Sat. Nov 23rd, 2024

Qatar: ಕತಾರ್ ನಲ್ಲಿ ಕನ್ನಡಿಗರಿಂದ ಅಭೂತಪೂರ್ವ ಮೆಚ್ಚುಗೆಗೆ ಪಾತ್ರವಾದ “ಭೈರತಿ ರಣಗಲ್”

ಕತಾರ್ :(ನ.22) ಕರುನಾಡ ಚಕ್ರವರ್ತಿ ಡಾ|ಶಿವರಾಜ್ ಕುಮಾರ್ ಅಭಿನಯದ ಬ್ಲಾಕ್ ಬಾಸ್ಟರ್ ಸಿನಿಮಾ ಭೈರತಿ ರಣಗಲ್ ರಿಲೀಸ್ ಆದ ಮೊದಲ ದಿನವೇ ಯಶಸ್ವಿ ಪ್ರದರ್ಶನ ಕಂಡು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ: ⭕ಮೂಡುಬಿದಿರೆ: ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಆತ್ಮಹತ್ಯೆ

ಕತಾರ್‌ ನಲ್ಲಿ ನೆಲೆಸಿರುವ ಕನ್ನಡ ಚಿತ್ರಪ್ರೇಮಿಗಳು ಹಾಗು ಶಿವಣ್ಣನ ಅಭಿಮಾನಿಗಳೂ ಸೇರಿ ಗ್ರಾಂಡ್ ಓಪನಿಂಗ್ ಗೆ ಕಾರಣರಾದರು.

ಈ ಸಂದರ್ಭದಲ್ಲಿ , ಇಂಡಿಯನ್ ಕಲ್ಚರಲ್ ಸೆಂಟರ್ ನ ವೈಸ್ ಪ್ರೆಸಿಡೆಂಟ್ ಸುಬ್ರಮಣ್ಯ ಹೆಬ್ಬಾಗಿಲು, ಐಸಿಬಿಫ್ ವೈಸ್ ಪ್ರೆಸಿಡೆಂಟ್ ನ ದೀಪಕ್ ಶೆಟ್ಟಿ, ಕರ್ನಾಟಕ ಸಂಘ ಕತಾರ್ ನ ಮಾಜಿ ಅಧ್ಯಕ್ಷರು ಮಹೇಶ್ ಗೌಡ, ಪ್ರಸ್ತುತ KSQ ನ ಉಪಾಧ್ಯಕ್ಷರು ರಮೇಶ್ ಗೌಡ,

ಮಾಜಿ ಉಪಾಧ್ಯಕ್ಷರು ಸಂದೀಪ್ ರೆಡ್ಡಿ, ಕತಾರ್ ಅಲ್ಲಿ ಕನ್ನಡ ಸಿನಿಮಾ ಪ್ರಮೋಟರ್ ಪ್ರಭುರಾಜು ಜಗಳೂರು ಅವರು ಹಾಗೂ ಅವರ ತಂಡ ಮತ್ತು ಅಪಾರ ಕನ್ನಡ ಸಿನಿಮಾ ಪ್ರಿಯರು ಸೇರಿ ಒಟ್ಟಿಗೆ ಸೇರಿ ಭೈರತಿ ರಣಗಲ್ ವೀಕ್ಷಣೆ ಮಾಡಿ ಪ್ರೋತ್ಸಾಹಿಸಿ ಸಂಭ್ರಮಿಸಿದರು.

ಸಿನಿಮಾ ಪೋಸ್ಟರ್ ನ ಕೇಕ್ ಮಾಡಿಸಿ ಕಟ್ ಮಾಡುವ ಮೂಲಕ ಕತಾರ್ ನಲ್ಲಿ ಸಿನಿಮಾ ಬಿಡುಗಡೆಗೆ ಚಾಲನೆ ಕೊಡಲಾಯಿತು. 200cm ಉದ್ದದ ಶಿವಣ್ಣ ಕಟೌಟ್ ಜೊತೆಗೆ ಸಿನಿಮಾ ವೀಕ್ಷಿಸಲು ಬಂದ ಎಲ್ಲಾ ಅಭಿಮಾನಿಗಳು ಕಪ್ಪು ಬಣ್ಣದ ಉಡುಗೆ ಧರಿಸಿ ಫೋಟೋ ಕ್ಲಿಕಿಸಿದ್ದು ವಿಶೇಷ ಗಮನ ಸೆಳೆಯುತ್ತಿತ್ತು.

ಒಟ್ಟಾರೆ ಗಲ್ಫ್ ದೇಶಗಳಲ್ಲಿ ತೆರೆಕಂಡ ಮೊದಲ ದಿನವೇ ಕತಾರ್ ದೇಶದಲ್ಲಿ ಅದ್ದೂರಿ ಓಪನಿಂಗ್ ಕನ್ನಡ ಚಿತ್ರ ಭೈರತಿ ರಣಗಲ್, ಅದ್ಭುತ ನಟನೆ, ಅಚ್ಚುಕಟ್ಟಾದ ನಿರ್ದೇಶನ ಮತ್ತು ಕಥೆಗೆ ಪೂರಕವಾದ ಪೋಷಕ ಪಾತ್ರಗಳು ಜೊತೆ ಬ್ಯಾಗ್ರೌಂಡ್ ಮ್ಯೂಸಿಕ್ ಚಿತ್ರದ ಹೈಲೈಟ್ಸ್.

ಕತಾರ್ ನಲ್ಲಿ ಭೈರತಿ ರಣಗಲ್ ವಿಜೃಂಭಣೆಯಿಂದ ತೆರೆಕಾಣಲು ಕಾರಣೀಭೂತರು ಆದ ಶ್ರೀಯುತ ಸುಬ್ರಮಣ್ಯ ಹೆಬ್ಬಾಗಿಲು ಗಲ್ಫ್ ಕನ್ನಡ ಮೂವೀಸ್ ನ ಮುಖ್ಯಸ್ಥರು, ಕಳೆದ 12 ವರ್ಷಗಳಿಂದ ಹಗಲಿರುಳು ಶ್ರಮಿಸಿ ಕನ್ನಡ ಸಿನಿಮಾಗಳನ್ನು ರಿಲೀಸ್ ಮಾಡಿಸಿ ಪ್ರೋತ್ಸಾಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *