ ಯಾವ ವ್ಯವಹಾರಕ್ಕೂ ಆಸಕ್ತಿ ಇರದಂತೆ ಮಾಡಿದೆ‌. ಆರ್ಥಿಕ ಉಳಿತಾಯಕ್ಕೆ ಹೆಚ್ಚಿನ ಗಮನ ನೀಡಿ. ಅವಕಾಶಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳುವಿರಿ.

ವೃಶ್ಚಿಕ ರಾಶಿ: ಸಣ್ಣ ಉದ್ಯೋಗದಲ್ಲಿ ನಿಮಗೆ ಆಸಕ್ತಿ ಕಡಿಮೆಯಾಗುವುದು. ಅಲ್ಪ ಶ್ರಮದಿಂದ ಗಳಿಸುವ ಮಾರ್ಗದ ಅನ್ವೇಷಣೆ ಆಗಲಿದೆ. ನಿಮ್ಮ ಅನುಕೂಲತೆಯನ್ನು ಗಮನಿಸಿಕೊಂಡು ಯಾವುದಾದರೂ ಕಾರ್ಯವನ್ನು ಒಪ್ಪಿಕೊಳ್ಳಿ. ಇಂದಿನ ಕೆಲಸದಲ್ಲಿ ಕೆಲವು ತೊಂದರೆಗಳು ಕಾಣಿಸಿಕೊಂಡರೂ ಅದನ್ನು ಲೆಕ್ಕಿಸದೇ ಮುಂದೆ ಸಾಗುವಿರಿ. ಅಧಿಕಾರಿಗಳಿಗೆ ಒಂದಿಲ್ಲೊಂದು ಒತ್ತಡವು ಬರಬಹುದು. ಗೆಳೆಯರ ಮಾತನ್ನು ಗೌರವಿಸಿದ್ದು ಅವರಿಗೆ ಸಂತೋಷವಾಗಲಿದೆ. ಬಂಧುಗಳು ನಿಮ್ಮ ಹತ್ತಿರ ಆರ್ಥಿಕ ಸಹಾಯವನ್ನು ಕೇಳಿಕೊಂಡು ಬರಬಹುದು.

ಧನು ರಾಶಿ: ಸಿಕ್ಕ ಸಂಪತ್ತಿಗೆ ಸರಿಯಾದ ನ್ಯಾಯ ಒದಗಿಸಿ. ನಿಮ್ಮ ಆತುರದಿಂದ ಕೆಲವನ್ನು ನಿರ್ವಹಿಸಲಾಗದು. ಸಾಲದಿಂದ ನಿಮ್ಮ ದೊಡ್ಡ ಆಲೋಚನೆಗಳು ಸಣ್ಣದಾಗುವುವು. ನಿಮ್ಮ ಭೀತಿಯನ್ನು ನೀವು ಹೊರಹಾಕದಿದ್ದರೂ ಅರಿವಿಗೆ ಬರುವುದು. ಬಂಧುಗಳ ಆರೋಗ್ಯದ ವಿಚಾರಣೆಗೆ ತಿರುಗಾಟ ಮಾಡಬೇಕಾಗುವುದು. ಮನೆಯಲ್ಲಿ ಧಾರ್ಮಿಕ ಕಾರ್ಯಗಳಿಂದ ಶಾಂತಿ ಲಭಿಸುವುದು. ಹಣವನ್ನು ನಿಮ್ಮಿಂದ ಕಿತ್ತುಕೊಳ್ಳಬಹುದು. ಮಕ್ಕಳ ಬಗ್ಗೆ ಅನವಶ್ಯಕ ಅನುಮಾನ ಇರುವುದು. ಓದುವ ಹವ್ಯಾಸವನ್ನು ಹೆಚ್ಚಿಸಿಕೊಳ್ಳುವಿರಿ. ಅಗತ್ಯದ ಖರ್ಚುಗಷ್ಟೇ ಪ್ರಾಧಾನ್ಯವಿರಲಿ.

ಮಕರ ರಾಶಿ: ಮಕ್ಕಳ ಬಗ್ಗೆ ಪಕ್ಷಪಾತ ಮಾಡುವುದು ಬೇಡ. ಇಂದು ಹೊಸ ದಾಂಪತ್ಯದಲ್ಲಿ ಸಂಭ್ರಮವಾಗಲಿದೆ. ನಿಮಗಾದ ಒಳ್ಳೆಯ ಅನುಭವವನ್ನು ಆಪ್ತರ ಜೊತೆ ಹಂಚಿಕೊಳ್ಳುವಿರಿ. ಇಷ್ಟವಾಗದವರು ನಿಮ್ಮೆದುರಿಗೆ ಬರುವಾಗ ಕಣ್ತಪ್ಪಿಸಿಕೊಳ್ಳುವಿರಿ. ದಂಡವನ್ನು ತುಂಬಬೇಕಾದ ಸ್ಥಿತಿಯು ಬರಬಹುದು. ಸ್ವಂತ ವಾಹನದಲ್ಲಿ ಒಂಟಿಯಾಗಿ ಓಡಾಡುವಾಗ ಎಚ್ಚರಿಕೆ ಇರಲಿ. ನಿಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅತ್ತ ಕಡೆ ಹೆಚ್ಚು ಪ್ರಯತ್ನಿಸಿ. ಹಿಂದೆ ಮಾಡಿದ ಕಾರ್ಯಕ್ಕಾಗಿ ಇಂದು ಒಳ್ಳೆಯ ಫಲವು ದೊರಕಿದ ಸಂತೋಷದಲ್ಲಿ ಇರುವಿರಿ.

ಕುಂಭ ರಾಶಿ; ಭಯದಿಂದಲೇ ಎಷ್ಟೋ ವಿಚಾರವನ್ನು ಗೌಪ್ಯವಾಗಿ ಇಡುವಿರಿ. ನೀವು ಇತರರ ದುರ್ಬುದ್ಧಿಯನ್ನು ಅನುಸರಿಸದೇ ಸುಮ್ಮನಿರುವಿರಿ. ಇಂದು ವೃತ್ತಿಯಲ್ಲಿ ಬಂದ ಸಮಸ್ಯೆಯನ್ನು ತಾಳ್ಮೆಯಿಂದ ಗಮನಿಸಿಕೊಂಡು. ಗೆಳೆತನ ಸಾಕು ಎನಿಸಿ ಒಂಟಿಯಾಗಿ ಇರಬೇಕು ಎನಿಸುವುದು. ನಿಮ್ಮದಾದ ಸ್ವಂತಿಕೆಯನ್ನು ಉಳಿಸಿಕೊಳ್ಳಿ. ಮಕ್ಕಳ ವಿಚಾರಕ್ಕೆ ವಾದಗಳು ಆಡಬಹುದು. ನಿಮ್ಮ ವಿರುದ್ಧ ತಂತ್ರಗಳು ನಡೆಯಲಿದ್ದು ನಿಮಗೆ ಗೊತ್ತಾಗದು. ಅನಿರೀಕ್ಷಿತ ಘಟನೆಯು ನಿಮ್ಮನ್ನು ಬೆಚ್ಚಿಬೀಳಿಸುವುದು. ಹೊಸ ವ್ಯಕ್ತಿಯ ಪರಿಚಯು ನಿಮ್ಮ ಬೇಸರವನ್ನು ದೂರ ಮಾಡೀತು.‌ ಹಳೆಯ ಸಾಲಗಳಿಗೆ ನೀವೇ ಮುಕ್ತಿ ಕೊಡಿಸುವಿರಿ.

ಮೀನ ರಾಶಿ: ಸತತ ಪ್ರಾಮಾಣಿಕ ಪ್ರಯತ್ನದಿಂದಲೂ ಗೆಲುವಾಗದಿದ್ದರೆ ಬೇಸರ ಮಾಡಿಕೊಳ್ಳುವುದು ಬೇಡ. ಇಂದು ನಿಮ್ಮ ದೂರಾಲೋಚನೆಯು ಸರಿಯಾದ ಹಾದಿಯಲ್ಲಿ ಇದೆಯೇ ಎಂಬುದನ್ನು ತಿಳಿದುಕೊಳ್ಳಿ. ಆದಾಯದ ಮೂಲಗಳು ಸೊರಗಿಹೋದಂತೆ ಅನ್ನಿಸಬಹುದು. ಕೊಟ್ಟಿದ್ದನ್ನು ಮರಳಿ ಕೊಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಇನ್ನೊಬ್ಬರಿಗೆ ಆಕರ್ಷಿತರಾಗುವಿರಿ. ನಿಮ್ಮ ಶಾಂತ ಮನಸ್ಸಿನಿಂದ ಸಂಕಷ್ಟವನ್ನು ಎದುರಿಸುವಿರಿ. ಆಸ್ತಿ ಖರೀದಿ ವಿಚಾರದಲ್ಲಿ ಎಚ್ಚರಿಕೆ ಇರಲಿ. ಆತುರಾತುರವಾಗಿ ಏನನ್ನೂ ಮಾಡಲು ಹೋಗುವುದು ಬೇಡ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಅನುಮಾನ ಸಂದೇಹ ಬರಬಹುದು.

Leave a Reply

Your email address will not be published. Required fields are marked *